ಡೊನಾಲ್ಡ್ ಟ್ರಂಪ್ ಹತ್ಯೆಗೆ ಮೊತ್ತದ ಭಾರಿ ಇನಾಮು ಘೋಷಿಸಿದ ಇರಾನ್…!
ಖಾಸಿಮ್ ಸೊಲೈಮನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಇರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಲೆಗೆ 575 ಕೋಟಿ ರುಪಾಯಿ ಮೊತ್ತದ ಭಾರಿ ಇನಾಮು ಘೋಷಿಸಿದೆ.
ಖಾಸಿಮ್ ಸುಲೈಮಾನಿ ಅಂತಿಮ ಯಾತ್ರೆಯ ಮೆರವಣಿಗೆ ಸಂದರ್ಭದಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ್ದ ಇರಾನ್ ನ ಅಧಿಕೃತ ಟಿವಿ ಚಾನೆಲ್ ಗಳಲ್ಲಿ ದೇಶದ ಪ್ರತಿಯೊಬ್ಬ ಇರಾನಿ ಪ್ರಜೆ ಒಂದು ಡಾಲರ್ ಕೊಟ್ಟರೂ ಅದನ್ನು ಡೊನಾಲ್ಡ್ ಟ್ರಂಪ್ ಹತ್ಯೆಗೈದವರಿಗೆ ಸೇರಲಿದೆ ಎಂದು ಇರಾನ್ ಘೋಷಿಸಿದೆ ಎಂದು ಅಮೆರಿಕ ಮಿರರ್ ಡಾಟ್ ಕಾಮ್ ವರದಿ ಮಾಡಿದೆ.
ಇರಾನಿನಲ್ಲಿ ಸರಿಸುಮಾರು 80 ಮಿಲಿಯನ್ ಜನ ಸಂಖ್ಯೆಯಿದೆ ಒಬ್ಬಬ್ಬರು 1 ಡಾಲರ್ ನೀಡಿದರೂ ಅದು ಸುಮಾರು (80 ಮಿಲಿಯನ್ ಇರಾನಿಯನ್ ರಿಯಾಲ್ ಆಗಲಿದೆ ) 575 ಕೋಟಿ ರುಪಾಯಿ ಆಗಲಿದೆ ಎನ್ನಲಾಗಿದೆ. ಈ ಹಣವನ್ನು ಟ್ರಂಪ್ ಹತ್ಯೆಗೈಯುವವರಿಗೆ ನೀಡಲಾಗುವುದು ಎಂದು ಘೋಷಿಸಿರುವುದಾಗಿ ವರದಿ ತಿಳಿಸಲಾಗಿದೆ.