ನಾಳೆಯಿಂದ 4 ದಿನಗಳ ಕಾಲ ಮೆಟ್ರೋ ಗ್ರೀನ್​ಲೈನ್​ ಸಂಚಾರದಲ್ಲಿ ವ್ಯತ್ಯಯ…!

ನೀವು ನಗರದಲ್ಲಿ ಪ್ರಯಾಣಿಸಲು ಹಸಿರು ಮಾರ್ಗದ ಮೆಟ್ರೋ ಬಳಸುತ್ತಿದ್ರೆ ನಾಳೆಯಿಂದ ನಾಲ್ಕು ದಿನ ಸ್ವಲ್ಪ ಪರದಾಡೋ ಪರಿಸ್ಥಿತಿ ಬರಬಹುದು. ಯಾವ್ದಕ್ಕೂ ಮನೆಯಿಂದ ಸ್ವಲ್ಪ ಬೇಗ ಹೊರಟ್ರೇ ತಲುಪಬೇಕಾಗಿರೋ ಸ್ಪಾಟನ್ನ ಕರೆಕ್ಟ್​ ಟೈಮ್​ಗೆ ರೀಚ್ ಆಗಬಹುದು.

ಹೌದು… ನಾಳೆ ಯಿಂದ 4 ದಿನಗಳ ಕಾಲ ಮೆಟ್ರೋ ಗ್ರೀನ್​ಲೈನ್​ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ ಆರ್.ವಿ.ರೋಡ್‌ನಿಂದ ಯಲಚೇನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಸ್ಟಾಪ್‌ ಆಗಲಿದೆ.

ಹಸಿರು ಮಾರ್ಗದ ಆರ್.ವಿ. ರಸ್ತೆ ನಿಲ್ದಾಣ ಮತ್ತು ನಿರ್ಮಾಣ ಹಂತದಲ್ಲಿರೋ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಕಾರಿಡಾರ್ ಕಾಮಗಾರಿ ಹಿನ್ನೆಲೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗ್ತಿದೆ. ನವೆಂಬರ್ 18ರ ಬೆಳಿಗ್ಗೆ 5 ಗಂಟೆಗೆ ನಾಗಸಂದ್ರದಿಂದ ಯಲಚೇನಹಳ್ಳಿಯ ನಡುವೆ ರೈಲು ಸೇವೆಗಳು ಪುನರಾರಂಭಗೊಳ್ಳಲಿವೆ.

ಹಾಗಂತ ಮೆಟ್ರೋ ಇಲ್ಲ ಅನ್ನೋ ಕಾರಣಕ್ಕೆ ನಿತ್ಯ ಸಂಚರಿಸೋ ಪ್ರಯಾಣಿಕರು ಟೆನ್ಷನ್ ಮಾಡ್ಕೊಳ್ಳೋ  ಅವಶ್ಯಕತೆ ಇಲ್ಲ. ಅದಕ್ಕಾಗಿ ಬಿಎಂಆರ್‌ಸಿಎಲ್‌ ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ. ಮೊದಲ ಮೂರು ದಿನ ಮೆಟ್ರೋ ನಿಲ್ದಾಣದಿಂದ್ಲೇ ಬಸ್‌ ವ್ಯವಸ್ಥೆ ಮಾಡಿದೆ ಬಿಎಂಆರ್‌ಸಿಎಲ್‌. ಆರ್.ವಿ.ರಸ್ತೆ ನಿಲ್ದಾಣದಿಂದ ಬೆಳಿಗ್ಗೆ 5.30 ರಿಂದ ರಾತ್ರಿ 11.45ರವರೆಗೆ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಬೆಳಿಗ್ಗೆ 4.45ರಿಂದ ರಾತ್ರಿ 10.30ರವರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ನ.17ರಂದು ಯಲಚೇನಹಳ್ಳಿಯಿಂದ ಬೆಳಿಗ್ಗೆ 6.30ಕ್ಕೆ ಮತ್ತು ಆರ್.ವಿ. ರಸ್ತೆಯಿಂದ ಬೆಳಿಗ್ಗೆ 7.15ಕ್ಕೆ ಬಸ್ ಸೇವೆ ಆರಂಭವಾಗಲಿದೆ. ಈ ಬಿಎಂಟಿಸಿ ಬಸ್ಸುಗಳು ಬನಶಂಕರಿ ಮತ್ತು ಜೆ.ಪಿ. ನಗರದ ಮೆಟ್ರೊ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ ಎಂದು ನಿಗಮ ತಿಳಿಸಿದೆ. ಬದಲಾವಣೆ ಕೇವಲ ಹಸಿರು ಮಾರ್ಗದ ಮೆಟ್ರೋದಲ್ಲಿ ಮಾತ್ರ. ನಾಯಂಡನಹಳ್ಳಿಯಿಂದ ಬೈಯಪ್ಪನಹಳ್ಳಿಗೆ ಸಾಗುವ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights