ದೇವರಿಗೆ ಕೊರೊನಾ ದಿಗ್ಬಂಧನ : ದೇವಸ್ಥಾನದಲ್ಲಿ ದೇವರಿದ್ದಾನೆ ಭಕ್ತರಿಲ್ಲ!

ಇಡೀ ವಿಶ್ವಾದ್ಯಂತ ದೇವರಿಗೆ ಕೊರೊನಾ ದಿಗ್ಬಂಧನ ಹೇರಿದೆ. ದೇವಸ್ಥಾನದಲ್ಲಿ ದೇವರಿದ್ದಾನೆ ಆದರೆ ಭಕ್ತರೇ ಇಲ್ಲ. ಹುಂಡಿಗಳಿವೆ ಕಾಣಿಕೆ ಬೀಳ್ತಾಯಿಲ್ಲ. ಕಾಶಿಯೂ ಖಾಲಿ ತಿರುಪತಿಯೂ ಸ್ತಬ್ಧ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ ಭಕ್ತರಿಲ್ಲದ ದೇಗುಲಗಳು ಹೇಗಿವೆ ಗೊತ್ತಾ? ಇದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಭಾರತ ಒಂದು ಪುಣ್ಯ ಭೂಮಿ. ಆದರೆ ಈ ಪುಣ್ಯ ಭುಮಿಗೆ ಮಹಾಮಾರಿ ಕೊರೊನಾದ ದಿಗ್ಬಂಧನ ಎದುರಾಗಿದೆ. ಹೀಗಾಗಿ ದೇವಸ್ಥಾನಗಳೆಲ್ಲಾ ಖಾಲಿ ಖಾಲಿ ಕಾಣಸಿಗುತ್ತಿವೆ. ಪ್ರತಿನಿತ್ಯ ಜನರಿಂದ ತುಂಬಿದ ದೇವಸ್ಥಾನಗಳಲ್ಲಿ ಒಬ್ಬರೂ ಕಾಣ ಸಿಗುತ್ತಿಲ್ಲ. ಮುಖ್ಯವಾಗಿ ಹೇಳಬೇಕು ಅಂದ್ರೆ ದೇವರಿಗೂ ದಿಗ್ಭಂಧನ ಹಾಕಿದೆ ಈ ಮಹಾಮಾರಿ. ಸಂಕಷ್ಟಗಳು ಬಂದಾಗ ಜನ ದೇವರ ಮೇಲೆ ಹಾಕ್ತಾರೆ. ದೇವರನ್ನು ಬೇಡಿಕೊಳ್ತಾರೆ. ಆದರೆ ಸದ್ಯ ದೇವಸ್ಥಾನಗಳಿಗೂ ಹೋಗಲು ನಿರ್ಭಂಧ ಹಾಕಲಾಗಿದೆ. ಕೊರೊನಾದಿಂದಾಗಿ ದೊಡ್ಡ ದೊಡ್ಡ ದೇವಸ್ಥಾನಗಳು ಬಣಗುಡುತ್ತಿವೆ.

ತಿರುಪತಿ ದೇವಸ್ಥಾನ ಹೇಗಿದೆ ಗೊತ್ತಾ?

ಏಳು ಬೆಟ್ಟಗಳ ಒಡೆಯ ತಿಮ್ಮಪ್ಪ. ಒಂದು ಕಾಲದಲ್ಲಿ ಭಕ್ತರಿಂದ ಗಿಜುಗುಡುತ್ತಿದ್ದ ದೇವಸ್ಥಾನ ಈಗ ಬಣಗುಡುತ್ತಿದೆ. ಕೊರೊನಾ ಎಫೆಕ್ಟ್ ಈ ದೇವಸ್ಥಾನಕ್ಕೂ ತಗುಲಿದೆ. ಇಲ್ಲಿ ಮಾರ್ಚ್ 20 ರಿಂದ ದರ್ಶನ ಬಂದ್ ಮಾಡಲಾಗಿದೆ. ಈ ಶ್ರೀಮಂತ ತಿಮ್ಮಪ್ಪ ಹುಂಡಿಯ ಕಲೆಕ್ಷನ್ ಎಷ್ಟು ಗೊತ್ತಾ?  ವರ್ಷಕ್ಕೆ ಸರಿಸುಮಾರು 2900 ಕೋಟಿ ಕಲೆಕ್ಷನ್ ಆಗ್ತಾಯಿತ್ತು. ಇನ್ನೂ ಲಡ್ಡು ಮಾರಾಟದಿಂದ ಲಕ್ಷಾಂತರ ಹಣ ಸಿಗ್ತಾಯಿತ್ತು. ಚಿನ್ನ, ಬೆಳ್ಳಿ, ದವಸ ದಾನ್ಯ ದಾನಕ್ಕಂತೂ ಲೆಕ್ಕವೇ ಇಲ್ಲ. ಹೀಗೆ ತಿರುಪತಿಯಲ್ಲಿ ಜನರಿಲ್ಲದ ದಿನಗಳೇ ಇರುತ್ತಿರಲಿಲ್ಲ. ಇಂತಹ ದೇವಸ್ಥಾನ ಸದ್ಯ ಭಕ್ತರಿಲ್ಲದೆ ಬಣಗುಡುತ್ತಿದೆ.

11 ವರ್ಷಗಳ ನಂತರ ಮಂತ್ರಾಲಯ ಬಂದ್ :-

ರಾಯರಿರು ಮಂತ್ರಾಲಯಕ್ಕೆ ಹೋಗಿ ಬರೋದೆ ಒಂದು ಪುಣ್ಯ. ಭಕ್ತರಿಂದ ತುಂಬಿ ತಿಳುಕುತ್ತಿದ್ದ ರಾಯರ ಸನ್ನಿಧಿ ಕೊರೊನಾದಿಂದಾಗಿ ಬಣ ಗುಡುತ್ತಿದೆ. ಸದಾ ಕಾಲ ಮಂತ್ರಾಲಯದಲ್ಲಿ ರಾಘವೇಂದ್ರ ಹೆಸರು ಕೇಳಿಬರುತ್ತಿತ್ತು. ಆದರೆ ಸದ್ಯ ಸನ್ನಿಧಿಯಲ್ಲಿ ಭಕ್ತಿರಿಗೆ ರಾಯರ ದರ್ಶನ ಸಿಗೋದೇ ಇಲ್ಲ. 11 ವರ್ಷಗಳ ಬಳಿಕ ರಾಯರ ಸನ್ನಿಧಿಗೆ ಇಂತಹ ನಿರ್ಬಂಧ ಹೇರಲಾಗಿದೆ. 2009 ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಮಹಾ ಪ್ರವಾಹಕ್ಕೆ ಸಿಲುಕಿದ ರಾಯರ ಸನ್ನಿಧಿಯನ್ನು ತಾತ್ಕಾಲಿಕವಾಗಿ ಮುಂಚಲಾಗಿತ್ತು. ಇದಾದ ನಂತರ ಕೊರೊನಾ ಹರಡುವ ಭೀತಿಯಲ್ಲಿ ಮುಚ್ಚಲಾಗಿದೆ.

 

ಶಬರಿಮಲೈಗೂ ಕೊರೊನಾ ದಿಗ್ಬಂಧನ :-

ಕೊರೊನಾದಿಂದಾಗಿ ಶಬರಿಮಲೈಗೂ ನಿರ್ಭಂಧ ಹೇರಲಿದ್ದೆ. ಇಲ್ಲಿಗೆ ಏನಿಲ್ಲಾ ಅಂದ್ರೂ ಪ್ರತೀ ವರ್ಷ 50 ಲಕ್ಷ ಜನ ಭೇಟಿ ನೀಡ್ತಾರೆ. ಅಯ್ಯಪ್ಪನ ಸನ್ನಿದಾನಕ್ಕೆ ಭಕ್ತ ಸಾಗರವೇ ಹರಿದು ಬರ್ತಾಯಿತ್ತು. ಅಲ್ಲದೇ ಕೋಟಿ  ಕೋಟಿ ಆದಾಯ ಕೂಡ ಸಂಗ್ರಹವಾಗ್ತಾಯಿತ್ತು. ಆದರೆ ಶಬರಿಮಲೈ ಸದ್ಯ ಖಾಲಿ ಖಾಲಿಯಾಗಿದೆ. ದೇಶದಲ್ಲಿ ಮೊದಲು ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ದೇವಸ್ಥಾನಗಳನ್ನು ಬಂದ್ ಮಾಡಲು ಸೂಚಿದ ಹಿನ್ನೆಲೆ ಅಯ್ಯಪ್ಪನ ದೇವಸ್ಥಾನಕ್ಕೂ ಕೂಡ ಜನ ಹೋಗ್ತಾಯಿಲ್ಲ.

 

ಕೇದಾರನಾಥಕ್ಕಿಲ್ಲ ಭಕ್ತರ ಎಂಟ್ರಿ:-

ಕೇದಾರನಾಥಕ್ಕೂ ಭಕ್ತರ ಎಂಟ್ರಿ ಇಲ್ಲ. ಕೇದಾರನಾಥ ಕಣ್ತುಂಬಿಕೊಳ್ಳಲು ದೇಸದ ಜನ ಮಾತ್ರವಲ್ಲದೇ ಜಗತ್ತಿನ ಮೂಲೆ ಮೂಲೆಯಿಂದ ಭಕ್ತರು ಸಾಗಿ ಬರ್ತಾರೆ. ಏಪ್ರಿಲ್- ಮಾರ್ಚ್-ಜೂನ್ ನ 47 ದಿನಗಳಲ್ಲಿ ಸರಿಸುಮಾರು  ಏಳುವರೆ ಲಕ್ಷ ಭಕ್ತರು ಕೇದಾರನಾಥನ ದರ್ಶನ ಮಾಡ್ತಾರೆ. ಹೀಗೆ ಭಕ್ತರಿಂದ ತುಂಬಿ ತುಳುಕುತ್ತಿದ್ದ ಸನ್ನಿದಿ ಶ್ತಬ್ದವಾಗಿದೆ.

ವೈಷ್ಣವಿ ದೇವಿ ದೇವಸ್ಥಾನ ಬಂದ್ :-

ವೈಶ್ಣವಿ ದೇವಿ ಪುಣ್ಯ ಕ್ಷೇತ್ರಕ್ಕೂ ಕೊರೊನಾ ಎಫೆಕ್ಟ್ ಆಗಿದೆ. ವರ್ಷಕ್ಕೆ 80 ಲಕ್ಷ  ಈ ದೇವಸ್ಥಾನಕ್ಕೆ ಭೇಟಿ ನೀಡ್ತಾಯಿದ್ರು. ಇಲ್ಲಿನ ಯಾತ್ರೆಗೆ 80 ಲಕ್ಷ  ಭಕ್ತ ಸಾಗರವೇ ಹರಿದು ಬರ್ತಾಯಿತ್ತು. ವರ್ಷಕ್ಕೆ 500 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ವೈಷ್ಣವಿ ದೇವಿ ದೇವಸ್ಥಾನವೂ ಕೂಡ ಭಕ್ತರಿಲ್ಲದೇ ಬಣಗುಡುತ್ತಿದೆ.

ಅಮರನಾಥ :-

ಅಮರನಾಥ ಶಿವನ ಮತ್ತೊಂದು ರೂಪ. ಶ್ರಾವಣ ಮಾಸ ಬಂದರೆ ಸಾಕು ಭಕ್ತರು ಅಮರನಾಥನನ್ನು ನೋಡಲು ಮುಗಿ ಬೀಳ್ತಾರೆ. ಆದರೆ ಅಮರನಾಥನೂ ಕೂಡ ಭಕ್ತರಿಗೆ ದರ್ಶನ ಕೊಡಲು ಸಾಧ್ಯವಾಗುತ್ತಿಲ್ಲ. ಈ ದೇವಾಲಯ ಕೂಡ ಬಂದ್ ಮಾಲಾಗಿದೆ.

ಕಾಶಿ ವಿಶ್ವನಾಥ್:-

ಕಾಶಿ ವಿಶ್ವನಾಥ್ ಭೂಲೋಕದ ಕೈಲಾಸ ಎಂದು ಹೇಳಲಾಗುತ್ತದೆ. ಆದರೆ ಈ ಕೈಲಾಸವನ್ನು ಕಣ್ತುಂಬಿಕೊಳ್ಳಲು ಭಕ್ತರೇ ಇಲ್ಲ. 2019 ರಲ್ಲಿ 48 ಗಂಟೆಯಲ್ಲಿ 10 ಲಕ್ಷ ಭಕ್ತರು ದರ್ಶನ ಮಾಡಿದ್ರು. ಇನ್ನು ವರ್ಷಕ್ಕೆ ಲಕ್ಷಾಂತರ ಜನ ದೇಶ ವಿದೇಶದಿಂದ ಬಂದು ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಇದಕ್ಕೂ ಬ್ರೇಕ್ ಬಿದ್ದಿದೆ. ಪ್ರವಾಸಿ ತಾಣಗಳಿಗೆ ಹೋಗುವ ವಿಮಾನಗಳು, ರೈಲ್ವೇ, ಬಸ್ ಗಳ ಮುಂಗಡ ಟಿಕೇಟ್ ಗಳನ್ನು ರದ್ದು ಮಾಡಲಾಗಿದೆ.

 

ವೃಂದಾವನದಲ್ಲಿ ಕಾಣ್ತಾಯಿಲ್ಲ ಕೃಷ್ಣನ ಲೀಲೆ:-

ಹೌದು ಕೇವಲ ವೃಂದಾವನದಲ್ಲಿ ಮಾತ್ರವಲ್ಲ ಮಥುರದಲ್ಲೂ, ಗೋವರ್ದನದಲ್ಲೂ ಭಕ್ತರೇ ಕಾಣ ಸಿಗುತ್ತಿಲ್ಲ. ಸದಾ ಕಾಲ ಕೃಷ್ಣನ ಜಪ-ತಪ ಕಂಡು ಬರುತ್ತಿದ್ದ ಈ ಸ್ಥಳಗಳಲ್ಲಿ ಜನ ಓಡಾಟವೇ ಇಲ್ಲ. ಲಕ್ಷಾಂತರ ಜನ ಪ್ರವಾಸಿಗರೇ ಪ್ರತೀ ವರ್ಷ ದೇಶ ವಿದೇಸಗಳಿಂದ ಬಂದು ದೇವರ ಮೊರೆ ಹೋಗ್ತಾಯಿದ್ರು. ಆದರೆ ಇದೆಕ್ಕೆಲ್ಲ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ.

ಗೋಲ್ಡನ್ ಟೆಂಪಲ್ ಗೂ ನಿರ್ಬಂಧ  :-

ಗೋಲ್ಡನ್ ಟೆಂಪಲ್ ಗೂ ನಿರ್ಬಂಧ ಹೇರಲಾಗಿದೆ. ವರ್ಷಕ್ಕೆ 10 ಲಕ್ಷ ಜನ ಗೋಲ್ಡನ್ ಟೆಂಪಲ್ ಗೆ ಬಂದು ದೇವರ ದರ್ಶನ ಪಡೆದು ಪುನೀತರಾಗ್ತಾಯಿದ್ರು. ಆದರೆ ಇದಕ್ಕೆ ಕೊರೊನಾ ಬ್ರೇಕ್ ಹಾಕಿದೆ.

ದರ್ಗಾ ಬಂದ್ :- ದರ್ಗಾದಲ್ಲಿ ಸೂಫಿ ಸಂಗೀತ ಕೇಳ್ತಾಯಿಲ್ಲ. ನಿತ್ಯದ ಕೆಲ ವಿಧಿಗಳು ಬಿಟ್ಟರೆ ಪ್ರವಾಸಿಗರಿಗೆ ಪ್ರವೇಶವೇ ಇಲ್ಲ.

ಕರ್ನಾಟಕದಲ್ಲಿ ಯಾವೆಲ್ಲಾ ದೇವಸ್ಥಾನಗಳಿಗೆ ತೊಂದರೆಯಾಗಿದೆ?

ಕರ್ನಾಟಕದಲ್ಲಿ ಚಾಮುಂಡಿಬೆಟ್ಟದಿಂದ ಹಿಡಿದು ಸಣ್ಣ ಪುಟ್ಟ ಗುಡಿ ಗುಂಡಾರಗಳಿಗೂ ನಿರ್ಬಂಧ ಹೇರಲಾಗಿದೆ. ಯಾರೂ ಕೂಡ ದೇವಸ್ಥಾನಗಳಿಗೆ ಬರಬಾರದೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

ಮೈಸೂರು ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ :-

ನಾಡದೇವಿ ಸನ್ನಿಧಿಗಿಲ್ಲ ಭಕ್ತರ ಎಂಟ್ರಿ. ಕೊರೊನಾ ಹೂಡಿದ ಬಂದ್ ಗೆ ನಾಡದೇವಿ ಕೂಡ ಹೊರತಾಗಿಲ್ಲ. ಈ ದೇವಿ ಕರ್ನಾಟಕವನ್ನು ಕಾಯ್ತಾಳೆ ಎಂದು ಹೇಳಲಾಗುತ್ತದೆ. ಆದರೆ ಈಗ ಭಕ್ತರಿಗೆ ಇಲ್ಲಿ ನಿರ್ಬಂಧ ಹೇರಲಾಗಿದೆ.

ಮಂಜುನಾಥನ ದರ್ಶನಕ್ಕೂ ನಿರ್ಬಂಧವಿದೆ. ಧರ್ಮಸ್ಥಳದಲ್ಲೂ ನಿರ್ಬಂಧವಿದೆ. ಇಸ್ಕಾನ್ ನಲ್ಲಿ ಕೂಡ ಇದೆ ಪರಿಸ್ಥಿತಿ ಇದೆ. ಜಾತ್ರೆ, ಮೊಹೋತ್ಸವ, ಕಾರ್ಯಕ್ರಮಗಳಿಗೂ ಅವಕಾಶ ಇಲ್ಲ. ಸಿಂಪಲ್ಲಾಗಿ ಮಾಡಲಾಗುತ್ತದೆ. ಕುಕ್ಕೆ, ಗೋಕರಣ, ಬನಶಂಕರಿ, ಮಾದಾಮಿ ಎಲ್ಲಾ ದೇವಸ್ಥಾನಗಳು ಕೂಡ ಬಣ ಗುಡುತ್ತಿವೆ.

ದೇವಸ್ಥಾನದಲ್ಲಿ ದೇವರಿದ್ದಾನೆ ಭಕ್ತರಿಲ್ಲದಂತಾಗಿದೆ. ಜೊತೆಗೆ ಕೆಲವು ಕಡೆ ದೇವರಿಗೂ ಮಾಸ್ಕ್ ಹಾಕಲಾಗಿದೆ. ವಿಶ್ವವೇ ಕೊರೊನಾಗೆ ಬೆವರಿ ಬೆಂಡಾಗಿದೆ. ದೇವಸ್ಥಾನಗಳಿಗೆ ಬಾರದಂತೆ ಸಂಕಷ್ಟಕ್ಕೆ ತಳ್ಳಿದೆ. ಮಂಡ್ಯದಲ್ಲಿ ಉಪ್ಪರಪೇಟೆ ದೇವಸ್ಥಾನದ ಆಂಜನೇಯನಿಗೂ ಮಾಸ್ಕ್ ಹಾಕಲಾಗಿತ್ತು. ವಾರಣಾಸಿಯ ದೇವಿಗೆ ಮಾಸ್ಕ್ ಹಾಕಿ ಪೂಜೆ ಮಾಡಲಾಗುತ್ತಿದೆ.. ಜೊತೆಗೆ ದೇವಿಯನ್ನು ಮುಟ್ಟಲು ಬಿಡ್ತಾಯಿಲ್ಲ.

ಒಟ್ಟಿನಲ್ಲಿ ಕೊರೊನಾ ಕಡಿಮೆಯಾದ್ರೆ ಜನ ದೇವಸ್ಥಾನಕ್ಕೆ ಬಂದೇ ಬರ್ತಾರೆ. ಆದರೆ ಆಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದೇ ನಮ್ಮ ಆಶಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights