Corona donation : ಅಜೀಂ ಪ್ರೇಮ್‌ಜೀ ಸಮೂಹದಿಂದ ಕೊರೋನಾ ಕದನಕ್ಕೆ 1000 ಕೋಟಿ..

ಸಾಮಾಜಿಕ ದತ್ತಿಗೆ ಹೆಸರಾಗಿರುವ ವಿಪ್ರೋ ಸಮೂಹ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಶನ್ ಕೊರೋನಾ ವಿರುದ್ಧದ ಸಮರಕ್ಕೆ ಸಾವಿರ ಕೋಟಿ ರೂಗಳ ನೆರವು ನೀಡಲು ಮುಂದಾಗಿದೆ. ದೇಶ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು ಎಲ್ಲರೂ ಕೈಜೋಡಿಸಬೇಕಿದೆ. ಈ ಹಿನ್ನೆಲೆಯಲ್ಲಿ 1125 ಕೋಟಿ ರೂಗಳನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಮಿಸಲಿಡುವುದಾಗಿ ಕಂಪೆನಿ ತಿಳಿಸಿದೆ.

ಅಜೀಂ ಪ್ರೇಮ್‌ಜೀ ಫೌಂಡೇಶನ್ ಮತ್ತು ವಿಪ್ರೋ ಸಮೂಹ ಸಂಸ್ಥೆಗಳು ಜಂಟಿಯಾಗಿ ಕೊರೋನಾ ವಿರುದ್ಧದ ಕೆಲಸಗಳಿಗೆ ಈ ಹಣಕಾಸು ನೆರವು ಒದಗಿಸಲಿವೆ. ಕೊರೋನಾ ಸಮರಕ್ಕೆ ಕಯಯತ್ತಿ ದೇಣಿಗೆ ನೀಡುವಂತೆ ಮತ್ತು ಸರಕಾರಕ್ಕೆ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಬೆನ್ನಲ್ಲಯೇ ಹಣದ ಮಹಾಪೂರವೇ ಹರಿದುಬರುತ್ತಿದೆ.

ಪ್ರಧಾನಿ ಪರಹಾರ ನಿಧಿ, ಪಿ ಕೇರ್‍ಸ್, ಸಿಎಂ ಪರಿಹಾರ ನಿಧಿ ಹೀಗೆ ಸರಕಾರದ ಪರಿಹಾರ ನಿಧಿಗಳಿಗೆ ದಾನಿಗಳು ಹೇರಳವಾಗಿ ದೇಣಿಗೆ ನೀಡುತ್ತಿದ್ದಾರೆ. ದೇಶದ ಬಹುದೊಡ್ಡ ಉದ್ದಿಮೆಗಳಾದ ಟಾಟಾ (1.5 ಸಾವಿರ), ರಿಲಯನ್ಸ್ (500 ಕೋಟಿ) ದೇಶಾನಿಗೆ ಘೋಷಿಸಿದ್ದರ ಬೆನ್ನಲ್ಲಿಯೇ ವಿಪ್ರೋ ಸಹ ತನ್ನ ಸಾಮಾಜಿಕ ಕಳಕಳಿ ಮೆರೆದಿದೆ.

ಕೇವಲ ಉದ್ದಿಮೆಗಳಲ್ಲದೇ ಹಲವಾರು ಸಮಗ-ಸಂಸ್ಥೆಗಳು, ಸಂಸದರು, ಸಮಾಜದ ಗಣ್ಯರನೇಕರು ಪ್ರಧಾನಿ ಪರಿಹಾರ ನಿಧಿಗೆ ಯಥೇಚ್ಛವಾಗಿ ದಾನ ಮಾಡಿದ್ದಾರೆ. ಮುರು ದಿನಗಳ ಹಿಮದೆ ಆರಂಭಿಸಲಾದ ಹೊಸದಾದ ಪರಿಹಾರ ನಿಧಿಗೆ ಈಗಾಗಲೇ 2.5 ಸಾವಿರ ಕೊಟಿಗೂ ಮಿಕ್ಕು ಹಣ ಸಂದಾಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights