ಬಂದಾ ಒಡೆಯಾ : ಧೂಳೆಬ್ಬಿಸಿದ ಚಾಲೆಂಜಿಂಗ್ ಸ್ಟಾರ್ ದರ್ಬಾರ್….

ಈ ವರ್ಷದ ಕನ್ನಡದ ಕೊನೆಯ ಬ್ಲಾಕ್ ಬಸ್ಟರ್ ಎಂದೇ ಹೇಳಲಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯಾ ಸಿನಿಮಾ ರಾಜ್ಯಾದ್ಯಂತ ಒಟ್ಟು 370 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಒಡೆಯಾ ತೆಲುಗು ಸಿನಿಮಾದ ರಿಮೇಕ್ ಆಗಿದ್ದು ತೆಲುಗು ಸಿನಿಮಾಕ್ಕಿಂತಲೂ ಮೀರಿದ ಜನಮನ್ನಣೆ ಪಡೆದಿದೆ.

ಮೊದಲನೇ ದಿನದ ಗಳಿಕೆ 7 ಕೋಟಿಯಾಗಿದೆ. ಚಾಲೆಂಜಿಂಗ್ ಸ್ಟಾರ್ ಸಿನಿಮಾ ಅಂದರೆ ಹಾಗೆ. ಯಾವಾಗಲೂ ನಿರ್ಮಾಪಕರಿಗೆ ಲಾಸ್ ಆಗೋದಿಲ್ಲ. 2019 ರಲ್ಲಿ ಬಿಡುಗಡೆಯಾಗುತ್ತಿರುವ ದರ್ಶನ್ ಅಭಿನಯದ ಸಿನಿಮಾ ಇದಾಗಿದ್ದು ಹ್ಯಾಟ್ರಿಕ್ ಬಾರಿಸಿದೆ. ಆ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದೆ.

ಸಿನಿಮಾ ನೋಡಿದ ಪ್ರತೀ ಒಬ್ಬರು ಒಡಿಯಾ ಸಿನಿಮಾಕ್ಕೆ ಜೈ ಕಾರ ಹಾಕಿದ್ದಾರೆ. ಅಂದುಕೊಂಡಂತೆ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಘಿದ್ದು, ದರ್ಶನ್ ಕಂಪ್ಲೀಟ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. 6 ರಿಂದ ನೂರರವರೆಗೂ ಕೂತು ನೋಡಬಹುದಾದ ಸಿನಿಮಾ ಇದಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights