Corona fight : ಪರಿಹಾರ ವಿತರಣೆಯಲ್ಲಿಯೂ ತಾರತಮ್ಯ, ನಾಯಕರ ಕಿತ್ತಾಟ…

ಕೊರೋನಾ ಮಾಹಾಮಾರಿ ಇನ್ನೂ ತಾಂಡವವಾಡುತ್ತಿರುವ ಸಮಯದಲ್ಲಿಯೇ ಪರಿಹಾರದ ವಿತರಣೆ ವಿಚಾರದಲ್ಲಿ ರಾಜಕೀಯ ದೊಂಬರಾಟ ಶುರುವಾಗಿದೆ. ರಾಜ್ಯದಲ್ಲಿ ಕೊರೋನಾ ಸಂತ್ರಸ್ತರಿಗೆ, ಬಡವರಿಗೆ ಆಹಾರ ಪೊಟ್ಟಣ ವಿತರಿಸುವ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷ ನಾಯಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಆಡಳಿತ ಬಿಜೆಪಿ ನಾಯಕರು ಆಹಾರ ಪೊಟ್ಟಣಗಳನ್ನು ತಮ್ಮ ಸ್ವಂತದ್ದು ಎನ್ನು ರೀತಿಯಲ್ಲಿ ಬಿಂಬಿಸಿ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅದರಲ್ಲಿಯೂ ಈ ಪೊಟ್ಟಣಗಳ ಮೇಲೆ ಶಾಸಕ ಅರವಿಂದ ಲಿಂಬಾವಳಿ ಅವರ ಫೋಟೋ ಛಾಪಿಸಿ ಹಂಚುತ್ತಿರುವುದಕ್ಕೆ ಕಾಂಗ್ರೆಸ್ ಮುಖಂಡರು ಕೆಂಡವಾಗಿದ್ದಾರೆ.

ಕಾಂಗ್ರೆಸ್ ಕ್ಷೇತ್ರಗಳಿಗೆ ಪಡಿತರ ಕಿಟ್ ನೀಡ್ತಿಲ್ಲ ಎಂದು ಹೇಳಿದರುವ ರಾಮಲಿಂಗಾ ರೆಡ್ಡಿ ಇದೇ ವೇಳೆ ಸಂಸದ ತೇಜಸ್ವಿ ಸೂರ್‍ಯ ಅವರು ಏಕ ಪಕ್ಷಿಯವಾಗಿ ಪಡಿತರ ಕಿಟ್ ವಿತರಸ್ತಿದಾರೆ ಎಂದೂ ಆರೋಪಿಸಿದ್ದಾರೆ. ಅರವಿಂದ ಲಿಂಬಾವಳಿ ಸರಕಾರ ಕೊಟ್ಟ ಕಿಟ್ ಮೇಲೆ ತಮ್ಮ ಪೋಟೋ ಅಂಟಿಸಿ ಪ್ರಚಾರ ಪಡಕೊಳ್ಳತಾರೆ, ಇಲ್ಲಿ ತೇಜಸ್ವಿ ಸೂರ್‍ಯ ಅವರು ತಾವಷ್ಟೇ ಸಹಾಯ ಮಾಡುವ ಹಾಗೆ ಆಡುತ್ತಾರೆ ಎಂದು ರೆಡ್ಡಿ ಆಪಾದಿಸಿದ್ದಾರೆ.

ಕೊರೋನಾ ಲಾಕ್‌ಡೌನ್ ಬಾಧಿತರಿಗೆ ಪರಿಹಾರ ವಿತರಿಸುವ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‍ ಸಹ ಆರೋಪ ಮಾಡಿದ್ದಾರೆ. ಇದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಟೀಕೆ ಮಾಡಿದ್ದು ಇಂತಹ ಸಮಯದಲ್ಲಿ ರಾಜಕಾರಣ ಮಾಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights