ಡಿಫರೆಂಟಾಗಿ ದರೋಡೆ ಮಾಡಿದವರನ್ನ ಡಿಫರೆಂಟಾಗಿ ಹಿಡಿದ ಪೊಲೀಸರು…!

ಮೈಸೂರು ಜಿಲ್ಲೆ ನಂಜನಗೂಡು ಠಾಣೆ ಪೊಲೀಸರ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದ ದರೋಡೆಕೊರರ ತಂಡವೊಂದು ತನ್ನ ಡಿಫರೆಂಟ್‌ ಸ್ಟೈಲ್‌ನಿಂದ ಕಳ್ಳತನ ಮಾಡುತ್ತ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ರು. ಕಳ್ಳರು ಚಾಪೇ ಕೇಳಗೆ ತೂರಿದ್ರೆ ಪೊಲೀಸರು ರಂಗೋಲಿ ಕೇಳಗೆ ತೂರಿ,ಅವರಂತೆಯೇ ಡಿಫರೆಂಟ್ ಐಡಿಯಾ ಮೂಲಕವೇ ಅವರನ್ನ ಸೆರೆ ಹಿಡಿದಿದ್ದಾರೆ. ಸಣ್ಣ ಸಣ್ಣ ಕಳ್ಳತನಗಳಿಂದ ದೊಡ್ಡ ಸಮಸ್ಯೆ ತಂದಿಟ್ಟಿದ್ದ ಕಳ್ಳರು ಇದೀಗ ಜೈಲಿನಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.‌

ಅವರೇಲ್ಲರಿಗು 19 ಹರೆಯದ ಸಣ್ಣ ವಯಸ್ಸು, ಐಶಾರಾಮಿ ಜೀವನದ ಆಸೆಗೆ ಬಿದ್ದು ಹಣ ಮಾಡಲು ಕಂಡುಕೊಂಡ ಮಾರ್ಗ ಮಾತ್ರ ದೊಡ್ಡದು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಐವರ ತಂಡವೊಂದು ಮಾಡುತ್ತಿದ್ದ ಕೃತ್ಯಕ್ಕೆ ಇಡೀ ನಂಜನಗೂಡಿನ ಜನರು ಒಂಟಿಯಾಗಿ ಮುಂಜಾನೆ ಸಂಚಾರ ಮಾಡೋದನ್ನೆ ಬಿಟ್ಟಿದ್ರು. ಒಂದು ಹಂತದಲ್ಲಿ ಪೊಲೀಸರಿಂದಲೂ ಇವರನ್ನ ಹಿಡಿಯೋಕೆ ಆಗೋಲ್ವೇನು ಅಂದುಕೊಂಡಿದ್ದರು.ಆದ್ರೆ ಪೊಲೀಸರು ಮಾಡಿದ ಆ ಡಿಫರೆಂಟ್ ಐಡಿಯಾದಿಂದ ಇದೀಗಾ ಆ ಗ್ಯಾಂಗ್ ಪೊಲೀಸರ ಅತಿಥಿಗಳಾಗಿದ್ದು ನಂಜನಗೂಡು ಪಟ್ಟಣದ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟಕ್ಕು ಆ ಗ್ಯಾಂಗ್ ಮಾಡ್ತಾ ಇದ್ದ ಕೃತ್ಯ ಏನು ಅಂದ್ರೆ ಮುಂಜಾನೆ ದರೋಡೆ.

ಹೌದು ಚೈನ್ ಸ್ನ್ಯಾಚಿಂಗ್ ಆಗಿದೆ… ಮೊಬೈಲ್ ಕಿತ್ಕೊಂಡ್ರು…ಹಣ ಕಿತ್ಕೊಂಡ್ರು ಓಡಿಹೋದ್ರು… ಹೀಗೆ ದಿನ ಒಂದಿಲ್ಲೊಂದು ದೂರುಗಳು ಇತ್ತೀಚೆಗೆ ನಂಜನಗೂಡಿನ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಗೆ ಬರ್ತಾನೆ ಇತ್ತು. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಈ ಕೃತ್ಯ ಮಾಡ್ತಾ ಇರೋದು ಯಾರು ಏನು ಅಂತ ಬಾರಿ ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ಕಳ್ಳರ ಬಗ್ಗೆ ಸುಳಿವೆ ಸಿಕ್ತ ಇರಲಿಲ್ಲ.ಅದ್ರಲ್ಲು ಈ ಕೃತ್ಯವನ್ನು ಮುಂಜಾವಿನಲ್ಲೆ ನಡೆಸ್ತಿದ್ದಿದ್ದು ಆರೋಪಿಗಳನ್ನ ಹಿಡಿಯೋಕೆ ಸ್ವಲ್ಪ ಕಷ್ಟವು ಆಗಿತ್ತು. ಕೊನೆಗೆ ಕಳ್ಳರು ಬೆಳಗಿನಜಾವ ಕಳ್ಳತನ ಮಾಡಿತ್ತಿದ್ದ ಒಂದು ಸಾಮಾನ್ಯ ಸಾಕ್ಷಿಯೊಂದಿಗೆ ಪೊಲೀಸರ ಇಡೀ ತಂಡ ಮಾರು ವೇಷ ತೊಟ್ಟು ತಾವೇ ಸಾರ್ವಜನಿಕರ ಸೋಗಿನಲ್ಲಿ ರಸ್ತೆಗಿಳಿದ್ರು. ಮುಂಜಾನೆ ನಾಲ್ಕುಗಂಟೆ ವೇಳೆಯಲ್ಲೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಅದೆ ಸಂದರ್ಭದಲ್ಲಿ ಪೊಲೀಸರು ಮಾರು ವೇಷ ಹಾಕಿ ಆ ಐನಾತಿ ಗ್ಯಾಂ‌ಗ್ ಬಲೆ ಬಿಸಿದಾಗ ಮುಂಜಾನೆ ದರೋಡೆಕೊರರ ತಂಡ ಖಾಕಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಈ ಐವರ ಗ್ಯಾಂಗ್ ನಂಜನಗೂಡು ಪೊಲೀಸರ ಕೈಗೆ ಸಿಕ್ಕಿಬಿಳ್ತಿದ್ದಂತೆ ಆ ಮುಂಜಾನೆ ದರೋಡೆಗಳಿಗೆ ಬ್ರೇಕ್ ಬಿದ್ದಿದೆ. ನಂಜನಗೂಡು ಪಟ್ಟಣದ ವರುಣ(19),ಸೈಯದ್ ಆಯಾಜ್(19), ಹಾಗೂ ಜಯಂತ್(19) ಎಂಬ ಆರೋಪಿಗಳ ಜೊತೆ ಇಬ್ಬರು ಬಾಲಪರಾಧಿಗಳು(ಹೆಸರು ಹೇಳುವಂತಿಲ್ಲ) ಜನರನ್ನ ಸುಲಿಗೆ ಮಾಡುತ್ತಿದ್ದ ಕಿಲಾಡಿ ಕಳ್ಳರು ಅಂತ ಗೊತ್ತಾಗಿದೆ. ಸದ್ಯ ಐವರನ್ನ ಬಂಧಿಸಿರುವ ಪೊಲೀಸರು ಮೂವರನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಇಬ್ಬರು ಬಾಲಾಪರಾಧಿಗಳನ್ನ ಬಾಲಮಂದಿರಕ್ಕೆ ರವಾನೆ ಮಾಡಿದ್ದಾರೆ.‌

ಕಳ್ಳತನದಲ್ಲು ಕಿಲಾಡಿತನ ಪ್ರಯೋಗ ಸಿಕ್ಕಿಹಾಕಿಕೊಳ್ಳದಿರಲು ಮಾಡ್ತಿದ್ರು ಕದ್ದ ಬೈಕ್ ಉಪಯೋಗ

ಈ ಐನಾತಿ ಗ್ಯಾಂಗ್ ಕಳ್ಳತನ ಮಾಡಲು ಒಂದು ಮಾಸ್ಟರ್ ಐಡಿಯಾ ಸಿದ್ದಪಡಿಸಿಕೊಂಡಿದ್ದರು, ಪ್ರತಿಬಾರಿ ಅದೆ ಮಾದರಿಯಲ್ಲೆ ದರೋಡೆ ಮಾಡ್ತಿದ್ದ ಗ್ಯಾಂಗ್‌ ಹಣ ಮೊಬೈಲ್ ಕದಿಯಲು ಮೊದಲು ಬೈಕ್ ಕದಿಯುತ್ತಿದ್ರು. ಆ ಬೈಕ್ ಬಳಸಿ ಬೆಳಗಿನ ಜಾವ ಮಧ್ಯಮ ವರ್ಗ ಅಥವ ವ್ಯಾಪಾರಸ್ತರನ್ನ ಸುಲಿಗೆ ಮಾಡ್ತಿದ್ರು, ಕೃತ್ಯ ಮುಗಿದ ನಂತರ ಕದ್ದ ಬೈಕ್‌ನ್ನ ಕದ್ದ ಸ್ಥಳದಲ್ಲೆ ನಿಲ್ಲಿಸಿ ಪರಾರಿಯಾಗ್ತಿದ್ರು. ಒಂದು ವೇಳೆ ಬೈಕ್‌ ನಂ‌ನಲ್ಲಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡ್ರೆ ನಾವು ಜೈಲಿಗೆ ಹೋಗೋಲ್ಲ ಅನ್ನೋ ಭ್ರಮೆಯಲ್ಲಿದ್ದರು. ದರೋಡೆಗು ಮುನ್ನ ಬೆಂಕಿಪೊಟ್ಟಣ ಕೇಳುತ್ತಿದ್ದ ಕಳ್ಳರು ವ್ಯಕ್ತಿಗಳ ಗಮನ ಬೇರೆಡೆಗೆ ಸೆಳೆದು ತಕ್ಷಣ ಅವರನ್ನ ಸುತ್ತುವರಿಯುತ್ತಿದ್ದರು ನಾಲ್ಕು ಜನ ಒಟ್ಟಾಗಿ ನಿಂತು ಚಾಕ ತೋರಿಸಿ ಬೆದರಿಸುತ್ತಿದ್ದರು.

ಕೊನೆಗೆ ಹಣ ಚಿನ್ನ ಕಿತ್ತುಕೊಂಡು ಸ್ಥಳದಿಂದ ಕದ್ದ ಬೈಕ್‌ಗಳಲ್ಲಿ ಪರಾರಿಯಾಗ್ತಿದ್ರು. ಆದ್ರೆ ಪೊಲೀಸರ ಮಾರುವೇಷದ ಐಡಿಯಾದಿಂದ ಕೊನೆಗು ಕಳ್ಳರು ಜೈಲು ಪಾಲಾಗಿದ್ದಾರೆ. ಸದ್ಯ ಈ ಐವರ ತಂಡವನ್ನ ವಿಚಾರಣೆಗೆ ಒಳಪಡಿಸಿದಾಗ 10 ಮೊಬೈಲ್,18 ಸಾವಿರ ನಗದು,ಕೃತ್ಯಕ್ಕೆ ಬಳಸಿದ ಎರಡು ಮೊಟಾರ್ ಬೈಕ್,ಎರಡು ಚಾಕು ಅವರ ಬಳಿ ಸಿಕ್ಕಿದ್ದು ಎಲ್ಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಒಳ್ಳೆಯ ಮಕ್ಕಳಂತೆ ಬಿಂಬಿತವಾಗಿ ಈ ಯುವಕರ ತಂಡ ತಮ್ಮ ಅಪ್ಪ ಅಮ್ಮನಿಗೆ ಅನುಮಾನ ಬಾರದಂತೆ ಕಳ್ಳತನ ಮಾಡಿ ಐಶಾರಾಮಿ ಜೀವನದ ಶೋಕಿಗೆ ಇಳಿದಿದ್ರು. ಸದ್ಯ ನಂಜನಗೂಡಿನ ಜನರಿಗೆ ಆತಂಕ ಹುಟ್ಟಿಸಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದಿದ್ದು ಜನರು  ಇನ್ಮುಂದೆ ಯಾವುದೇ ಭಯವಿಲ್ಲದೆ ನಿಶ್ಚಿಂತೆಯಿಂದ ಮುಂಜಾನೆ ವಾಕಿಂಗ್ ಮಾಡಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights