ಮೊದಲಿಗೆ ಕ್ಯಾನ್ಸರ್ ಗೆದ್ದು ಈಗ ಕೊರೊನ ಇಂದ ಗುಣಮುಖಳಾದ ನಾಲ್ಕು ವರ್ಷದ ಭಾರತೀಯ ಮೂಲದ ಬಾಲಕಿ

ದುಬೈನಲ್ಲಿ ನಾಲ್ಕು ವರ್ಷದ ಭಾರತೀಯ ಮೂಲದ ಬಾಲಕಿ ಕೊರೊನ ಸೋಂಕಿನಿಂದ ಗುಣಮುಖಳಾಗಿದ್ದು, ಕೋರೋನ ಸೋಂಕಿತ ರೋಗಿಗಳಿಗೆ ಹೊಸ ಭರವಸೆಯನ್ನು ನೀಡಿದೆ.

ಏಪ್ರಿಲ್ 1 ರಂದು ದುಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಿವಾನಿ ಎಂಬ ಬಾಲಕಿಯನ್ನು ಏಪ್ರಿಲ್  20ರಂದು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಅವರ ತಾಯಿಯಿಂದ ಶಿವಾನಿಗೆ ಕೊರೊನ ಸೋಂಕು ತಗುಲಿತ್ತು. ಕಳೆದ ವರ್ಷವಷ್ಟೇ ಅತಿ ವಿರಳ ಕಿಡ್ನಿ ಕ್ಯಾನ್ಸರ್ ನಿಂದ ಗುಣಮುಖಳಾಗಿದ್ದ ಶಿವಾನಿಗೆ ವಿಶೇಷ ನಿಗಾ ವಹಿಸಲಾಗಿತ್ತು.

ಕಳೆದ ವರ್ಷ ಕ್ಯಾನ್ಸರ್ ಚಿಕಿತ್ಸೆಗೆ ಕೀಮೋಥೆರಪಿಗೆ ಒಳಗಾಗಿದ್ದರಿಂದ ಆಕೆಯ ರೋಗನಿರೋಧಕ ಶಕ್ತಿ ಇನ್ನೂ ವೃದ್ಧಿಸಿರಲಿಲ್ಲ ಎಂದಿರುವ ಅಲ ಫಾತ್ತೈಮ್ನ್ ಹೆಲ್ತ್ ಕ್ಲಬ್ಬಿನ ವೈದ್ಯರು ಇದಕ್ಕಾಗಿ ಅಗತ್ಯ ಚಿಕಿತ್ಸಾ ಕ್ರಮಗಳಿಗೆ ನಾವು ಸಿದ್ಧರಾಗಿದ್ದೆವು. ಆದರೆ ಅದೃಷ್ಟವಶಾತ್ ಶಿವಾನಿಗೆ ಯಾವುದೇ ರೀತಿಯ ಗಂಭೀರ ಲಕ್ಷಣಗಳು ಈ ಸೋಂಕಿನಿಂದ ಕಾಣಿಸಿಕೊಳ್ಳಲಿಲ್ಲ ಎಂದಿದ್ದಾರೆ.

20 ದಿನಗಳ ಕಾಲ ಚಿಕಿತ್ಸೆ ಪಡೆದಿರುವ ಶಿವಾನಿ ಗುಣಮುಖರಾದ ಮೇಲೆ ಎರಡು ಬಾರಿ ಮಾಡಿದ ಪರೀಕ್ಷೆಯಲ್ಲಿ ಕೊರೊನ ನೆಗೆಟಿವ್ ಬಂದಿದ್ದು ಈಗ ಮನೆಯಲ್ಲಿ 14 ದಿನಗಳ ಪ್ರೆತ್ಯೇಕತೆಯಲ್ಲಿ ಇರಿಸಲಾಗಿದೆ. ಶಿವಾನಿಯವರ ತಾಯಿಯೂ ಗುಣಮುಖರಾಗಿದ್ದಾರೆ.

ಯು ಎ ಇಯಲ್ಲಿ ಗುಣಮುಖರಾಗ ಅತಿ ಸಣ್ಣ ಮಕ್ಕಳಲ್ಲಿ ಶಿವಾನಿ ಕೂಡ ಒಬ್ಬರು ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights