Cricket : ಸೈಕಲ್ ಏರಿ ಟ್ರೋಲ್ ಆದ ಪಾಕ್ ನ ವೇಗಿ ಶೋಯಿಬ್ ಅಕ್ತರ್ ….
ಶೋಯಿಬ್ ಅಕ್ತರ್ ಒಂದು ವಿಡಿಯೋ ಮಾಡಿ ಸಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದರೆ ಸಾಕು, ಅದಕ್ಕೆ ಸಾವಿರಾರು ಲೈಕ್, ಸಾಕಷ್ಟು ಕಮೆಂಟ್ ಗಳು ಬರುತ್ತವೆ. ದೇಶ ಹಾಗೂ ವಿಶ್ವದಲ್ಲಿ ಅಭಿಮಾನಿಗಳನ್ನು ಹೊಂದಿರುವ ವೇಗಿ, ಯೂಟುಬ್ ನಲ್ಲಿ ವೈರಲ್ ಆಗ್ತಾ ಇದ್ದಾರೆ.
ಈ ಬಾರಿ ಶೋಯಿಬ್ ಮಾಡಿದ ಆ ಒಂದು ಪೋಸ್ಟ್ ಅವರನ್ನು ಅಭಿಮಾನಿಗಳು ದೂಷಿಸುವಂತೆ ಮಾಡಿದೆ. ಅಸಲಿಗೆ ಶೋಯಿಬ್ ಮಾಡಿದ್ದು, ಸರಿ ಅಲ್ಲವೇ ಅಲ್ಲ ಬಿಡಿ. ಲಾಕ್ ಡೌನ್ ವೇಳೆಯಲ್ಲಿ ಶೋಯಿಬ್ ತಮ್ಮ ನೆಚ್ಚಿನ ಇಸ್ಲಾಮಾಬಾದ್ ನಲ್ಲಿ ಸೈಕ್ಲಿಂಗ್ ಮಾಡಿ ಪೇಚೆಗೆ ಸಿಲುಕಿಕೊಂಡಿದ್ದಾರೆ. ಇದರ ಒಂದು ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿರುವ ಶೋಯಿಬ್ “ನನ್ನ ಇಷ್ಟದ ನಗರದಲ್ಲಿ, ಖಾಲಿ ರಸ್ತೆಯಲ್ಲಿ, ಉತ್ತಮ ವಾತಾವರಣದಲ್ಲಿ ದೈಹಿಕ ಕಸರತ್ತು ನಡೆಸಿದ್ದಾಗಿ” ಬರೆದಿದ್ದರು.
ಸಾಮಾಜಿಕ ತಾಣದಲ್ಲಿ ತಾವು ಸೈಕಲ್ ಹೊಡೆಯುವ ವಿಡಿಯೋ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ನೋಡಿದ ಅಭಿಮಾನಿಗಳು ವೇಗಿ ಶೋಯಿಬ್ ಕಾಲು ಎಳೆದಿದ್ದಾರೆ. ಅಲ್ಲದೆ ತಪ್ಪು ಸಮಯದಲ್ಲಿ ನೀವು ಹೀಗಿ ಸೈಕಲಿಂಗ್ ಮಾಡಿದ್ದೀರಿ ಎಂದು ಹೇಳಿದ್ದಾರೆ. ಅಲ್ಲದೆ ನೀವು ಒಬ್ಬ ಸ್ಟಾರ್ ಆಟಗಾರ, ನಿಮ್ಮನ್ನು ಜನರು ಅನುಕರಣೆ ಮಾಡುತ್ತಾರೆ. ಇಂತಹ ಸಮಯದಲ್ಲಿ ನೀವು ಹೀಗೆ ಮನೆ ಬಿಟ್ಟು ಬಂದಿರುವುದು ಸರಿಯಲ್ಲ ಎಂದಿದ್ದಾರೆ.
https://www.facebook.com/watch/?v=665941834239532