“ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾಗೆ ಪ್ರಚೋದನೆ ನೀಡಿದವರಿಗೆ ಶಿಕ್ಷೆ ಆಗಬೇಕು”

ಅಮೂಲ್ಯಾಗೆ ಪ್ರಚೋದನೆ ನೀಡಿದ್ದಾರೆ. ಹಾಗಾಗಿ ಆಕೆ ಈ ರೀತಿಯ ಹೇಳಿಕೆ ನೀಡಿದ್ದಾಳೆ. ನಿನ್ನೆ ಮಾತಿನಿಂದ ಬಚಾವಾಗೋ ಸ್ಥಿತಿ ಇಲ್ಲ. ಸ್ವಲ್ಪ ದಿನದಲ್ಲೇ ಸಿಕ್ಕಿ ಬೀಳುತ್ತಾಳೆ ಎಂದುಕೊಂಡಿದ್ದೆ  ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಶಿವಪುರದಲ್ಲಿ ಅಮೂಲ್ಯ ತಂದೆ ಹೇಳಿಕೆ ನೀಡಿದ್ದಾರೆ.

ನಿನಗೆ ವಿಧಿಯೇ ಪಾಠ ಕಲಿಸುತ್ತೆ ಎಂದಿದ್ದೆ. ನನ್ನ ಮನಸ್ಸಿಗೆ ಬೇಜಾರು ಮಾಡಿದವರು ಸಾವನ್ನಪ್ಪಿದ್ದಾರೆ. ಕೆಲವರಿ ಚಾಪೆಯಲ್ಲೇ ಕೊಳೆಯುತ್ತಿದ್ದಾರೆ. ಮಗಳು ಕೂಡ ಅದನ್ನೇ ಅನುಭವಿಸುತ್ತಿದ್ದಾಳೆ.

 

ಜೊತೆಗೆ ಇತ್ತೀಚೆಗೆ ಕೋಲಾರದ ಸಿಎಎ ವಿರೋದಿ ಪ್ರತಿಭಟನೆಯಲ್ಲು ಪಾಕಿಸ್ತಾನ ಪರ ಘೋಷಣೆ ಹಾಕಿದ್ದವರ ಪರ ಮಾತನಾಡಿದ್ದಳು ಅಮೂಲ್ಯ.
ಪೆಬ್ರವರಿ ೧೬ ರಂದು ಕೋಲಾರ ನಗರದ ಮಿಲ್ಲತ್ ನಗರದ ಮೈದಾನದಲ್ಲಿ ನಡೆದಿದ್ದ ಸಿಎಎ ವಿರೋದಿ ಹೋರಾಟದಲ್ಲಿ ಪಾಕಿಸ್ತಾನ ಪರ ಹುಬ್ಬಳ್ಳಿ ಕೆಎಲ್ಇ ವಿಧ್ಯಾರ್ಥಿಗಳು ಘೋಷಣೆ ಹಾಕಿದ್ದ ಹಿನ್ನಲೆ ಪರೋಕ್ಷವಾಗಿ ಬೆಂಬಲ ನೀಡಿದ್ದಳು.

ನಾನು ಪಾಕಿಸ್ತಾನ ಪರ ವಿರೋಧ ಹೇಳಿಕೆಗೆ ಏನೂ ಹೇಳೊಲ್ಲ.  ದೇಶದಲ್ಲಿ ಒಂದು ಸಮಾಜಕ್ಕೆ ನೋವಾಗಿದೆ, ಸಿಟ್ಟಿನಿಂದ , ನೋವಿಂದ ಘೋಷಣೆ ಹಾಕಿರಬಹುದು ಎಂದ ಬಂಧಿತರ ಪರ ಮಾತನಾಡಿದ್ದಳು.

ಆರ್ಟಿಕಲ್ ೩೭೦ ರದ್ದು ನಂತರ ಕಾಶ್ಮೀರ ಸತ್ತು ಹೋಗಿದ್ಯಾ. ಹಿಂಸೆಯಿಂದ ಜನರಲ್ಲಿ ಆತಂಕ ಮೂಡಿಸುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ. ಕಾಶ್ಮೀರಿಗರಿಗೆ ಭಾರತಕ್ಕೆ ಸೇರಬೇಕಾ, ಅಥವಾ ಪಾಕಿಸ್ತಾನಕ್ಕೆ ಸೇರಬೇಕಾ ಎಂದು ತೀರ್ಮಾನಿಸೊ ಹಕ್ಕು ಅವರಿಗಿದೆ ಎಂದು ಬೆಂಬಲಿಸಿದ್ದಳು.

ಆದರೆ ಭಾರತ ನಮ್ಮದೆಂದು ಅವರನ್ನ ಭಾರತ ಕಟ್ಟಿಹಾಕಿದೆ. ದೇಶದಲ್ಲಿ ಒಂದು ಸಮಾಜದ ವಿರುದ್ದ ಷಡ್ಯಂತ್ರ ನಡೆಯುತ್ತಿದೆಎಂದು ಕೋಲಾರದ ಸಿಎಎ ವಿರೋದಿ ಪ್ರತಿಭಟನೆಯಲ್ಲಿ ಹೇಳಿಕೆ ನೀಡಿದ್ದಳು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights