ಗೋವಾ ಗಡಿಯಲ್ಲಿ ಕೊಂಕಣ ರೈಲ್ವೇ ಸುರಂಗ ಕುಸಿತ: ರೈಲ್ವೇ ಸಂಚಾರ ಬಂದ್‌!

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಳೆದ ಸುಮಾರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕೊಂಕಣ ರೈಲ್ವೇ ಸಾಲಿನ ಪೆರ್ನೆಮ್ ಬಳಿಯ ರೈಲ್ವೇ ಸುರಂಗವು ಕುಸಿದು ಬಿದ್ದಿದೆ.

ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಪೆರ್ನೆಮ್‌ನಲ್ಲಿರುವ ಕೊಂಕಣ ರೈಲ್ವೇ ಸುರಂಗ ಕುಸಿದಿದ್ದು, ಮಂಗಳೂರು, ಕಾರವಾರಗಳಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ ಗೂಡ್ಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಜನ ಸಂಚಾರ ರೈಲುಗಳು ಮೊದಲೇ ರದ್ದಾಗಿದ್ದವು.

ಮಂಗಳೂರಿನಿಂದ ಮುಂಬೈಗೆ ಸಂಪರ್ಕ ರೈಲು ಸಂಪರ್ಕ ಕೊಂಡಿಯಾಗಿರುವ ಕೊಂಕಣ ರೈಲ್ವೇ ಪಶ್ಚಿಮಘಟ್ಟಗಳ ನಡುವೆ ಹಾದುಹೋಗಿದ್ದು, ಭಾರತದಲ್ಲಿಯೇ ಅತಿ ಹೆಚ್ಚು ಮೇಲ್ಸೇತುಗಳನ್ನು ಹೊಂದಿದೆ. ಸುಮಾರು 2,000 ಮೇಲ್ಸೇತುವೆಗಳು ಹಾಗೂ 91 ಸುರಂಗ ಮಾರ್ಗವನ್ನು ಹೊಂದಿರುವ ಕೊಂಕಣ ರೈಲ್ವೇಯ ಗೋವಾ ಗಡಿಯಲ್ಲಿರುವ ಪೆರ್ನೆಮ್‌ ಸುರಂಗ ಕುಸಿದಿದ್ದು, ಸರಕು ಸಾಗಾಣಿಕೆಗೆ ಅಡಚಣೆ ಉಂಟಾಗಿದೆ.

ಭಾರತೀಯ ರೈಲ್ವೇ ಸಿಬ್ಬಂಧಿ ರೈಲ್ವೇ ಕುಸಿದಿರುವ ರೈಲ್ವೇ ಸುರಂವನ್ನು ಪುನಶ್ವೇತನಗೊಳಿಸುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಗೂಡ್ಸ್ ರೈಲು ಸಂಚಾರ ಸ್ಥಗಿತವಾಗಿರಲಿದೆ.

ರಾಜ್ಯದಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲಘುವಾಹನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ನೀರಿನ ಒಳಹರಿವು ಹೆಚ್ಚಾಗಿದೆ.


ಇದನ್ನೂ ಓದಿ:  ತೆಲಂಗಾಣದಲ್ಲಿ ಭಾರೀ ಮಳೆ : ರಸ್ತೆ ಸಂಪರ್ಕ ಕಡಿತ – ತಗ್ಗು ಪ್ರದೇಶಗಳಿಗೆ ನೀರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights