ಚಿಕ್ಕ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ : ಸವಾರರ ದುಸ್ಸಾಹಸ
ಕಾರವಾರಕ್ಕೆ ವಾಹನ ಪಾರ್ಕಿಂಗ್ ಭೂತ ದಿನೆದಿನೆಕ್ಕೂ ಬಿಗಡಾಯಿಸುತ್ತಿದೆ…ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಒಂದೆಡೆ ಆದ್ರೆ ಅದೆ ಚಿಕ್ಕ ರಸ್ತೆಯಲ್ಲಿ ವಾಹನ ಸಂಚಾರ ಮಾಡೋ ಕಿರಿಕಿರಿ ಇನ್ನೊಂದೆಡೆ..ದಿನೆದಿನೆಕ್ಕೂ ಕಾರವಾರ ನಗರದಲ್ಲಿ ವಾಹನ ಸಂಚಾರ ದುಸ್ಸಾಹಸವಾಗುತ್ತಿದೆ..
ಹೌದು ರಸ್ತೆಯಲ್ಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನ…ಇನ್ನೊಂದೆಡೆ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿ ಕಾನೂನು ಉಲ್ಲಂಘನೆ… ಇವೆಲ್ಲ ದೃಶ್ಯ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿನ ವಾಹನ ಪಾರ್ಕಿಂಗ್ ಅಸ್ತವ್ಯಸ್ತತೆ…ಕಾರವಾರ ನಗರದಲ್ಲಿ ಈಗ ಎಲ್ಲಿ ಬೇಕಾದ್ರು ವಾಹನ ನಿಲ್ಲಿಸಬಹುದು ಯ್ಯಾವ ರಸ್ತೆಯಲ್ಲಿ ಹೇಗೆಬೇಕಾದ್ರು ವಾಹನ ನಿಲ್ಲಿಸಬಹುದು ಇಲ್ಲಿ ಯ್ಯಾರು ಕೇಳಲ್ಲ ಹೇಳಲ್ಲ…ಪಾರ್ಕಿಂಗ್ ಜಾಗಕ್ಕೆ ಅಧಿಕೃತ ಜಾಗವಿಲ್ಲದೆ ಇಂತ ಕೆಟ್ಟ ವ್ಯವಸ್ಥೆ ಜಾರಿ ಬಂದು ನಿರಂತರವಾಗಿ ಸಾಗುತ್ತಿದೆ..ಪೋಲಿಸ್ ಅಥವಾ ನಗರಸಭೆ ಈ ಬಗ್ಗೆ ತಲೆ ಕೂಡಾ ಕೆಡೆಸಿಕೊಳ್ಳಲ…ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡಿದ್ರಿಂದ ಚಿಕ್ಕ ರಸ್ತೆಯಲ್ಲೆ ವಾಹನ ಚಲಾಯಿಸುವ ದುಸ್ಸಾಹಸ ವಾಹನ ಸವಾರರದ್ದಾಗಿದೆ…

ವಾಹನ ಪಾರ್ಕಿಂಗ್ ಗೆ ಜಾಗ ಇಲ್ಲ..ರಸ್ತೆಗೆ ಹೊಂದಿಕೊಂಡು ಪಾರ್ಕಿಂಗ್..
ಇನ್ನೂ ರಸ್ತೆ ಪಕ್ಕದ ಪೂಟ್ ಪಾತ್ ನಲ್ಲಿ ಹೂವು ಹಣ್ಣು ಮಾರಾಟದ ವ್ಯಾಪಾರಸ್ಥರು ಜೇಂಡಾ ಹೂಡಿದ್ದು ಇಲ್ಲಿ ಜಾಗ ಕುಲ್ಲಾ ಸಿಗಲ್ಲ..ಇನ್ನೂ ರವಿವಾರದ ಸಂತೆಯಲ್ಲಿ ವ್ಯಾಪಾರವಹಿವಾಟಿಗಾಗಿ ಪಕ್ಕದ ಗೋವಾ ರಾಜ್ಯದಿಂದ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದು ಇನ್ನಷ್ಟು ವಾಹನ ದಟ್ಟಣೆ ಆಗೊತ್ತೆ, ರಸ್ತೆ ಮದ್ಯದಲ್ಲೆ ವಾಹನ ನಿಲ್ಲಿಸಿಟ್ಟು ಹೋದ್ರು ಪೊಲೀಸರು ಚಕಾರ ಮಾತಾಡಲ್ಲ..ಈ ಬಗ್ಗೆ ಪೋಲಿಸ್ ವರಿಷ್ಟಾಧಿಕಾರಿ ಗಳನ್ನ ಕೇಳಿದ್ರೆ ಈಗ ತಮ್ಮ ಗಮನಕ್ಕೆ ಬಂದಿದೆ ಮುಂದೆ ಎಲ್ಲವೂ ಪ್ಲಾನ್ ಮಾಡಿ ಸರಿ ಮಾಡಿಸ್ತಿವಿ ಅಂತಾರೆ…ಅದು ಯ್ಯಾವಗ ಸರಿ ಹೊಗೊತ್ತೋ ಎನ್ನೋದು ಕಾದು ನೋಡಬೇಕು..



ಯ್ಯಾವಗ ಸರಿ ಹೋಗತ್ತೆ ಕಾರವಾರ ಪಾರ್ಕಿಂಗ್ ಸಮಸ್ಯೆ?
ಕಾರವಾರ ಪಾರ್ಕಿಂಗ್ ಸಮಸ್ಯೆ ಇಂದು ನೆನ್ನೆಯದಲ್ಲ ಇಲ್ಲಿ ಕಾನೂನಿನ ಬಗ್ಗೆ ಮಾತಾಡಿದ್ರೆ ಜನರಿಗೆ ಆಗೊಲ್ಲ ಹೀಗಾಗಿ ವಾಹನವನ್ನ ಎಲ್ಲಿ ಬೇಕಾದ್ರು ನಿಲ್ಲಿಸಬಹುದು ಯ್ಯಾರು ಯ್ಯಾರಿಗೂ ಕಾನೂನಿನ ಪಾಠ ಶಿಸ್ತು ಹೇಳಲ್ಲ…ಪೋಲಿಸ್ ಇಲಾಖೆ ಪಕ್ಕಾ ಶಿಸ್ತು ಕ್ರಮ ಕೈಗೊಂಡ್ರೆ ಒಂದು ಹಂತಕ್ಕೆ ಪಾರ್ಕಿಂಗ್ ಸಮಸ್ಯೆ ಸರಿಹಾದಿಗೆ ತರಬಹುದು ಆದ್ರೆ ಇದಕ್ಕೆ ಇಲ್ಲಿನ ನಗರಸಭೆಯವರು ಸಾಥ್ ಕೊಡಲ್ಲ ಪರವಾನಿಗೆ ಇಲ್ಲದ ಕಟ್ಟಡಗಳು ಕಣ್ಣಮುಂದೆ ಆಕಾಶಕ್ಕೆ ಮುತ್ತಿಕ್ಕುವ ಹಾಗೆ ಬೆಳೆದ್ರು ನಗರಸಭೆ ಅಧಿಕಾರಿಗಳು ತಲೆಕೆಡಿಸಿಕೊಳ್ಳಲ ಇದರ ಮದ್ಯೆ ಈ ವಾಹನ ಪಾರ್ಕಿಂಗ್ ವಿಚಾರದಲ್ಲಂತು ಹೋಗ್ಲಿ ಬಿಡಿ ಸ್ವಾಮಿ ಅಂತಾ ನಿರ್ಲಕ್ಷ್ಯ ಮಾಡ್ತಿದ್ದಾರೆ…ಇವರ ನಿರ್ಲಕ್ಷ್ಯದ ಧೋರಣೆಗೆ ಈಗ ಜನಸಾಮನ್ಯರು ಕಾರವಾರ ನಗರದಲ್ಲಿ ವಾಹನ ಚಲಾಯಿಸಲು ಹರಸಾಹಸ ಪಡಬೇಕಾಗಿದೆ..


ಒಟ್ಟಾರೆ ರಾಜ್ಯದಲ್ಲಿ ನಗರಗಳು ಅತಿ ವೇಗದಲ್ಲಿ ಅಭಿವೃದ್ಧಿ ಹಾದಿ ಹಿಡಿದ್ರೆ ಕಾರವಾರದಲ್ಲಿ ವಾಹನ ಪಾರ್ಕಿಂಗ್ ಗೆ ಜಾಗದಕೊರತೆ ಎದ್ದಿದ್ದು ವಾಹನ ಸವಾರರು ವಾಹನಪಾರ್ಕಿಂಗ್ ಜೊತೆ ವಾಹನ ಚಲಾಯಿಸೋಕೆ ಹೈರಾಣಾಗಿದ್ದಾರೆ…ಆದಷ್ಟು ಬೇಗ ಈ ಅಸ್ತವ್ಯಸ್ತತೆ ವ್ಯವಸ್ಥೆಗೆ ಸರ್ಜರಿ ಮಾಡಬೇಕಿದೆ..

