ವಜ್ರ ಬಸ್‌ಗಳ ಪ್ರಯಾಣ ದರವನ್ನು ಶೇ.34 ರಷ್ಟು ಕಡಿತಗೊಳಿಸಿದ ಬಿಎಂಟಿಸಿ!
ವಜ್ರ ಬಸ್‌ಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು, ಈ ಬಸ್‌ಗಳಲ್ಲಿನ ಪ್ರಯಾಣ ದರವನ್ನು ಶೇ.34 ರಷ್ಟು ಕಡಿತಗೊಳಿಸಿರುವುದಾಗಿ ಬಿಎಂಟಿಸಿ ಘೋಷಿಸಿದೆ. ದಿನದ ಬಸ್ ಪಾಸ್ ದರವನ್ನು ರೂ 120 ರಿಂದ ರೂ 100 ಕ್ಕೆ ಇಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಅಲ್ಲದೆ, BMTC ಹವಾನಿಯಂತ್ರಿತ 90 ಹೊಸ ವಜ್ರ ಬಸ್‌ಗಳನ್ನು ರಸ್ತೆಗಳಿಸುತ್ತಿದೆ. ಈ ಬಸ್‌ಗಳು ಶುಕ್ರವಾರದಿಂದ 12 ಮಾರ್ಗಗಳಲ್ಲಿ ಸೇವೆ ಸಲ್ಲಿಸಲಿವೆ.
ಪರಿಷ್ಕೃತ ದರಗಳು ಶುಕ್ರವಾರದಿಂದಲೇ ಜಾರಿಗೆ ಬರಲಿವೆ. ಮಾಸಿಕ ಪಾಸ್‌ಗಳನ್ನು 2,000 ರೂ.ನಿಂದ 1,500 ರೂ.ಗೆ ಕಡಿತಗೊಳಿಸಲಾಗುತ್ತಿದ್ದು, ಇದು 2022 ಜನವರಿ 1 ರಿಂದ ಜಾರಿಗೆ ಬರಲಿದೆ.
ಆದಾಗ್ಯೂ, ಸಾಮಾನ್ಯ ಮತ್ತು ವಾಯು ವಜ್ರ ಸೇವೆಗಳ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹಿಸಲು ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಒಂಬತ್ತು ಮಾರ್ಗಗಳಲ್ಲಿ 83 ಹವಾನಿಯಂತ್ರಿತ ವಜ್ರ ಬಸ್‌ಗಳು ಸೇವೆಯಲ್ಲಿವೆ. ಶುಕ್ರವಾರದಿಂದ 12 ಮಾರ್ಗಗಳಲ್ಲಿ 90 ಹೊಸ ವಜ್ರ ಬಸ್‌ಗಳು ಸೇವೆಗಿಳಿಯಲಿವೆ. ಅಸ್ತಿತ್ವದಲ್ಲಿರುವ ಒಂಬತ್ತು ಮಾರ್ಗಗಳಲ್ಲಿ, BMTC 428 ಟ್ರಿಪ್‌ಗಳನ್ನು ನಿರ್ವಹಿಸುತ್ತದೆ ಮತ್ತು ಈಗ ಅವುಗಳನ್ನು 627 ಟ್ರಿಪ್‌ಗಳಿಗೆ ಹೆಚ್ಚಿಸಲಾಗುತ್ತದೆ ಎಂದು BMTC ತಿಳಿಸಿದೆ.
ಹೊಸ ಮಾರ್ಗಗಳು:
V-13: ಶಿವಾಜಿನಗರ ಬಸ್ ನಿಲ್ದಾಣದಿಂದ ಶಾಂತಿನಗರ, ಜಯನಗರ ಮೂಲಕ ಬನಶಂಕರಿ ಟಿಟಿಎಂಸಿಗೆ
V-215H: ಕೆಂಪೇಗೌಡ ಬಸ್ ನಿಲ್ದಾಣದಿಂದ ಲಾಲ್‌ಬಾಗ್ ಮುಖ್ಯ ಗೇಟ್, ಜಯನಗರ, ಜೆಪಿ ನಗರ ಮೂಲಕ ಜಂಬೂ ಸವಾರಿ ದಿನ್ನೆಗೆ
V-250A: ಕೆಂಪೇಗೌಡ ಬಸ್ ನಿಲ್ದಾಣದಿಂದ ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ ಕ್ರಾಸ್ ಮೂಲಕ ಚಿಕ್ಕಬಾಣಾವರಕ್ಕೆ
V-276: ಕೆಂಪೇಗೌಡ ಬಸ್ ನಿಲ್ದಾಣದಿಂದ ಮಲ್ಲೇಶ್ವರಂ, ನ್ಯೂ ಬಿಇಎಲ್ ರಸ್ತೆ, ಬಿಇಎಲ್ ವೃತ್ತದ ಮೂಲಕ ವಿದ್ಯಾರಣ್ಯಪುರಕ್ಕೆ
V-365ಜೆ: ಕೆಂಪೇಗೌಡ ಬಸ್ ನಿಲ್ದಾಣದಿಂದ ಶಾಂತಿನಗರ, ಗೊಟ್ಟಿಗೆರೆ, ಬನ್ನೇರುಘಟ್ಟ ಮೂಲಕ ಜಿಗಣಿ ಎಪಿಸಿ ವೃತ್ತಕ್ಕೆ
V-375ಡಿ: ಬನಶಂಕರಿ ಟಿಟಿಎಂಸಿಯಿಂದ ಉತ್ತರಹಳ್ಳಿ, ಚನ್ನಸಂದ್ರ ಮೂಲಕ ಕೆಂಗೇರಿ ಟಿಟಿಎಂಸಿಗೆ
V-378: ಎಲೆಕ್ಟ್ರಾನಿಕ್ ಸಿಟಿಯಿಂದ ಉತ್ತರಹಳ್ಳಿ, ಕೋಣನಕುಂಟೆ ಕ್ರಾಸ್, ಜಂಬೂ ಸವಾರಿ ದಿನ್ನೆ ಮೂಲಕ ಕೆಂಗೇರಿ ಟಿಟಿಎಂಸಿಗೆ
V-401ಕೆ: ಯಲಹಂಕದಿಂದ ಯಶವಂತಪುರ, ವಿಜಯನಗರ, ನಾಗರಭಾವಿ ವೃತ್ತದ ಮೂಲಕ ಕೆಂಗೇರಿ ಟಿಟಿಎಂಸಿ
V-410ಎಂ: ಯಶವಂತಪುರ ಟಿಟಿಎಂಸಿಯಿಂದ ಗೊರಗುಂಟೆಪಾಳ್ಯ, ಪಾಪರೆಡ್ಡಿಪಾಳ್ಯ, ಮರಿಯಪ್ಪನಪಾಳ್ಯ ಮೂಲಕ ಕೆಂಗೇರಿ ಟಿಟಿಎಂಸಿಗೆ
Read Also: ಗುಜರಾತಿಯೊಬ್ಬ ದೇಶದಾದ್ಯಂತ ಹೋಗಬಹುದಾದರೆ; ಬಂಗಾಳಿ ಏಕೆ ಹೋಗಬಾರದು: ಮಮತಾ ಬ್ಯಾನರ್ಜಿ