ರಾತ್ರೋರಾತ್ರಿ ಹಾಸ್ಟೆಲಿಗೆ ತೆರಳಿ ಸಾಂಬಾರ್ ಟೇಸ್ಟ್ ಮಾಡಿದ ಮೂಡಿಗೆರೆ ಶಾಸಕ…

ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ರಾತ್ರೋರಾತ್ರಿ ಹಾಸ್ಟೆಲಿಗೆ ತೆರಳಿ ಸಾಂಬಾರ್ ಟೇಸ್ಟ್ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಹೆಸ್ಕಲ್ ಗ್ರಾಮದಲ್ಲಿರುವ ಗಿರಿದರ್ಶಿನಿ ಬಾಲಕರ ಹಾಸ್ಟೆಲಿಗೆ ತೆರಳಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಪರೀಕ್ಷೆ ನಡೆಸಿದರು.

ದಿಢೀರ್ ಭೇಟಿ ನೀಡಿ ಅಡುಗೆ ಮನೆಗೆ ಧಾವಿಸಿ ಸಾಂಬಾರ್ ಕುಡಿದು ಆಹಾರ ಪರೀಕ್ಷೆ ಮಾಡಿದಾಗ ಅಡುಗೆಯವರು ಕಕ್ಕಾಬಿಕ್ಕಿಯಾಗಿದ್ದಾರೆ. ಆ ಬಳಿಕ ಆಹಾರ ಸಾಮಾಗ್ರಿಗಳು ಸೇರಿದಂತೆ ಊಟ ಇನ್ನಿತರ ಮೂಲಭೂತ ಸಮಸ್ಯೆಗಳ‌ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾಹಿತಿ ಪಡೆದರು.

ಈ ವೇಳೆ ಊಟ, ವಸತಿ, ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಶಾಸಕರಿಗೆ ದೂರು ನೀಡಿದರು. ಮೊನ್ನೆ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಹಾಸ್ಟೆಲ್ ಗಳ ಅವ್ಯವಸ್ಥೆ ಬಗ್ಗೆ ಚರ್ಚೆ ಆಗಿತ್ತು. ಈ ಹಿನ್ನಲೆ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಪರಿಶೀಲನೆ ಮಾಡಿದ್ರು..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights