ದೇಶಾದ್ಯಂತ ಗಣಪತಿ ಹಬ್ಬದ ಸಂಭ್ರಮ : ಆಚರಣೆಯ ಸಡಗರದಲ್ಲಿ ಮಿಂದೆದ್ದ ಬಾಲಿವುಡ್ ತಾರೆಯರು
ದೇಶಾದ್ಯಂತ ಗಣಪತಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಅತ್ತ ಬಾಲಿವುಡ್ ತಾರೆಯರು ವಿಘ್ನ ನಿವಾರಕ ಗಣಪನನ್ನು ಮನೆಗೆ ಕರೆತಂದು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ನಟ ವಿವೇಕ್ ಒಬೆರಾಯ್ ಅವರು ಹಬ್ಬಕ್ಕೆ ಒಂದು ದಿನ ಮುಂಚಿತವಾಗಿಯೇ ಗಣಪನನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ.
ಸ್ವತಃ ಶಿಲ್ಪಾಶೆಟ್ಟಿಯವರೇ ಮಾರುಕಟ್ಟೆಗೆ ಹೋಗಿ ಗಣೇಶ ಮೂರ್ತಿಯನ್ನು ಖರೀದಿಸಿ ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಶಿಲ್ಪಾಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ವಿವೇಕ್ ಒಬೆರಾಯ್ ಸಹ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ವರ್ಣರಂಜಿತವಾದ ಗಣೇಶ ಮೂರ್ತಿಯೊಂದಿಗೆ ಇರುವ ತಮ್ಮ ಫೋಟೋವನ್ನು ಹಾಕಿಕೊಂಡಿದ್ದಾರೆ.