FACT CHECK | ನಾನು ರೈತನ ಮಗ ನಾನು ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ರಾ ಜಗದೀಪ್ ಧನಕರ್‌ ?

ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ಜುಲೈ 21, 2025 ರಂದು ಅನಿರೀಕ್ಷಿತವಾಗಿ ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು . ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ತಮ್ಮ ಆರೋಗ್ಯ ಕಾರಣಗಳನ್ನು ನೀಡಿ, ಅವಧಿ ಪೂರ್ಣಗೊಳ್ಳುವ ಸುಮಾರು ಎರಡು ವರ್ಷಗಳ ಮೊದಲೆ ರಾಜಿನಾಮೆ ನೀಡಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.ಈಗ ಅಂತಹದ್ದೇ ಊಹಾಪೋಹದೊಂದಿಗೆ ವಿಡಿಯೋವೊಂದು ವೈರಲ್‌ ಆಗಿದೆ.

ಇದರಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧನಕರ್‌ ಅವರು ಸರ್ಕಾರಕ್ಕೆ ಹೆದರುತ್ತಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಧನಖರ್, “ ಖರ್ಗೆ ಅವರ ಈ ಹೇಳಿಕೆಯ ಭಾಗವನ್ನು ಅಳಿಸಲಾಗುತ್ತದೆ. ಏಕೆ? ಏಕೆಂದರೆ ಭಾರತದ ರೈತರು ಮತ್ತು ಅವರ ಮಕ್ಕಳು ಯಾರಿಗೂ ಹೆದರುವುದಿಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ಹೆದರುವುದಿಲ್ಲ.” ಎಂದು ಹೇಳುವುದು ಕಂಡು ಬಂದಿದೆ. ಇದೀಗ ಈ ತುಣುಕನ್ನು ಬಳಸಿಕೊಂಡು ಜಗದೀಪ್ ಧನಖರ್ ರಾಜೀನಾಮೆ ನೀಡುವ ಒಂದು ದಿನ ಮೊದಲು ಸಂಸತ್ತಿನಲ್ಲಿ ಈ ಚರ್ಚೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.

ಇದೇರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಅದು ನಿಜವ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ  NDTV ಇಂಡಿಯಾದ ಏಪ್ರಿಲ್ 04, 2025 ರಂದು ಹಂಚಿಕೊಂಡ X ಪೋಸ್ಟ್‌ ಲಭ್ಯವಾಗಿದೆ. ಇದರಲ್ಲಿ ವೈರಲ್‌ ವಿಡಿಯೋಗೆ ಹೊಂದಿಕೆಯಾಗುವ ಅದೇ ರೀತಿಯ ವಿಡಿಯೋ ಕಂಡುಬಂದಿದೆ. ಆದರೆ ಈ ವಿಡಿಯೋ ಇತ್ತೀಚಿನದಲ್ಲ ಮತ್ತು ಜುಲೈ 21, 2025 ರಂದು ಅಧಿಕೃತವಾಗಿ ಪ್ರಾರಂಭವಾದ ಭಾರತೀಯ ಸಂಸತ್ತಿನ 2025 ರ ಮಾನ್ಸೂನ್ ಅಧಿವೇಶನಕ್ಕೆ ಸಂಬಂಧಿಸಿಲ್ಲ ಎಂದು ಖಚಿತವಾಗಿದೆ.

ನಂತರ  ಮತ್ತಷ್ಟು ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ, ಸಂಸತ್ತಿನ ಕಾರ್ಯಕಲಾಪಗಳ ಸಂಪೂರ್ಣ ವಿಡಿಯೋ ಲಭ್ಯವಾಗಿದೆ. ಇದನ್ನು ಏಪ್ರಿಲ್ 03, 2025 ರಂದು CNN News18 ನ YouTube ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಯಿತು . ಅಧಿವೇಶನದ ಸಮಯದಲ್ಲಿ, ಹಲವಾರು ನಾಯಕರು ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ಮಾತನಾಡಿದರು, ನಂತರ ಮಸೂದೆಯ ಮೇಲೆ ಮತ ಚಲಾಯಿಸಿದರು. ವೈರಲ್ ವೀಡಿಯೊ ಕ್ಲಿಪ್ 5:18:02 ಟೈಮ್‌ ಸ್ಟ್ಯಾಂಪ್‌ನಲ್ಲಿ ಕಂಡು ಬಂದಿದೆ. ಈ ವಿಭಾಗದಲ್ಲಿ, ಮಲ್ಲಿಕಾರ್ಜುನ ಖರ್ಗೆ ಮಸೂದೆಯ ಬಗ್ಗೆ ಮಾತನಾಡುವುದನ್ನು ಕಾಣಬಹುದು. ಗಮನಾರ್ಹವಾಗಿ, ಖರ್ಗೆ ಮತ್ತು ಧಂಖರ್ ಇಬ್ಬರೂ ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ಬಟ್ಟೆಗಳನ್ನು ಧರಿಸಿದ್ದಾರೆ, ಇದು ದೃಶ್ಯಾವಳಿಗಳು ಒಂದೇ ದಿನದ ಕಾರ್ಯಕಲಾಪಗಳ ದೃಶ್ಯಾವಳಿ ಎಂದು ದೃಢಪಡಿಸುತ್ತದೆ.

ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾದ ನಂತರ, ಏಪ್ರಿಲ್ 04, 2025 ರಂದು ಬೆಳಗಿನ ಜಾವ 2:30 ರ ಸುಮಾರಿಗೆ ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು . ಇದರ ನಂತರ, ಗೃಹ ಸಚಿವ ಅಮಿತ್ ಶಾ ಅವರು ಫೆಬ್ರವರಿ 2025 ರಲ್ಲಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಕುರಿತು ಚರ್ಚೆಗಾಗಿ ನಿರ್ಣಯವನ್ನು ಮಂಡಿಸಿದರು. ಈ ಅಧಿವೇಶನದಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆಯನ್ನು ಮುಂದಿನ ಸದನದ ಅಧಿವೇಶನಕ್ಕೆ ಮುಂದೂಡಬೇಕೆಂದು ವಿನಂತಿಸಿದರು. ಉಪಾಧ್ಯಕ್ಷ ಜಗದೀಪ್ ಧಂಕರ್ ಇದಕ್ಕೆ ಒಪ್ಪದಿದ್ದಾಗ, ಧಂಕರ್ ಸರ್ಕಾರಕ್ಕೆ ಹೆದರುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಧಂಕರ್ ಅವರು ರೈತನ ಮಗ ಮತ್ತು ಯಾವುದೇ ಸಂದರ್ಭದಲ್ಲೂ ಯಾರಿಗೂ ಹೆದರುವುದಿಲ್ಲ ಎಂದು ಹೇಳಿದರು. ಖರ್ಗೆ ಅವರ ಹೇಳಿಕೆಯನ್ನು ನಂತರ ಅಧಿಕೃತ ದಾಖಲೆಯಿಂದ ತೆಗೆದುಹಾಕಲಾಯಿತು.

ಒಟ್ಟಾರೆಯಾಗಿ ಹೇಳುವುದಾದರೆ, “ನಾನು ರೈತನ ಮಗ, ಯಾರಿಗೂ ಹೆದರುವುದಿಲ್ಲ” ಎಂದು ಜಗದೀಪ್ ಧನ್‌ಕರ್ ಹೇಳುವ ಹಳೆಯ ವಿಡಿಯೋವನ್ನ್ನುನು ಜುಲೈ 2025 ರ ಅವರ ರಾಜೀನಾಮೆಗೆ ಸಂಬಂಧಿಸಿದೆ ಎಂದು ಹಲವರು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್‌ಗೆ ಸಂಬಂಧಿಸಿದ ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights