ಸಿಎಎ ಪ್ರತಿಭಟನಕಾರರ ಬ್ಯಾನರ್ ಪಕ್ಕದಲ್ಲೇ ಕುಲದೀಪ್ ಸೆಂಗಾರ್ ಮತ್ತು ಚಿನ್ಮಯಾನಂದ ಬ್ಯಾನರ್ ಹಾಕಿದ ಎಸ್ ಪಿ

ಸಿ ಎ ಎ ಪ್ರತಿಭಟನಕಾರರ ಫೋಟೋಗಳಿರುವ ಬ್ಯಾನರ್ ನನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಅಲಹಬಾದ್ ಮತ್ತು ಸುಪ್ರೀಮ್ ಕೋರ್ಟ್ ಕೆಂಗಣ್ಣಿಗೆ ಉತ್ತರ ಪ್ರದೇಶ ಸರ್ಕಾರ ಗುರಿಯಾಗಿತ್ತು. ಅದೇ ಜಾಗದಲ್ಲಿ ಮಾಜಿ ಬಿಜೆಪಿ ಶಾಸಕ ರೇಪ್ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಅವರ ಫೋಟೋಗಳನ್ನು ಒಳಗೊಂಡಿರುವ ಬ್ಯಾನರ್ ನನ್ನು ಸಮಾಜವಾದಿ ಪಕ್ಷದ ಮುಖಂಡ ಪ್ರದರ್ಶಿಸಿರುವ ಘಟನೆ ನಡೆದಿದೆ.

“ರಾಜ್ಯದ ಅಪರಾಧಿಗಳು ಇವರು. ಇವರ ಬಗ್ಗೆ ಎಚ್ಚರಿಕೆಯಿಂದ ಇರಿ” ಎಂದು ಕಪ್ಪು ಬಣ್ಣದ ಬ್ಯಾನರ್ ನಲ್ಲಿ ಬಿಳಿ ಅಕ್ಷರಗಳಿಂದ ಬರೆಯಲಾಗಿದೆ. “ಪ್ರತಿಭಟನಕಾರರ ಖಾಸಗಿತನವನ್ನು ಗೌರವಿಸದೆ ಹೋದಮೇಲೆ ಮತ್ತು ಹೈಕೋರ್ಟ್ ಹಾಗು ಸುಪ್ರೀಂ ಕೋರ್ಟ್ ಆದೇಶ ಕೊಟ್ಟ ಮೇಲೂ ಅವರು ಹಾಕಿದ್ದ ಬ್ಯಾನರ್ ಗಳನ್ನು ಯೋಗಿ ಸರ್ಕಾರ ತೆಗೆಯದೆ ಹೋದರೆ ಈಗ ಇದನ್ನು ತೆಗೆದುಕೊಳ್ಳಲಿ” ಎಂದು ಸಮಾಜವಾದಿ ಪಕ್ಷದ ವಕ್ತಾರ ಐ ಪಿ ಸಿಂಗ್ ಟ್ವೀಟ್ ಮಾಡಿದ್ದಾರೆ. ನಾವು ಹಾಕಿರುವ ಭಿತ್ತಿಚಿತ್ರ ಮಹಿಳೆಯರು ಎಚ್ಚರಿಕೆ ಇಂದ ಇರಲಿ ಎಂದು ಸಾರ್ವಜನಿಕರ ಹಿತಾಸಕ್ತಿಗೋಸ್ಕರ  ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಪೊಲೀಸರು ರಾತ್ರೋರಾತ್ರಿ ಈ ಬ್ಯಾನರ್ ನನ್ನು ತೆರವುಗೊಳಿಸಿದ್ದಾರೆ ಎಂದು ತಿಳಿಯಲಾಗಿದೆ. “ಪೊಲೀಸರು ಇದೇ ತುರ್ತನ್ನು ಮಹಿಳೆಯರ ಸುರಕ್ಷತೆಗೆ ತೋರಿಸಿದ್ದರೆ, ಉತ್ತರಪ್ರದೇಶ ನಂಬರ್ 1, ಅಪರಾಧಿಗಳ ರಾಜ್ಯ ಆಗುತ್ತಿರಲಿಲ್ಲ. ಉತ್ತರ ಪ್ರದೇಶ ಸರ್ಕಾರ ಅಪರಾಧಿಗಳ ಜೊತೆಗೆ ಇದೆ. ಯೋಗಿ ಸರ್ಕಾರ ಸಂಪೂರ್ಣ ಬೆತ್ತಲೆಗೊಂಡಿದೆ” ಎಂದು ಕೂಡ ಸಿಂಗ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights