“ಹುಚ್ಚು ದೊರೆ” – ಸಾವಿನ ದವಡೆಯಲ್ಲಿದ್ದಾರಾ ಉತ್ತರ ಕೋರಿಯಾ ಅಧ್ಯಕ್ಷ?

ವಿಶ್ವವೇ ಕೊರಾನಾ ಭೀತಿಗೆ ತತ್ತರಿಸಿ ಹೋಗಿದೆ. ಲಕ್ಷ ಲಕ್ಷ ಜನ ಸಾವಿನ ದವಡೆಗೆ ಸಿಲುಕಿದ್ದಾರೆ. ಎಲ್ಲಾ ದೇಶಗಳಲ್ಲಿ ಮಹಾಮಾರಿ ವಿರುದ್ಧ ಹೋರಾಟ ನಡೆದಿದೆ. ಆದರೆ ಉತ್ತರ ಕೋರೊಯಾದಲ್ಲಿ ಮಾತ್ರ ಕೊರೊನಾ ಬಗ್ಗೆ ಮಾತೇ ಇಲ್ಲ. ಆದರೆ ಉತ್ತರ ಕೋರಿಯಾದ ದೊರೆ ‘ಕಿಮ್ ಜಾಂಗ್ ಉನ್’ ಅವರು ಮಾತ್ರ ಕಾಣೆಯಾಗಿದ್ದಾರೆನ್ನುವ ಸುದ್ದಿಗಳು ಹರಿದಾಡುತ್ತಿವೆ.

ಹೌದು… ಜಗತ್ತಿನಾದ್ಯಂತ ದೇಶಗಳು ಕೋರೊನಾದಿಂದ ಸತ್ತವರೆಷ್ಟು? ಸೋಂಕಿತರೆಷ್ಟು ಎನ್ನುವ ಲೆಕ್ಕವನ್ನು ನೀಡುತ್ತಿವೆ.ಆದರೆ ಉತ್ತರ ಕೋರಿಯಾದಲ್ಲಿ ಮಾತ್ರ ಕೊರೊನಾ ಸೋಂಕು ಹರಡಿಲ್ಲಾ ಎಂದೇಳಲಾಗುತ್ತಿದೆ. ಇದು ನಿಜಾನಾ..? ಅಥವಾ ಸುಳ್ಳಾ ಅನ್ನೋದು ಮಾತ್ರ ಇನ್ನೂ ಗೊತ್ತಾಗಬೇಕಿದೆ. ಯಾಕಂದ್ರೆ ಜಗತ್ತಿನಾದ್ಯಂತ ಯಾವುದೇ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗಲೆಲ್ಲಾ ಉತ್ತರ ಕೋರಿಯಾ ಸುಳ್ಳು ಹೇಳಿಕೆಯನ್ನೇ ನೀಡುತ್ತಾ ಬಂದಿದೆ. ಹೀಗೆ ಕೊರೊನಾ ವಿಚಾರದಲ್ಲೂ ಉತ್ತರ ಕೋರಿಯಾ ನಡೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಬೇಧಿಸುತ್ತಾ ಹೊರಟಾಗ ಕಿಮ್ ಜಂಗ್ ಉನ್ ಸಾವಿನ ಮನೆಯಲ್ಲಿದ್ದಾನೆ ಎನ್ನುವ ರೋಚಕ ಸತ್ಯ.

ಎಸ್… ಉತ್ತರ ಕೋರಿಯಾದ ಹುಚ್ಚು ದೊರೆ ಕಿಮ್ ಜಾಂಗ್ ಉನ್ ಸಾವಿನ ಬೆಡ್ ಮೇಲಿದ್ದಾರೆ ಎನ್ನುವ ಮಾಹಿತಿ ಅಮೆರಿಕಾದ ಗುಪ್ತಚರ ಇಲಾಖೆಯಿಂದ ತಿಳಿದುಬಂದಿದೆ. ಪ್ರತೀಬಾರಿ ಹೊಸ ಹೊಸ ಕ್ಷಿಪಣಿಗಳ ಪ್ರಯೋಗದಿಂದ ದೇಶಗಳಲ್ಲಿ ನಡುಕ ಹುಟ್ಟಿಸುತ್ತಿದ್ದ ದೊರೆ ಸಾವಿನ ಮನೆಯಲ್ಲಿದ್ದಾನಂತೆ. ಕೊರೊನಾನೇ ಇಲ್ದೆ ಇರೋ ದೇಶದಲ್ಲಿ ಹುಚ್ಚುದೊರೆ ಸಾವಿನ ಬೆಡ್ ಮೇಲೆ ಕಾಲಿಸಿದ್ದು ಯಾವ ಖಾಯಿಲೆಯಿಂದ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಹುಚ್ಚು ದೊರೆ ಎಂತಲೇ ಫೇಮಸ್ಸಾದ ಕಿಮ್ ತನ್ನ ದೇಶದ ಮಾಹಿತಿಯನ್ನು ಅಷ್ಟು ಈಝಿಯಾಗಿಬಿಟ್ಟುಕೊಡುವುದಿಲ್ಲ. ದೇಶದ ವಿಚಾರಗಳನ್ನು ಬಹಿರಂಗ ಪಡಿಸುವ ಸ್ವಾತಂತ್ರ್ಯ ಕೂಡ ಅಲ್ಲಿನ ಮಾದ್ಯಮದವರಿಗಿಲ್ಲ. ಇನ್ನೂ ಅಲ್ಲಿನ ಜನರಿಗಂತೂ ಹುಚ್ಚು ದೊರೆ ನಡುಕ  ಹುಟ್ಟಿಸಿಬಿಟ್ಟಿದ್ದಾನೆ. ಹೀಗೆ ಮೆರೆಯುತ್ತಿದ್ದ ದೊರೆಗೆ ಏನಾಗಿದೆ..? ಅನ್ನೋದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಅನಾರೋಗ್ಯದಿಂದ ಬಳಲುತ್ತಿದ್ದ ಕಿಮ್ ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಏಪ್ರಿಲ್ 15 ರಂದು ನಡೆದ ಕಿಮ್ ಅಜ್ಜನ 108ನೇ ಜನ್ಮದಿನಾಚರಣೆಗೆ ಗೈರಾಗಿದ್ದಾರೆ. ಎಂದೆಂದೂ ಮಿಸ್ ಮಾಡಿರದ ಅಜ್ಜನ ಜನ್ಮದಿನಾಚರಣೆಗೆ ಕಿಮ್ ಈ ಬಾರಿ ಗೈರಾಗಿದ್ದಾರೆ. ಮಾತ್ರವಲ್ಲ ಕಿಮ್ ಸಾಕಷ್ಟು ಕಾರ್ಯಕ್ರಮಗಳಿಗೂ ಹಾಜರಾಗಿಲ್ಲ. ಹೀಗೆ ಹಜರಾಗದ ಕಿಂಗ್ ಮೇಲೆ ಅನುಮಾನ ಕಾಡತೊಡಗಿದೆ. ಆಗಲೇ ಕಿಂಗ್ ದೊರೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾನೆನ್ನುವ ಮಾಹಿತಿ ಹೊರಬಿದ್ದಿದೆ.

ಉ.ಕೊ ದಲ್ಲಿ ಒಂದು ಹುಲ್ಲು ಕಡ್ಡಿ ಅಲ್ಲಗಾಡಿಸಬೇಕಾದ್ರು ಕಿಂಗ್ ಪರಮೇಷನ್ ಬೇಕು. ಯಾವುದೇ ಮಾಹಿತಿ ನೀಡಬೇಕಾದ್ರು ಜನ ಹಿಂಜರಿಯುತ್ತಾರೆ. ಕಿಮ್ ಕಾರ್ಯಕ್ರಮಗಳಿಗೆ ಗೈರಾದ ಇತಿಹಾಸವೇ ಇಲ್ಲ. ಹೀಗಾಗಿ ಕಿಮ್ ಎಲ್ಲಿದ್ದಾರೆ ಎನ್ನುವ ಮಾಹಿತಿ ಹುಡುಕುತ್ತಾ ಹೋದಾಗಲೇ ಅನಾರೋಗ್ಯದ ವಿಚಾರ ಬಯಲಾಗಿದ್ದು.

ಶಸ್ತ್ರ ಚಿಕಿತ್ಸೆ ನಡೆದ ಬಳಿಕೆ ಅವರ ಪರಿಸ್ಥಿತಿ ಬಿಗಡಾಯಿಸಿದೆಯಂತೆ. ಅಷ್ಟಕ್ಕೂ ಆ ಶಸ್ತ್ರ ಚಿಕಿತ್ಸೆ ನಡೆದಿದ್ದು ಏಪ್ರಿಲ್ 12ಕ್ಕೆ. ಏಪ್ರಿಲ್ 12 ಕ್ಕೇ ಕಿಮ್ ಮಾದ್ಯಮದವರ ಮುಂದೆ ಕಾಣಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಅವರ ಅಜ್ಜನ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಬೇಕಾಗಿತ್ತು, ಆದರೆ ಆ ನಂತರ ಅವರ ಪರಿಸ್ಥಿತಿ ಸಾಕಷ್ಟು ಚಿಂತಾಜನಕವಾಗಿದೆಯಾಗಿದೆ. ಹೀಗಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಾಗಿಲ್ಲ. ಹೀಗೆ ಕಿಮ್ ಅನಾರೋಗ್ಯದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅಷ್ಟಕ್ಕೂ ಹುಚ್ಚು ಕಿಮ್ ಮಾಡಿಸಿಕೊಂಡ ಶಸ್ತ್ರ ಚಿಕಿತ್ಸೆ ಯಾವುದು ಗೊತ್ತಾ..?

ಅತೀಯಾದ ಧೂಮಪಾನದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕಿಮ್ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.  ಅವರಿಗೆ ಉ.ಕೋ.ದ ಹ್ಯಾಂಡ್ಸ್ ಆಫ್ ಕೌಂಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ತುಂಬಾನೇ ಬಿಗಡಾಯಿಸಿದ್ದು ಬದುಕೋದೇ ಡೌಟ್ ಎನ್ನಲಾಗುತ್ತಿದೆ.

ಉತ್ತರ ಕೋರಿಯಾದ ಹುಚ್ಚು ದೊರೆ ಕಾಣೆಯಾಗಿರೋದು ಇದೇ ಮೊದಲೇನಲ್ಲ. ಕಾಯಿಲೆಬಂದಾಗಲೆಲ್ಲಾ ಈತ ನಿಗೂಢವಾಗಿ ಕಣ್ಮರೆಯಾಗ್ತಾಯಿದ್ದ. 2014ರಲ್ಲಿ ಮಾಯವಾಗಿದ್ದ ಹುಚ್ಚುದೊರೆ. ಆಗಲೂ ಅನಾರೋಗ್ಯಕ್ಕೆ ತುತ್ತಾಗಿ ವಿರಾಮದಿಂದ ಚೇತರಿಸಿಕೊಂಡಿದ್ದರು. ಕಿಮ್ ಆನಾರೋಗ್ಯ ಪರಿಸ್ಥಿತಿ 28 ವಯಸ್ಸಿನಿಂದಲೇ ಇದೆ. ಕಾಲಿನ ಸಮಸ್ಯೆ ಇದೆ. ಇದು ಆತ ನಡೆಯುವಾಗಲೇ ಸಿಗುತ್ತದೆ. 2014ರ ಸೆಪ್ಟಂಬರ್ ತಿಂಗಳ ಆರಂಭದಲ್ಲಿ 40 ದಿನ ಕಾಣೆಯಾಗಿದ್ದ ಕಿಮ್ 2020 ನಂತರ ಈಗ ಮತ್ತೆ ಕಾಣೆಯಾಗಿದ್ದಾರೆ.

ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈತನ ತಲೆಕೆಟ್ಟ ರೂಲ್ಸ್ ಬಗ್ಗೆ ನೀವು ತಿಳಿಸುಕೊಳ್ಳಲೇ ಬೇಕು. ಹುಚ್ಚದೊರೆ ಎಂದು ಕುಖ್ಯಾತಿ ಪಡೆದಿದ್ದ ಕಿಂಗ್ ಕಿಮ್ ಕಾಣೆಯಾಗಿದ್ದಾರೆ. ಕೋಮಾ ಸ್ಥಿತಿಗೆ ಹೋಗಿದ್ದಾರೆ ಎಂದು ಅಮೆರಿಕಾ ಗುಪ್ತಚರ ಮಾಹಿತಿ ಕಲೆಹಾಕಿದೆ.

2008ರಲ್ಲಿ ಕಾಣೆಯಾಗಿದ್ದರು ಕಿಮ್ ತಂದೆ. ಇಲ್ಲಿ ಕಾಣೆಯಾಗೋದು ಅನ್ನೋದು ಅಂದರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದರ್ಥ. ಹೀಗೆ ಕಾಣೆಯಾಗಿದ್ದ ಕಿಮ್ ತಂದೆ ಕೂಡ ಪಾರ್ಶ್ಚವಾಯುವಿನಿಂದ ಬಳಲುತ್ತಿದ್ದರು ಎಂದು ತಿಳಿದು ಬಂತು. ಸದ್ಯ ಅಪ್ಪನಂತೆ ಮಗ ಕೂಡ ಕಾಣೆಯಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಿಮ್ ಬದುಕುವುದೇ ಅನುಮಾನ ಎನ್ನಲಾಗುತ್ತಿದೆ. ಹಾಗಾದ್ರೆ ಕಿಮ್ ನಂತರ ಯಾರು ಉತ್ತರ ಕೋರಿಯಾದ ದೊರೆ?

27 ವಯಸ್ಸಿನಿಂದ 36 ವರ್ಷದಲ್ಲಿ ಕಿಮ್ ಮಾಡಿದ ಅಧಿಕಾರ ಹೇಗಿತ್ತು ಅಂದರೆ ಅದನ್ನ ಪದಗಳಲ್ಲಿ ಉತ್ತರಿಸಲು ಸಾಧ್ಯವಿಲ್ಲ ಬಿಡಿ. ಕಿಮ್ ತನ್ನ ತಂದೆ ಸತ್ತಾಗ ಸರಿಯಾಗಿ ಕಣ್ಣೀರು ಹಾಕಿಲ್ಲ ಎಂದು ಜನರನ್ನು ಕೊಂದು ಹಾಕಿದ್ದ, ತನ್ನ ಸಭೆಯಲ್ಲಿ ನಿದ್ದೆ ಮಾಡಿದ್ದಕ್ಕೆ ಅಧಿಕಾರಿಯನ್ನೇ ಕೊಂದು ಹಾಕಿದ್ದ. ಅಷ್ಟೇ ಯಾಕೆ ತನ್ನ ವಿರುದ್ಧ ಮಾತನಾಡಿದ್ದಕ್ಕೆ ತನ್ನ ಮಾವನನ್ನೇ ಭೇಟೆ  ನಾಯಿಗಳ ಬೋನಿಗೆ ಹಾಕಿದ್ದನು. ಇಂತಹ ಹುಚ್ಚು ದೊರೆಯ ನಂತರ ಅಧಿಕಾರಿ ಯಾರು? ಎನ್ನುವ ಪ್ರಶ್ನೆ ಎದುರಾಗಿದೆ. ಕಿಮ್ ನ 3 ಮಕ್ಕಳು ಇನ್ನೂ ಚಿಕ್ಕವರು. ದೊಡ್ಡ ದೇಶಕ್ಕೆ ಶೆಡ್ಡು ಹೊಡಿದಿದ್ದ ಉತ್ತರ ಕೋರಿಯಾದ ಮುಂದಿನ ದೊರೆ ಕಿಮ್ ನ ಸಹೋದರಿ ಎನ್ನಲಾಗುತ್ತಿದೆ. ಕಿಮ್ ಜಾಂಗ್ ಉನ್ ನಂತರ ಆತನ ಸಹೋದರಿ’ ಕಿಮ್ ಯೋ ಜಾಂಗ್’ ಮುಂದಿನ ಉತ್ತರಾಧಿಕಾರಿ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಕ್ಷೀಪಣಿ ಪ್ರಯೋಗದ ಮೂಲಕ ದೇಶಗಳನ್ನೇ ನಡುಗಿಸುತ್ತಿದ್ದ ಹುಚ್ಚು ದೊರೆ ಸಾವಿನ ಬೆಡ್ ಮೇಲಿದ್ದಾನೆ ಎನ್ನಲಾಗುತ್ತಿದೆ. ಹಳೆ ರೋಗಗಳ ಜೊತೆಗೆ ಹೊಸ ಕಾಯಿಲೆ ಆತನಲ್ಲಿ ಕಾಣಿಸಿಕೊಳ್ಳುತ್ತಿದ್ದು ಆವರು ಕೋಮಾದಲ್ಲಿದ್ದಾನೆ ಎನ್ನಲಾಗುತ್ತಿದೆ. ಹೀಗಾಗಿ ಕಿಮ್ ಬದುಕುಳಿಯೋದು ಕಷ್ಟ ಎನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights