ಟಾಯ್ಲೆಟ್ ಕಮೋಡ್ ನಲ್ಲಿ ಜ್ಯೂಸ್ ತಯಾರಿಸಿ ಫ್ರೆಂಡ್ಸಿಗೆಲ್ಲಾ ಕೊಟ್ಲು…!

ಬೇಸಿಗೆ ಬಿಸಿಲನ್ನು ತಣಿಸಲು ತಣ್ಣನೆಯ ಪಾನಿಯ ಸೇವಿಸಬೇಕು ಅಂತ ಎಲ್ಲರಿಗೂ ಮನಸ್ಸಾಗುತ್ತೆ. ಆದರೆ ಕೆಲ ಬಾರಿ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಜ್ಯೂಸ್ ಪ್ರಿಯರಿಗೆ ಬೇಸರ ತರುತ್ತವೆ. ಅದಕ್ಕೆ ಸಾಕ್ಷಿ ಈ ವೀಡಿಯೋ.

ಸಾಮಾನ್ಯವಾಗಿ ಮಿಕ್ಸಿಯಲ್ಲಿ ಜ್ಯೂಸ್ ಮಾಡುವುದನ್ನ ನೀವೆಲ್ಲರೂ ನೋಡಿರುತ್ತೀರಾ. ಆದರೆ ಟಾಯ್ಲೆಟ್ ನ ಕಮೋಡ್ ನಲ್ಲಿ ಜ್ಯೂಸ್ ಮಾಡುವುದನ್ನ ನೀವು ಎಲ್ಲಾದರೂ ಕೇಳಿದ್ದೀರಾ..? ನೋಡೋದಲ್ಲಿ ಕೇಳಿರೋಕೆ ಸಾಧ್ಯವಿಲ್ಲ ಬಿಡಿ. ಆದರೆ ಈಗ ಇಂತಹ ಒಂದು ವಿಧಾನ ಕೇಳೋದು ಮಾತ್ರವಲ್ಲ ನೋಡಲು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ.

ವಾಕರಿಕೆ ಬರುವ ದೃಶ್ಯದಲ್ಲಿ ವಿದೇಶಿ ಮಹಿಳೆಯೊಬ್ಬಳು ಟಾಯ್ಲೆಟ್ ಕಮೋಡ್ ನಲ್ಲಿ ಹಣ್ಣು, ಐಸ್ ಕ್ರೀಮು ಹಾಗೂ ವಿವಿಧ ಥರದ ಡ್ರಿಂಕ್ಸ್ ಹಾಕಿ ಜ್ಯೂಸ್ ಮಾಡಿದ ವಿಡಿಯೋ ಭಾರೀ ವೈರಲ್ ಆಗಿದೆ.

Woman makes part punch in toilet| Woman makes party drinks in the toilet and serves to her friends. Did they drink it? [WATCH] | Trending & Viral News

ಸುಮಾರು 1 ಕೋಟಿ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ನಾನಾ ಹಣ್ಣುಗಳ ತುಂಡುಗಳು, ಐಸ್ ಕ್ರೀಮು ಹಾಗೂ ಕೂಲ್ ಡ್ರಿಂಕ್ಸನ್ನು ಟಾಯ್ಲೆಟ್ ಕಮೋಡ್ ನಲ್ಲಿ ಈಕೆ ಸುರಿದು ಜ್ಯೂಸ್ ತಯಾರಿಸುತ್ತಾಳೆ.

ಆಮೇಲೆ ಮೆಲ್ಲಗೆ ಫ್ಲಶ್ ಮಾಡಿ ಸೌಟು ಹಾಕಿ ಕಲಕುತ್ತಾಳೆ. ಅಲ್ಲಿಗೆ ಜ್ಯೂಸ್ ರೆಡಿಯಾಗುತ್ತದೆ. ಅಲ್ಲದೇ ಅದನ್ನು ತನ್ನ ಫ್ರೆಂಡ್ಸ್ ಗೆ ಕುಡಿಯಲು ನೀಡುತ್ತಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights