FACT CHECK | ಒಂದು ದಿನಕ್ಕೆ ರೂ 1ಲಕ್ಷ ಸಂಪಾದನೆ ಮಾಡುವಂತೆ ಹೇಳಿದ್ರಾ ಸುಧಾಮೂರ್ತಿ?

ಒಂದು ದಿನಕ್ಕೆ ಕನಿಷ್ಠ 1 ಲಕ್ಷ ರೂ.ಗಳನ್ನು ಗಳಿಸಲು ಜನರಿಗೆ ಸಹಾಯ ಮಾಡಲು ಸುಧಾಮೂರ್ತಿ ಯೋಜಿಸಿರುವದ ಕಾರ್ಯಕ್ರಮದ ಬಗ್ಗೆ ಬಳಕೆದಾರರಿಗೆ ಪ್ರಚಾರ ಮಾಡುತ್ತಿದ್ದು, ನಾನು ಮೋಸಗಾರಳಲ್ಲ ಹಾಗಾಗಿ ನೀವು ನನ್ನನ್ನು ನಂಬಬಹುದು ಎಂದು ಹೇಳುತ್ತಿರುವ 3.34 ಸೆಕೆಂಡ್‌ಗಳನ್ನು ಒಳಗೊಂಡಿರುವ ಸುಧಾಮೂರ್ತಿಯವರ ವಿಡಿಯೋವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಜನರು ಕನಿಷ್ಟ ಒಂದುಲಕ್ಷ ರೂಪಾಯಿ ಗಳಿಸಲು ‘ಕ್ವಾಂಟ್ರಮ್‌ ಎಐ’ ಪ್ರೋಗ್ರಾಂನ್ನು ಅಭಿವೃದ್ಧಿ ಪಡೆಸಿದ್ದೇವೆ. ಈ ಯೋಜನೆಯನ್ನು ಉಪಯೋಗ ಮಾಡಿಕೊಳ್ಳಿ. ಇದರ ಪ್ರತಿಯಾಗಿ ನಾನು ಏನನ್ನು ಆಶಿಸುತ್ತಿಲ್ಲ ಹಾಗೂ ನಾನು ಯಾವುದೇ ಮೋಸದ ಭರವಸೆಯನ್ನು ನೀಡುತ್ತಿಲ್ಲ. ಹಾಗೆ ಸಾಫ್ಟ್‌ವೇರ್‌ ಬಗ್ಗೆ ಮಾತನಾಡಿದ ಸುಧಾಮೂರ್ತಿಯವರು, ಕ್ವಾಂಟ್ರಮ್‌ ಎಐ ಪ್ರೋಗ್ರಾಂನ್ನು ಫೋನ್‌ ಅಥವಾ ಕಂಪ್ಯೂಟರ್‌ನಿಂದ ಮಾಡಬಹುದು. ಎಐ ಆಧಾರಿತ ತಂತ್ರಜ್ಞಾನವನ್ನು ಒಳಗೊಂಡ ಕ್ವಾಂಟ್ರಮ್‌ ಎಐ ಪ್ರೋಗ್ರಾಂ ಹಣಕಾಸು ಮಾರುಕಟ್ಟೆಯಲ್ಲಿ, ಪ್ರವೃತ್ತಿಗಳನ್ನು ವಿಶ್ಲೇಷಿಸಲು ಸಹಾಯ ಮಾಡುವುದಲ್ಲದೇ ನಿಮ್ಮ ಯಶಸ್ಸನ್ನು ಸಹ ಖಚಿತ ಪಡೆಸುತ್ತದೆ. ಈ ಸೌಲಭ್ಯವನ್ನು ಪಡೆಯಲು ನೀವು ಮೊದಲು ಕ್ವಾಂಟ್ರಮ್‌ ಎಐ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಅಗತ್ಯ ವಿವರಗಳನ್ನು ನಮೂದಿಸಬೇಕಾಗುತ್ತದೆ. ನಂತರ ಕಂಪನಿಯ ವೈಯಕ್ತಿಕ ವ್ಯವಸ್ಥಾಪಕರು ನಿಮ್ಮನ್ನು ಸಂಪರ್ಕಿಸಿ ನಿಮಗಿರುವ ಎಲ್ಲಾ ಸಂದೇಹಗಳಿಗೆ ಉತ್ತರಿಸಿ ನಿಮಗೆ ಫ್ಲಾಟ್‌ಫಾಮ್‌ಗೆ ಆಕ್ಸಿಸ್‌ ನೀಡುತ್ತಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಸುಧಾ ಮೂರ್ತಿ ಅವರ ಆಡಿಯೋ ಮತ್ತು ವಿಡಿಯೋವನ್ನು ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸಿಕೊಂಡು ತಿರುಚಲಾಗಿದೆ.
ಹಾಗಿದ್ದರೆ ಈ ವಿಡಿಯೋದಲ್ಲಿ ಸುಧಾಮೂರ್ತಿಯವರು ಹೇಳುತ್ತಿರುವಂತೆ ಒಂದು ದಿನಕ್ಕೆ ಒಂದು ಲಕ್ಷ ರೂ ಸಂಪಾದನೆ ಮಾಡುವಂತೆ ಜನರನ್ನು ಉತ್ತೇಜಿಸುತ್ತಿದ್ದಾರೆ ಎನ್ನಲಾಗುತ್ತಿರುವ ವಿಡಿಯೋದ ಅಸಲೀಯತ್ತೇನು ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸುಧಾ ಮೂರ್ತಿ ಅವರ ತುಟಿ ಚಲನೆಗಳು ವೈರಲ್ ವಿಡಿಯೋದ ಆಡಿಯೋ ಭಾಗಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮತ್ತಷ್ಟು ಮಾಹಿತಿಗಾಗಿ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ್‌ನಲ್ಲಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದ ಮೂಲ ವಿಡಿಯೋ ಆವೃತ್ತಿ ಲಭ್ಯವಾಗಿದೆ.
ಸುಧಾ ಮೂರ್ತಿ ಅವರ ಆಡಿಯೋ ಮತ್ತು ವಿಡಿಯೋವನ್ನು ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸಿಕೊಂಡು ತಿರುಚಲಾಗಿದೆ.
ಇದನ್ನು 2017 ರಲ್ಲಿ ‘ಶ್ರೀಮತಿ. ಜಮ್ನಾಬಾಯಿ ನರ್ಸೀ ಕ್ಯಾಂಪಸ್‌ನಲ್ಲಿ ಸುಧಾ ಮೂರ್ತಿ’ ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅವರು ಇದರಲ್ಲಿ ಆಡಿರುವ ಮಾತುಗಳಲ್ಲಿ ಯಾವುದೇ ಹೂಡಿಕೆಯ ಬಗ್ಗೆ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಮೂಲ ವಿಡಿಯೋದಲ್ಲಿ ಸುಧಾ ಮೂರ್ತಿಯವರು, ಮಕ್ಕಳನ್ನು ಆಡಂಬರದಿಂದ ಬೆಳೆಸಿದರೆ ಏನೆಲ್ಲ ತೊಂದರೆ ಆಗುತ್ತದೆ ಎಂಬ ಕುರಿತು ಮಾತನಾಡಿದ್ದಾರೆ. ನಾವು ಮತ್ತಷ್ಟು ನಿಜಾಂಶವನ್ನು ತಿಳಿಯಲು ಕೆಲವು ಕೀವರ್ಡ್‌ಗಳ ಮೂಲಕ ಸರ್ಚ್ ಮಾಡಿದಾಗ, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸುಧಾಮೂರ್ತಿಯವರು ಕ್ವಾಂಟ್ರಮ್‌ ಎಐ ಪ್ರೋಗ್ರಾಮ್‌ ಬಗ್ಗೆ ಪ್ರಚಾರ ಮಾಡುತ್ತಿರುವ ಯಾವುದೇ ಅಧಿಕೃತ ವೆಬ್‌ಸೈಟ್ ಲಭ್ಯವಾಗಿಲ್ಲ.
ಇದಲ್ಲದೆ, ನಾವು ಆಡಿಯೋ ಭಾಗವನ್ನು ಪ್ರತ್ಯೇಕಿಸಿ ಮತ್ತು ಹೈವ್ ಮಾಡರೇಶನ್ ಅನ್ನು ಬಳಸಿಕೊಂಡು ಅದನ್ನು ಪರೀಕ್ಷಿಸಿದ್ದೇವೆ. ಆಗ ಅದು AI- ರಚಿತವಾಗಿದೆ ಎಂದು ಪ್ರಮಾಣೀಕರಿಸಿದೆ. ಆದ್ದರಿಂದ, AI- ರಚಿತವಾದ ಆಡಿಯೋವನ್ನು ವಿಡಿಯೋಗೆ ಡಿಜಿಟಲ್ ಆಗಿ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜನರು ದಿನಕ್ಕೆ 1 ಲಕ್ಷ ರೂಪಾಯಿಗಳನ್ನು ಗಳಿಸಲು ಸಹಾಯ ಮಾಡುವ ಕಾರ್ಯಕ್ರಮವನ್ನು ಸುಧಾಮೂರ್ತಿ ಪ್ರಚಾರ ಮಾಡುತ್ತಿರುವ ವಿಡಿಯೋವನ್ನು ಎಐ-ಮ್ಯಾನಿಪುಲೇಟೆಡ್ ಮೂಲಕ ರಚಿಸಲಾಗಿದ್ದು, ಇದನ್ನು ನೈಜ ವಿಡಿಯೋ ಎಂಬಂತೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights