ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಿ ಸಾವನ್ನಪ್ಪಿದ ಬರ್ತ್ ಡೇ ಬಾಯ್ …
ಶಾಲಾ ವಿದ್ಯಾರ್ಥಿ ಗುಂಡೇಟಿಗೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.
ಗನ್ ಅನ್ನೋದು ಮಕ್ಕಳ ಆಟಿಕೆಯಾಗಿ ಬಿಟ್ಟಿದೆ. ಇನ್ನೂ ಶೂಟ್ ಮಾಡೋದು ಅಂದ್ರೆ ಕೇಳ್ಬೇಕಾ.. ಈಗಿನ ಮಕ್ಕಳಿಗೆ ಅದಿನ್ನು ಸುಲಭವಾದ ವಿಚಾರ. ಪ್ರಾಣ ತೆಗೆಯೋದು ಅಂದ್ರೆ ಫಿಲ್ಮ್ ನಲ್ಲಿ ಕಾರ್ಟೂನ್ ನಲ್ಲಿ ಗೊಂಬೆಗಳು ಪರಸ್ಪರ ಹೊಡೆದಾಡಿಕೊಂಡಷ್ಟೇ ಈಝಿ. ಗನ್ ಕಂಡ್ರೆ ನೂರು ಮೈಲಿ ಓಡೋ ಜನ ಇರುವ ಈ ಕಾಲದಲ್ಲಿ, ಯಾವುದೇ ಭಯವಿಲ್ಲ ಮಕ್ಕಳು ಶೂಟ್ ಮಾಡ್ತಾರೆ ಅಂದ್ರೆ ಹೇಗ್ ಅನ್ಸಬೇಡ. ಇಂಥಹ ಘಟನೆಗಳು ನಡೆಯುತ್ತಿವೆ, ನಡೆದಿದೆ ಕೂಡ. ಅದೆಲ್ಲಿ ಅಂತೀರಾ.. ಈ ಸ್ಟೋರಿ ಓದಿ..
ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಗುಂಡೇಟಿಗೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ತನ್ನ 16ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಿದ್ಧವಾಗಿ ಶಾಲೆಗೆ ಬಂದಿದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ತನ್ನ ಬ್ಯಾಗ್ನಿಂದ ಹ್ಯಾಂಡ್ಗನ್ ಹೊರತೆಗೆದು ತನ್ನ ಕ್ಲಾಸ್ನಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ, ತನ್ನ 16ನೇ ಹುಟ್ಟುಹಬ್ಬದಂದೇ ತಾನು ಸಾಯಬೇಕೆಂದು ತನಗಾಗಿ ಕೂಡ ಒಂದು ಬುಲೆಟ್ ಉಳಿಸಿಕೊಂಡಿದ್ದ ಆ ವಿದ್ಯಾರ್ಥಿ ತನ್ನನ್ನು ಶೂಟ್ ಮಾಡಿಕೊಂಡಿದ್ದು, ಆತನನ್ನು ಕೂಡ ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

