ಭಾತದಲ್ಲಿಯೇ ಕೊರತೆ: ಕೋವಿಡ್-19 ಸುರಕ್ಷ ಕವಚಗಳನ್ನು ಸರ್ಬಿಯಾಗೆ ರಫ್ತು ಮಾಡಿದ್ದಕ್ಕೆ ಆರೋಪ-ಆಕ್ರೋಶ
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಭಾರತದ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಕವಚಗಳ ಕೊರತೆಯಾಗಿರುವ ಸಮಯದಲ್ಲಿ ಭಾರತ 90 ಟನ್ ಗಳಷ್ಟು ಆರೋಗ್ಯ ಸಲಕರಣೆಗಳನ್ನು ಸರ್ಬಿಯಾಗೆ ರಫ್ತು ಮಾಡಿರುವ ಸಂಗತಿ ಜನರಲ್ಲಿ ಆಕ್ರೋಶ ತರಿಸಿದೆ. ಸರ್ಬಿಯಾದ ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ (ಯು ಎನ್ ಡಿ ಪಿ) ಇದರ ಬಗ್ಗೆ ಟ್ವೀಟ್ ಮಾಡಿದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ. ಈ ವಿಷಯದ ಬಗ್ಗೆ ಮಾಹಿತಿ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿರುವುದಾಗಿ ಕೂಡ ಸುದ್ದಿವಾಹಿನಿ ವರದಿ ಮಾಡಿದೆ.
“ಭಾರತದಿಂದ ಬೆಲ್ಗ್ರೇಡ್ ಗೆ ಎರಡನೆ ಬೋಯಿಂಗ್ 747 ಕಾರ್ಗೋದಲ್ಲಿ 90 ಟನ್ ಆರೋಗ್ಯ ಸುರಕ್ಷತಾ ಸಲಕರಣೆಗಳು ಇಂದು ಬಂದಿಳಿದವು. ಸರ್ಬಿಯನ್ ಸರ್ಕಾರ ಕೊಂಡಿರುವ ಈ ಅಮೂಲ್ಯವಾದ ಉತ್ಪನ್ನಗಳ ಪ್ರಯಾಣದ ಖರ್ಚನ್ನು ಯೂರೋಪಿಯನ್ ಯೂನಿಯನ್ ನೋಡಿಕೊಂಡಿದೆ. ಯು ಎನ್ ಡಿ ಪಿ ಸರ್ಬಿಯಾ ಈ ಹಾರಾಟ ತುರ್ತಾಗಿ ಆಗುವಂತೆ ನೋಡಿಕೊಂಡಿದೆ” ಎಂದು ಯು ಎನ್ ಡಿ ಪಿ ಟ್ವೀಟ್ ಮಾಡಿದೆ.
The 2nd cargo Boeing 747 with 90t of medical protective equipment landed from India to Belgrade today. The transportation of valuable supplies purchased by @SerbianGov has been fully funded by the #EU while @UNDPSerbia organized the flight & ensured the fastest possible delivery. pic.twitter.com/pMZqV7dwTg
— UNDP in Serbia (@UNDPSerbia) March 29, 2020
ಈ 90 ಟನ್ ಆರೋಗ್ಯ ಸಲಕರಣೆಗಳಲ್ಲಿ 50 ಟನ್ ಕೈಗವಚಗಳು ಇದ್ದದ್ದು ತಿಳಿದುಬಂದಿದೆ. ಇದಲ್ಲದೆ ಮುಖಗವಚ ಮತ್ತಿತರ ಸುರಕ್ಷತಾ ಕವಚಗಳು ಸೇರಿದ್ದವು ಎಂದು ತಿಳಿದಿದೆ. ಈ ಹಿಂದೆ ಮಾರ್ಚ್ 29 ರಂದು ಮತ್ತೊಂದು ಕಾರ್ಗೊದಲ್ಲಿ 35ಲಕ್ಷ ಸರ್ಜಿಕಲ್ ಕೈಗವಚಗಳನ್ನು ಕಳಿಸಲಾಗಿತ್ತು ಎಂದು ಕೊಚ್ಚಿ ವಿಮಾನ ನಿಲ್ದಾಣದ ವಕ್ತಾರ ಹೇಳಿದ್ದಾರೆ.
ಇದರ ಬಗ್ಗೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆದುಕೊಂಡಿದೆ. ನಮಗೆ ಕೊರತೆ ಇರುವಾಗ ಸೈಬೀರಿಯಾಗೆ ಸುರಕ್ಷತಾ ಕವಚಗಳನ್ನು ಕಳಿಸಿರುವುದು ಕ್ರಿಮಿನಲ್ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.
What is this happening Mr Prime Minister @narendramodi ? While Frontline Indian Health workers are struggling for protective equipment we are supplying Serbia.@airindiain to fly out Germans & 90 Tonnes of Protective Medical Equipment to Serbia. Are we nuts ? This is CRIMINAL. https://t.co/JY4ixlnJkz
— Manish Tewari (@ManishTewari) April 1, 2020
ಇಲ್ಲಿಯವರೆಗೂ ಸುರಕ್ಷತಾ ಕವಚ ಇಲ್ಲದೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಸುಮಾರು 100 ವೈದ್ಯರನ್ನು ಭಾರತದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಹಲವು ರಾಜ್ಯಗಳ ವೈದ್ಯರು ಸುರಕ್ಷತಾ ಕವಚಗಳ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ.
ಇಂತಹ ಸಮಯದಲ್ಲಿ ಸುರಕ್ಷತಾ ಕವಚಗಳನ್ನು ರಫ್ತು ಮಾಡಿರುವ ನಡೆ ಸಾಮಾನ್ಯ ಜನಕ್ಕೂ ಆಕ್ರೋಶ ತರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆಕ್ರೋಶವನ್ನು ಪ್ರದರ್ಶಿಸಿದ್ದಾರೆ.

