ಈಜುಕೊಳದಲ್ಲಿ ಕಾರ್ ಇಳಿಸಿದ ಭೂಪ..! : ಸಖತ್ ಟ್ರೋಲಾದ ಫೋಟೋ
ಫ್ಲಾರಿಡಾದ ವೆಸ್ಟ್ ಪಾಮ್ ಬೀಚ್ ಬಳಿಯ ಸಮುದಾಯ ಈಜುಕೊಳವೊಂದರಲ್ಲಿ ಮುಳುಗಿರುವ ಕಾರೊಂದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ಗೆ ಗುರಿಯಾಗಿದೆ.
‘ವಯಸ್ಕ’ ಚಾಲಕರೊಬ್ಬರು ಕಾರನ್ನು ಚಲಿಸುತ್ತಿದ್ದಾಗ ಸಂದರ್ಭದಲ್ಲಿ ಈ ಕಾರು ಈಜುಕೊಳಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಈ ‘ವಯಸ್ಕ’ ಚಾಲಕ ಯಾರೆಂದು ನೆಟ್ಟಿಗರು ಪ್ರಶ್ನಿಸಿ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.
ಚಾಲಕಿಯ ನಿಯಂತ್ರಣ ತಪ್ಪಿ ಈಜುಕೊಳಕ್ಕೆ ಬಿದ್ದ ಕೂಡಲೇ ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡಲೇ ಹೊರ ಬಂದು ತಮ್ಮ ಪ್ರಾಣ ಉಳಿಸಿಕೊಳ್ಳಲು ಸಫಲರಾಗಿದ್ದಾರೆ.
Thankfully, no one was injured. The adult driver and passenger escaped after accidentally backing into the hotel pool. #westpalmbeach.
Posted by West Palm Beach Police Department on Friday, January 3, 2020

