ಡೆತ್ ನೋಟ್ ಬರೆದು ಯುವತಿ ನದಿ ಬಳಿ ಕಾಣೆ, ಹುಬ್ಬಳ್ಳಿಯಲ್ಲಿ ಪತ್ತೆ….!
ಡೆತ್ ನೋಟ್ ಬರೆದು ಯುವತಿ ನದಿ ಬಳಿ ಕಾಣೆಯಾಗಿ ಹುಬ್ಬಳ್ಳಿಯಲ್ಲಿ ಪತ್ತೆಯಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆಯ ಶಾರದಾಳ ಗ್ರಾಮದ ಜ್ಯೋತಿ ಕಾಣೆಯಾಗಿದ್ದ ಯುವತಿ. ಘಟಪ್ರಭಾ ನದಿ ಸೇತುವೆ ಬಳಿ ಸ್ಕೂಟಿ,ಡೆತ್ ನೋಟ್ ಇಟ್ಟು ಯುವತಿ ಕಾಣೆಯಾಗಿದ್ದಳು. ನದಿಗೆ ಹಾರಿ ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಸಂಬಂಧಿ ಯುವಕನೊಂದಿಗೆ ಎಸ್ಕೆಪ್ ಆಗಿದ್ದಾಳೆ.

ಅನಗವಾಡಿ ಸೇತುವೆ ಬಳಿ ಸ್ಕೂಟಿ,ಡೆತ್ ನೋಟ್ ಇಟ್ಟು ನಿನ್ನೆ ಯುವತಿ ಕಾಣೆಯಾಗಿದ್ದಳು. ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಶಂಕಿಸಿದ್ದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪೊಲೀಸರು ಯುವತಿ ಮೊಬೈಲ್ ಟ್ರೇಸ್ ಮಾಡಿದಾಗ ಯುವತಿ ಜ್ಯೋತಿ ಹುಬ್ಬಳಿಯಲ್ಲಿ ಸಂಬಂಧಿ ಯುವಕ ಪ್ರವೀಣ್ ಜೊತೆ ಪತ್ತೆಯಾಗಿದ್ದಾಳೆ.
ನನ್ನನ್ನು ದಯವಿಟ್ಟು ಕ್ಷಮಿಸಿ, ನಿಮ್ಮ ಋಣ ಮರಿಯಂಗಿಲ್ಲ, ಬದಕಾಕ ಆಗಾಕತಿಲ್ಲ, ಸ್ವಾರಿ, ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿದ್ದ ಯುವತಿ ಕುಟುಂಬಸ್ಥರನ್ನು ದಾರಿತಪ್ಪಿಸಲು ಡೆತ್ ನೋಟ್ ಪ್ರಹಸನವಾಡಿದ್ದಾಳೆ. ಯುವತಿ ಸಿಕ್ಕ ಬಳಿಕ ಈ ನಾಟಕ ಬೆಳಕಿಗೆ ಬಂದಿದೆ.

