ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಿಗ್ ಬಾಸ್ ಜೋಡಿ : ನಿವೇದಿತಾ ವರಿಸಿದ ಚಂದನ್ ಶೆಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ 5 ನಲ್ಲಿ ಬೀ ಕೂಲ್ ಆಗಿ ಜರ್ನಿ ಶುರು ಮಾಡಿದ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಸ್ನೇಹ ಪ್ರೀತಿಗೆ ತಿರುಗಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಹೌದು.. ನಿನ್ನೆ ಆರಕ್ಷತೆ ಮುಗಿಸಿದ ಜೋಡಿಯೂ ಮೈಸೂರಿನ ಹಿನಕಲ್ ಸ್ಪೆಕ್ಟ್ರಾ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸ ನಡೆದಿದೆ. ಮಂಟಪದಲ್ಲಿ ನಿವೇದಿತಾಗೆ ಚಂದನ್ ಮಾಂಗಲ್ಯ ಧಾರಣೆ ಮಾಡಿದ್ದಾರೆ. 8.15 ರಿಂದ 9 ಗಂಟೆ ರವರೆಗಿನ ಮೀನಾ ಲಗ್ನದಲ್ಲಿ ಶುಭ ಕಾರ್ಯ ಜರುಗಿದೆ. ನೂತನ ದಂಪತಿಗಳಿಗೆ ಧಾರೆ ಎರೆದ ಬಂಧುಗಳು ಹಾಗೂ ಸ್ನೇಹಿತರು ಶುಭ ಕೋರಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್, ಆಪ್ತರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ನಿವೇದಿತಾಗೆ ಚಂದನ್ ತಾಳಿ ಕಟ್ಟಿದ್ದಾರೆ.ಬೇಬಿ ಡಾಲ್ ಮೆರೂನ್ ಕಲರ್ ಗೌನ್ನಲ್ಲಿ ಮಿಂಚಿದರೆ, ಚಂದನ್ ಕೂಡ ಅದೇ ಕಲರ್ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರು.