ಕೊರೊನಾ ಸಂತ್ರಸ್ತರ ನೆರವಿಗಾಗಿ ಅಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ವುಡ್ ನಟ..!

ಕೊರೊನಾ ಅಬ್ಬರಕ್ಕೆ ಒಂದೆಡೆ ಜನ ಸಾಯುತ್ತಿದ್ದರೆ ಮತ್ತೊಂದೆಡೆ ಕೆಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಊಟ, ಆಹಾರ ಧಾನ್ಯ, ಔಷಧಿಗಳನ್ನು ತಲುಪಿಸುವಂತಹ ನಾನಾ ಕೆಲಸಗಳನ್ನು ಮಾಡುತ್ತಿದ್ದಾರೆ.

ಕೊರೊನಾ 2ನೇ ಅಲೆಯ ಅಬ್ಬರಕ್ಕೆ ತತ್ತರಿಸಿದ ಜನರ ನೆರವಿಗೆ ಕನ್ನಡದ ನಟ ಅರ್ಜುನ್ ಗೌಡ ಮುಂದೆ ಬಂದಿದ್ದಾರೆ. ಕಳೆದ ಮೂರು ದಿನಗಳಿಂದ ಚಾಲಕನಾಗಿ ಉಚಿತವಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಿದ್ದಾರೆ.

ಹೌದು… ರುಸ್ತುಂ ಹಾಗೂ ಯುವರತ್ನ ಸಿನಿಮಾಗಳಲ್ಲಿ ನಟಿಸಿರುವ ಸ್ಯಾಂಡಲ್ ವುಡ್ ನಟ ಅರ್ಜುನ್ ಗೌಡ ಅವರು ಅಂಬ್ಯುಲೆನ್ಸ್ ಚಾಲಕನಾಗಿ ಕೊರೊನಾ ಸೋಂಕಿತರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಅರ್ಜುನ್ ಮೃತರ ಅಂತ್ಯಕ್ರಿಯೆಗೂ ನೆರವಾಗುತ್ತಿದ್ದಾರೆ.

ಅರ್ಜುನ್ ಅವರು ಮಾಡುತ್ತಿರುವ ಜನ ಸೇವೆಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ಷತಾ ಅವರು ಇನ್ಸ್ಟಾಗ್ರಾಂ ಸ್ಟೋರೀಸ್ ನಲ್ಲಿ ಅರ್ಜುನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂಬ್ಯಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡಲು ಅರ್ಜುನ್ ಪಿಪಿಇ ಕಿಟ್ ಧರಿಸಿರುವ ಫೋಟೋಗಳು ಸಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚು ವ್ಯಕ್ತಪಡಿಸಿದ್ದಾರೆ.

 

Spread the love

Leave a Reply

Your email address will not be published. Required fields are marked *