ಲಖಿಂಪುರ ಖೇರಿ ಹತ್ಯಾಕಾಂಡ: ಸಚಿವ ಅಜಯ್‌ ಮಿಶ್ರಾ ಒಬ್ಬ ಕ್ರಿಮಿನಲ್‌ ಎಂದು ರಾಹುಲ್‌ ಆಕ್ರೋಶ

ಲಖಿಂಪುರ ಖೇರಿ ಹತ್ಯಾಕಾಂಡ ಘಟನೆ ಸಂಬಂಧಿತ ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ದಾಳಿ ನಡೆಸಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್‌ ಮಿಶ್ರಾ ಅವರು ಒಬ್ಬ ‘ಕ್ರಿಮಿನಲ್‌’. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

‘ಸಚಿವರು ಒಬ್ಬ ಕ್ರಿಮಿನಲ್‌. ಅವರು ರಾಜೀನಾಮೆ ನೀಡಬೇಕು’ ಎಂದು ರಾಹುಲ್‌ ಗಾಂಧಿ ಬುಧವಾರ ಲೋಕಸಭೆಯಲ್ಲಿ ತಿಳಿಸಿದರು. ಈ ವಿಷಯ ಕುರಿತಂತೆ ಉಂಟಾದ ಗದ್ದಲ, ಕೋಲಾಹಲದಿಂದಾಗಿ ಸದನವನ್ನು ಎರಡು ಗಂಟೆಗೆ ಮುಂದೂಡಲಾಯಿತು.

‘ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರನ್ನು ರಕ್ಷಿಸುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದರು.
‘ಲಖೀಂಪುರ ಖೇರಿ ಘಟನೆ ನಿಸ್ಸಂಶಯವಾಗಿ ಪೂರ್ವನಿಯೋಜಿತ ಪಿತೂರಿ ಎಂದು ಹೇಳಲಾಗಿದೆ. ಇದರಲ್ಲಿ ಯಾರ ಮಗ ಭಾಗಿಯಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಸಚಿವರು ರಾಜೀನಾಮೆ ನೀಡಬೇಕೆಂದು ಬಯಸುತ್ತೇವೆ. ಈ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಬಯಸುತ್ತೇವೆ. ಆದರೆ ಪ್ರಧಾನಿ ಅದನ್ನು ನಿರಾಕರಿಸುತ್ತಿದ್ದು, ಬದಲಿಗೆ ಸಚಿವರ ಪರವಾಗಿ ಸಮರ್ಥನೆಗಳನ್ನು ಮಾಡುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಲಖೀಂಪುರ್ ಖೇರಿ ಹತ್ಯಾಕಾಂಡ ಪೂರ್ವನಿಯೋಜಿತ ಕೃತ್ಯ: SIT

‘ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಒಬ್ಬ ಕೊಲೆ ಆರೋಪಿ. ಅವರು ಕೊಲ್ಲುವ ಉದ್ದೇಶದಿಂದಲೇ ರೈತರ ಮೇಲೆ ಕಾರು ಹರಿಸಿದ್ದಾರೆ. ಇದು ಪೂರ್ವಯೋಜಿತ ಪಿತೂರಿಯಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಆಶಿಶ್ ಮಿಶ್ರಾ ಅವರ ತಂದೆ ಅಜಯ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಉತ್ತರ ಪ್ರದೇಶ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. “ನಾವು ವಿಧಾನಸಭೆಯಲ್ಲೂ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತೇವೆ” ಎಂದು ಯುಪಿ ಕಾಂಗ್ರೆಸ್ ಮುಖ್ಯಸ್ಥ ಮತ್ತು ಶಾಸಕ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.

ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸರು ಅಕ್ಟೋಬರ್‌ನಿಂದ ಜೈಲಿನಲ್ಲಿರುವ ಆಶಿಶ್ ಮಿಶ್ರಾ ಮತ್ತು ಇತರ 13 ಆರೋಪಿಗಳ ವಿರುದ್ಧ ‘ನಿರ್ಲಕ್ಷ್ಯದಿಂದ ಸಾವು’ ಬದಲಿಗೆ ‘ಕೊಲೆ ಪ್ರಯತ್ನ’ದಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಲಖಿಂಪುರ ಹತ್ಯಾಕಾಂಡದ ಹಿಂದೆ ಸಚಿವ ಅಜಯ್ ಮಿಶ್ರಾ ಕೈವಾಡ: ಬಿಜೆಪಿ ನಾಯಕ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights