FACT CHECK | 14 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿ ಸಾವನಪ್ಪಿದ ತಾಯಿ ಎಂಬ ಪೋಸ್ಟ್‌ನ ಅಸಲೀಯತ್ತೇನು?

ನವಜಾತ ಶಿಶುವೊಂದು ತನ್ನ ತಾಯಿಯ ಮುಖಕ್ಕೆ ಅಂಟಿಕೊಂಡಿರುವ ದೃಶ್ಯಗಳಿರುವ ವಿಡಿಯೊವನ್ನು, ಹೆರಿಗೆಯ ಸಂದರ್ಭದಲ್ಲಿ ತಾಯಿ ಸಾವನ್ನಪ್ಪಿದಾಗ, ಅದರಿಂದಾಗಿ ವೈದ್ಯರು ದುಃಖಿತರಾದರು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಈ ಪೋಸ್ಟ್ ನಲ್ಲಿ, “…. ಮದುವೆಯಾದ ಹದಿನಾಲ್ಕು ವರ್ಷಗಳ ಬಳಿಕ ಮಗುವಿಗೆ ಜನ್ಮ ನೀಡಿ ತಾನು ಕೊನೆಯುಸಿರೆಳೆದ ಮಗುವಿನ ತಾಯಿ,ಅವ್ವನ ಕೊರಳಿಗೆ ಆತು ಅಳುವ ಕುಡಿ.ಅಸಹಾಯಕತೆಯಿಂದ ದುಃಖಿಸುತ್ತಿರುವ ವೈದ್ಯರು.” ಎಂದಿದೆ.

ಹೆರಿಗೆಯ ಸಮಯದಲ್ಲಿ ತಾಯಿ ಸಾವನ್ನಪ್ಪಿದಾಗ ವೈದ್ಯರು ದುಃಖಿತರಾದರು ಎಂಬ ವೈರಲ್ ಪೋಸ್ಟ್ ಕಟ್ಟುಕಥೆ

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು  ಸಾಮಾಜಿಕ ಮಾಧ್ಯಮಗಳ  ಬಳಕೆದಾಆರರು ಪೋಸ್‌ಅನ್ನ ಹಂಚಿಕೊಂಡಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ  ನವಜಾತ ಶಿಶುವಿನೊಂದಿಗೆ ಮಹಿಳೆಯ ಚಿತ್ರದ ಮೇಲೆ ವಾಟರ್‌ಮಾರ್ಕ್ ಅನ್ನು ಗುರುತಿಸಲಾಗಿದೆ. ಈ ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  Merve Tiritoğlu Şengünler Photography ಎಂಬ ಫೇಸ್‌ಬುಕ್ ಪುಟದಲ್ಲಿ ಈ ವೈರಲ್ ಫೋಟೋವನ್ನು ಕಂಡುಕೊಂಡಿದ್ದೇವೆ. ಈ ಫೋಟೋವನ್ನು ಡಿಸೆಂಬರ್ 14, 2015 ರಂದು ‘ಅತ್ಯಂತ ಸುಂದರವಾದ ಪುನರ್ಮಿಲನ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.

ಹೆರಿಗೆಯ ಸಮಯದಲ್ಲಿ ತಾಯಿ ಸಾವನ್ನಪ್ಪಿದಾಗ ವೈದ್ಯರು ದುಃಖಿತರಾದರು ಎಂಬ ವೈರಲ್ ಪೋಸ್ಟ್ ಕಟ್ಟುಕಥೆ

ಆ ನಂತರ ಫೋಟೋದಲ್ಲಿರುವ ವ್ಯಕ್ತಿಯ ಬಗ್ಗೆ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಅದು  ozgemetinphotography ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪತ್ತೆಯಾಗಿದೆ. ಈ ಚಿತ್ರವನ್ನು ಸೆಪ್ಟೆಂಬರ್ 5, 2017 ರಂದು ‘azı babalar o kadar güzel yaşıyor ki bu anları. ..Icimden iyi ki baba olmuş diyorum’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ, ಇದರರ್ಥ ‘ಕೆಲವು ತಂದೆಯಂದಿರು ಈ ಕ್ಷಣಗಳಲ್ಲಿ ತುಂಬಾ ಸುಂದರವಾಗಿ ಬದುಕುತ್ತಾರೆ. .. ಅವರು ತಂದೆಯಾದರು ಎಂದು ಹೇಳಲು ನನಗೆ ಸಂತೋಷವಾಗಿದೆ.’ ಎಂದಿದೆ.

ಒಟ್ಟಾರೆಯಾಗ ಹೇಳುವುದಾದರೆ, ಹೆರಿಗೆಯ ಸಮಯದಲ್ಲಿ ತಾಯಿಯ ಮರಣದಿಂದ ವೈದ್ಯರು ದುಃಖಿತರಾದರು ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು. ಚಿತ್ರದಲ್ಲಿರುವ ಮಹಿಳೆ ಸಾಯಲಿಲ್ಲ, ಮತ್ತು ಫೋಟೋದಲ್ಲಿರುವ ವ್ಯಕ್ತಿ ವೈದ್ಯನೂ ಅಲ್ಲ. ಈ ಫೋಟೋಗಳನ್ನು ವಿಭಿನ್ನ ಸಮಯದಲ್ಲಿ ಬೇರೆಯದ್ದೇ ಆದ ಸ್ಥಳಗಳಲ್ಲಿ ತೆಗೆಯಲಾಗಿದೆ ಮತ್ತು ಅದನ್ನು ಒಂದು ಕಟ್ಟುಕಥೆಯ ಮೂಲಕ ಚಿತ್ರಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿಯಂತ ನಾಯಕ ಬೇಕೆಂದು ನೇಪಾಳದವರು ಬಯಸಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights