ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ರಾಗಿಣಿ ಆಪ್ತ ಶಿವಪ್ರಕಾಶ್ ಚಪ್ಪಿ ಸಿಸಿಬಿ ಎದುರು ಪ್ರತ್ಯಕ್ಷ!

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎ-1 ಆರೋಪಿ ಶಿವಪ್ರಕಾಶ್ ಚಪ್ಪಿ ಸಿಸಿಬಿ ಎದುರು ಹಾಜರಾಗಿದ್ದಾನೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ಸ್ನೇಹಿತ ಎನ್ನಲಾಗುವ ಶಿವಕುಮಾರ್ ತನಿಖೆ ಆರಂಭಗೊಂಡಾಗಿನಿಂದ ತಲೆಮರಿಸಿಕೊಂಡಿದ್ದನು. ಕೆಲ ತಿಂಗಳುಗಳಿಂದ ಸಿಸಿಬಿ ಈತನ ಶೋಧ ಕಾರ್ಯ ನಡೆಸಿತ್ತಾದರೂ ಈತ ಪತ್ತೆಯಾಗಿರಲಿಲ್ಲ. ಕೊನೆಗೂ ಎ-1 ಡ್ರಗ್ಸ್ ಡೀಲರ್ ಸಿಸಿಬಿ ಎದುರು ಹಾಜರಾಗಿದ್ದಾನೆ.

ಹೌದು… ಶಿವಪ್ರಕಾಶ್ ಚಪ್ಪಿ ಸ್ವತ: ಸಿಸಿಬಿ ಎದುರು ಪ್ರತ್ಯಕ್ಷ ಆಗಿದ್ದಾನೆ. ಮಾತ್ರವಲ್ಲದೇ ಬಂಧನದಿಂದ ತಪ್ಪಿಸಿಕೊಳ್ಳೋಕೆ ಡ್ರಗ್ಸ್ ನಂಟು ಹೊಂದಿದ ರಾಗಿಣಿಯ ಹಳೆಯ ಬಾಯ್ ಫ್ರೆಂಡ್ ನೌಟಂಕಿ ಆಟ ಶುರುಮಾಡಿದ್ದಾನೆ. ಹೌದು… ತನ್ನನ್ನು ಬಂಧಿಸದಂತೆ ನ್ಯಾಯಾಲಯದಿಂದ ತಡೆ ಅರ್ಜಿ ತಂದಿದ್ದಾನೆ. ಸದ್ಯ ಕೋರ್ಟ್ ರಜೆ ಇರುವುದರಿಂದ ಅರ್ಜಿ ನಡೆಯದೇ ಇರಬಹುದು. ಹೀಗಾಗಿ ಆತ ತನ್ನನ್ನು ಬಂಧಿಸುವುದಿಲ್ಲ ಎನ್ನುವ ಧೈರ್ಯದ ಮೇಲೆ ಸಿಸಿಬಿ ಮುಂದೆ ಹಾಜರಾಗಿದ್ದಾನೆ.

ಡ್ರಗ್ಸ್ ಪ್ರಕರಣದಲ್ಲಿ ಬಹುತೇಹ ಆರೋಪಿಗಳ ಬಂಧನ ಆಗಿದ್ದರೂ ಕೂಡ ಈತ ಮಾತ್ರ ತಪ್ಪಿಸಿಕೊಳ್ಳುತ್ತಿದ್ದನು. ತೆರೆಮರೆಯಲ್ಲಿ ಕಸರತ್ತು ಮಾಡಿ ಎಸ್ಕೇಪ್ ಆಗೋ ನಾಟವಾಡುತ್ತಿದ್ದನು. ರಾಗಿಣಿ ಅರೆಸ್ಟ್ ಆಗಿದ್ದಾಗಿನಿಂದ ಸಿಸಿಬಿ ಅಧಿಕಾರಿಗಳು ಶಿವಕುಮಾರ್ ಅರೆಸ್ಟ್ ಮಾಡಬೇಕಿತ್ತು. ಆದರೆ ಬಂಧಿಸದಂತೆ ನ್ಯಾಯಾಲಯದಿಂದ ಅರ್ಜಿ ತಂದ ಬೆನ್ನಲ್ಲೆ ಸಿಸಿಬಿ ಆತನನ್ನು ವಿಚಾರಣೆಗೆ ಒಳಪಡಿಸುತ್ತಾ ಅಥವಾ ವಿಚಾರಣೆಗೆ ಬರ ಹೇಳುವುದಾಗಿ ಕಳುಹಿಸುತ್ತಾ? ಕಾದು ನೋಡಬೇಕಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights