ಪಶುವೈದ್ಯೆ  ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಸ್ವಾಗತಿಸಿದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ..

ಹೈದರಾಬಾದ್‍ನಲ್ಲಿ ಪಶುವೈದ್ಯೆ  ಅತ್ಯಾಚಾರಿ ಹಂತಕರಿಗೆ ಪೊಲೀಸರು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿರುವುದನ್ನು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸ್ವಾಗತಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿಂದು ವಿಷಯ  ಪ್ರಸ್ತಾಪಿಸಿದ ಅವರು, ಪೊಲೀಸರ ಬಳಿ ಇರುವ ಪಿಸ್ತೂಲು ಪ್ರದರ್ಶನ ವಸ್ತುವಲ್ಲ. ಪೊಲೀಸರಿಗೆ ಪ್ರಾಣಾಪಾಯ ತಂದೊಡ್ಡಿ ಪರಾರಿಯಾಗುತ್ತಿದ್ದ ಆರೋಪಿಗಳಿಗೆ ಗುಂಡು ಹಾರಿಸುವುದು ಅನಿವಾರ್ಯವಾಗಿತ್ತು ಎಂದರು.

ಪಿಸ್ತೂಲು ಪೊಲೀಸರ ಶೋ ಪೀಸ್ ಅಲ್ಲ. ಅನಿವಾರ್ಯವಾದಾಗ ಆರೋಪಿಗಳಿಗೆ ಗುಂಡು ಹಾರಿಸುವುದು ಅನಿವಾರ್ಯ. ಇದು ಸರಿಯಾದ ಕ್ರಮ ಎಂದು ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಹೈದರಾಬಾದ್ ಎನ್‍ಕೌಂಟರ್ ಪ್ರಕರಣವನ್ನು ಬಹುತೇಕ ಮಹಿಳಾ ಸಂಸದರು ಸ್ವಾಗತಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights