FACT CHECK | ಮಾಡ್ರನ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ಮೊನಾಲಿಸಾ ಭೋಂಸ್ಲೆ ಎಂದು ಎಡಿಟ್ ಮಾಡಿದ ವಿಡಿಯೋ ಹಂಚಿಕೆ
ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಮೊನಾಲಿಸಾ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಕೊನೆಗೆ ಯೂಟ್ಯೂಬರ್, ಮೀಡಿಯಾಗಳ ಕಾಟ ತಡೆಯಲಾಗದೆ ಕುಟುಂಬಸ್ಥರು ಈಕೆಯನ್ನು ಇಂದೋರ್‌ಗೆ ವಾಪಸ್ ಕರೆಸಿಕೊಂಡಿದ್ದರು. ಅಲ್ಲಿಂದ ಈಕೆ ಈಗ ಮುಂಬೈ ತಲುಪಿದ್ದು, ಥರಹೇವಾರಿ ವಿಡಿಯೋಗಳು, ಫೋಟೋಗಳು ಇಂಟರ್‌ನೆಟ್‌ನಲ್ಲಿ ಪ್ರಸಾರವಾಗುತ್ತಿವೆ
ಇದೀಗ ಮೊನಾಲಿಸಾ ಎಂದು ಹೇಳಿಕೊಂಡು ಫ್ಯಾಶನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ‘monalisakumb84’ ಎಂಬ ಹೆಸರಿನ ಬಳಕೆದಾರರು ಹಳದಿ ಬಣ್ಣದ ಉಡುಪಿನಲ್ಲಿರುವ ಮೊನಾಲಿಸಾ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ನಾನು ಹೇಗೆ ಕಾಣುತ್ತಿದ್ದೇನೆ ಸ್ನೇಹಿತರೇ…’ ಎಂದು ಇದರ ಜೊತೆಗೆ ಬರೆಯಲಾಗಿದೆ.
View this post on Instagram
‘Editing__and__memes‘ ಹೆಸರಿನ ಇನ್ನೋರ್ವ ಇನ್‌ಸ್ಟಾಗ್ರಾಮ್ ಬಳಕೆದಾರರೂ ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಮೊನಾಲಿಸಾ ಇಷ್ಟೊಂದು ಬದಲಾದಳಾ ಎಂಬ ಪ್ರಶ್ನೆಯ ಜೊತೆ ಇದು ಅಚ್ಚರಿ ಹುಟ್ಟಿಸಿದೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದ ವಾಸ್ತವವನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಡ್ರನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಮೊನಾಲಿಸಾ ವಿಡಿಯೋದ ಪ್ರಮುಖ ಫ್ರೇಮ್ ಅನ್ನು ಸ್ಕ್ರೀನ್ ಗ್ರ್ಯಾಬ್ ತೆಗೆದುಕೊಂಡು ಗೂಗಲ್‌ನಲ್ಲಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇನ್‌ಸ್ಟಗ್ರಾಮ್‌ನ ಪೋಸ್ಟ್‌ವೊಂದು ಲಭ್ಯವಾಗಿದೆ.
View this post on Instagram
ಜನವರಿ 3, 2025ರಂದು ಇನ್‌ಸ್ಟಾಗ್ರಾಮ್‌ನಲ್ಲಿ ‘ಹಳದಿ ಉಡುಗೆಯಲ್ಲಿ ವಾಮಿಕಾ ಗಬ್ಬಿ ಅವರ ಅದ್ಭುತ ನೋಟ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದ್ದು,ಇದರ ವಿಡಿಯೋ ಮತ್ತು ಮೊನಾಲಿಸಾ ವಿಡಿಯೋ ಒಂದೇ ರೀತಿಯಲ್ಲಿದೆ. ಆದರೆ ಮುಖ ಮಾತ್ರ ನಟಿ ವಾಮಿಕಾ ಗಬ್ಬಿ ಅವರದ್ದಾಗಿದೆ.
View this post on Instagram
ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ನಟಿ ವಾಮಿಕಾ ಗಬ್ಬಿ ಅವರ ಇನ್‌ಸ್ಟಾಗ್ರಾಮ್ ಪುಟಕ್ಕೆ ಹೋಗಲಾಯಿತು. ಇಲ್ಲಿ ಜನವರಿ 2ರಂದು ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ಇದರಿಂದ ಯಾರೋ ವಾಮಿಕಾ ಅವರ ವಿಡಿಯೋವನ್ನು ಎಡಿಟ್ ಮಾಡಿ ಮೊನಾಲಿಸಾ ಅವರ ಮುಖವನ್ನು ಸೇರಿಸಿದ್ದಾರೆ ಎಂದು ತಿಳಿದು ಬಂತು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮೊನಾಲಿಸಾ ಅವರ ಹಳದಿ ಉಡುಗೆಯ ವಿಡಿಯೋ ಅಸಲಿ ಅಲ್ಲ. ನಟಿ ವಾಮಿಕಾ ಗಬ್ಬಿ ಅವರ ವಿಡಿಯೋವನ್ನು ಎಡಿಟ್ ಮಾಡಿ ಅದಕ್ಕೆ ಮೊನಾಲಿಸಾ ಮುಖವನ್ನು ಸೇರಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಇದು ಮೊನಾಲಿಸಾ ಭೋಂಸ್ಲೆ ಅವರ ನೈಜ ವಿಡಿಯೋ ಅಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದೆಹಲಿಯಲ್ಲಿ BJP ಅಧಿಕಾರಕ್ಕೆ ಬರುತ್ತಿದಂತೆ ಮಹಿಳೆಯರಿಗೆ ನೀಡಲಾಗುತ್ತಿದ್ದ ಉಚಿತ ಬಸ್ ಸೇವೆ ರದ್ದುಪಡಿಸಿದೆಯೇ

