ಸೇವಾಲಾಲ್ ಜಯಂತಿಯಲ್ಲಿ ಹಾಲಿ-ಮಾಜಿ ಶಾಸಕರ ಭರ್ಜರಿ ಸ್ಟೆಪ್…!

ಇತ್ತೀಚೆಗೆ  ಜನಪ್ರತಿನಿಧಿಗಳು ಸಾರ್ವಜನಿಕವಾಗಿ ನೃತ್ಯ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ದೃಶ್ಯ ವೈರಲ್ ಆಗಿದೆ.

ಹೌದು.. ಸೇವಾಲಾಲ್ ಜಯಂತಿಯಲ್ಲಿ ಹಾಲಿ-ಮಾಜಿ ಶಾಸಕರ ಸ್ಟೆಪ್ ಹಾಕಿದ್ದಾರೆ. ಅಭಿಮಾನಿಗಳೊಂದಿಗೆ ಒಂದೇ ಕಾರ್ಯಕ್ರಮದಲ್ಲಿ ಪ್ರತ್ಯೇಕ ಹಾಲಿ-ಮಾಜಿ ಶಾಸಕರು ಸ್ಟೇಪ್ ಹಾಕಿದ್ದು ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.

ಬಂಜಾರ ಸಮಾಜದಿಂದ ನಿನ್ನೆ ಬಾಗಲಕೋಟೆ ಜಿಲ್ಲೆ  ಇಲಕಲ್ ನಗರದಲ್ಲಿ ಸೇವಾಲಾಲ್ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರನ್ನು ಹೆಗಲ ಮೇಲೆ ಹೊತ್ತು ಅಭಿಮಾನಿಗಳು ಕುಣಿದಿದ್ದಾರೆ.

ಫೆ,20ರಂದು ಇಲಕಲ್ ನಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲೂ ಸ್ಟೇಪ್ ಹಾಕಿದ್ದ ಶಾಸಕ ದೊಡ್ಡನಗೌಡ ಪಾಟೀಲ್ , ನಿನ್ನೆಯ ಕಾರ್ಯಕ್ರಮದಲ್ಲೂ ಸ್ಟೆಪ್ ಹಾಕಿದ್ದಾರೆ.

ಪರ್ಯಾಯವಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಜೊತೆ ಅಭಿಮಾನಿಗಳು ಸ್ಟೆಪ್ ಹಾಕಿರುವ ವಿಡಿಯೋ ಸದ್ಯ ಭಾರೀ ಸದ್ದು ಮಾಡಿದೆ.

ಫೆಬ್ರುವರಿ 24ರಂದು ವಿಜಯಪುರದಲ್ಲಿ ಸಂವಿಧಾನ ಉಳಿಸಿ,ದೇಶ ರಕ್ಷಿಸಿ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಇಲಕಲ್ ದಿಂದ ವಿಜಯಪುರದವರೆಗೆ ಪಾದಯಾತ್ರೆ ಆರಂಭಗೊಂಡಿದೆ.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಇಲಕಲ್ ನಗರದಿಂದ ವಿಜಯಪುರದವರೆಗೆ 120ಕಿಲೋ ಮೀಟರ್ ಪಕ್ಷಾತೀತವಾಗಿ ಮುಖಂಡರು, ಕಾರ್ಯಕರ್ತರು ಪಾದಯಾತ್ರಿ ಹೊರಟಿದ್ದಾರೆ.  ಸಿಎಎ,ಎನ್ ಆರ್ ಸಿ, ವಿರೋಧಿಸಿ ಪಾದಯಾತ್ರೆಯಲ್ಲಿ ಉಸ್ಮಾನಗಣಿ ಹುಮ್ನಾಬಾದ್, ಜಬ್ಬಾರ ಕಲಬುರ್ಗಿ ಸೇರಿದಂತೆ 150ಕ್ಕೂ ಹೆಚ್ಚು ಜನ್ರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights