ಗೃಹ ಕಾರ್ಮಿಕರ ಘನತೆಯ ಬದುಕಿಗಾಗಿ ಸರ್ಕಾರಗಳು ಏಕೆ ಶಾಸನಗಳನ್ನು ರೂಪಿಸಿಲ್ಲ?
ಪ್ರತಿಯೊಬ್ಬರ ದುಡಿಮೆಗೂ ನಿರ್ಧಿಷ್ಟ ಅವಧಿಯಲ್ಲಿ ವೇತನ ಹೆಚ್ಚಳದ ಅವಕಾಶ ಇದ್ದೇಯಿರುತ್ತದೆ. ವೇತನ ಹೆಚ್ಚಳ ಇಲ್ಲದೇ ಇರುವ ಉದ್ಯೋಗವನ್ನು ಯಾರು ತಾನೇ ಮಾಡಿಯಾರು ಎಂದೂ ನಮಗೆ ಅನ್ನಿಸುವುದು ಸಹಜ. ಆದರೆ, ಇಂದಿಗೂ ಆ ರೀತಿಯಲ್ಲಿ ವೇತನ ಹೆಚ್ಚಳದ ಆಯ್ಕೆ ಇಲ್ಲದೇ ದುಡಿಯುತ್ತಿರುವವರು ನಮ್ಮ ಜೊತೆಗೇ ಇದ್ದಾರೆ.
ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ಆರಂಭವಾದ ನಂತರದಲ್ಲಿ ಮನೆ ಕೆಲಸಗಳನ್ನು ಮಾಡುವ ಗೃಹ ಕಾರ್ಮಿಕರ ಪ್ರಾಮುಖ್ಯತೆಯ ಬಗೆಗೆ ಟಿಕ್ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ಹರಿದಾಡಿದ್ದವು. ದೇಶದ ಪ್ರಗತಿಗೆ ಮನೆಗೆಲಸದ ಕಾರ್ಮಿಕರದ್ದು ತೆರೆಮರೆಯ ಕೊಡುಗೆ ಎಂದರೂ ತಪ್ಪಾಗಲಾರದು.
ಈ ಗೃಹ ಕಾರ್ಮಿಕರು ಸಂಬಳ ಹೆಚ್ಚಳ ಆಯ್ಕೆ ಇಲ್ಲದಿರುವುದಷ್ಟೇ ಅಲ್ಲದೆ, ನಿರಂತರ ನಿಂದನೆ ಮತ್ತು ಕಿರುಕುಳವನ್ನೂ ಅವರ ಅನುಭವಿಸುತ್ತಿದ್ದಾರೆ. ಇಂತಹ ಮಾನಸಿಕ ಒತ್ತಡ ಮತ್ತ ಸಾಮಾನ್ಯ ಸೌಲಭ್ಯವೂ ಇಲ್ಲದೆ ದುಡಿಯುತ್ತಿರುವ ಇವರು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಕಾನೂನಿ ನೆರವನ್ನೂ ಪಡೆಯಲಾಗುತ್ತಿಲ್ಲ. ನೆರವು ಪಡೆದ ನಂತರದ್ಲಲಾಗುವ ಪರಿಣಾಮಗಳ ಬಗ್ಗೆ ಭಯಭೀತರಾಗಿ ದುಡಿಯುತ್ತಿದ್ದಾರೆ.
ಇದು ಕರ್ನಾಟಕವೂ ಸೇರಿದಂತೆ ದೇಶದ್ಯಂತ ಗೃಹ ಕಾರ್ಮಿಕರು ಎದುರಿಸುತ್ತಿರುವ ವಾಸ್ತವ ಸಂಗತಿ. ಕರ್ನಾಟಕ ಮತ್ತು ದೇಶದಾದ್ಯಂತದ ಈ ವಲಯದ ಉದ್ಯೋಗಿಗಳಿಗೆ ಬಹಳ ಹಿಂದಿನಿಂದಲೂ ಕಡಿಮೆ ವೇತನ ನೀಡಲಾಗುತ್ತಿಲ್ಲ. ಇದರ ಬಗ್ಗೆ ಯಾರೂ ಗಮನ ಹರಿಸಿಲ್ಲ. ಅಷ್ಟೇ ಅಲ್ಲದೆ, ಮನೆಕೆಲಸಕ್ಕಾಗಿ ಮಹಿಳೆಯರು ಮತ್ತು ಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿರುವುದನ್ನೂ ಗುರುತಿಸಿಲ್ಲ.
ತಮ್ಮ ಕುಟುಂಬಗಳನ್ನು ಮುನ್ನಡೆಸುವ ಮತ್ತು ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸುವಂತಹ ಸಾಂದರ್ಭಿಕ ಅವಶ್ಯಕತೆಗೆ ಸಿಲುಕಿರುವ ಕರ್ನಾಟಕದ ಗೃಹ ಕಾರ್ಮಿಕರು, ಅವರನ್ನು ಗುರುತಿಸಿಕೊಳ್ಳಲು ಬಹಳ ಹಿಂದಿನಿಂದಲೂ ಹೆಣಗಾಡುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರನ್ನು ಒಳಗೊಂಡ ಗೃಹ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ಅನ್ಯಾಯದಿಂದ ಅವರನ್ನು ಪಾರುಮಾಡಲು, ಅವರ ಹಕ್ಕುಗಳನ್ನು ಗುರುತಿಸುವಂತ ನಿಯಮಗಳನ್ನು ರೂಪಿಸುವಲ್ಲಿ ರಾಜ್ಯದ ಸರ್ಕಾರಗಳು ವಿಫಲವಾಗಿದೆ.
ಅಲ್ಲದೆ, ಕೊರೊನಾ ಲಾಕ್ಡೌನ್ ಸಂಕಷ್ಟದಲ್ಲಿರುವ ವಿವಿಧ ಕ್ಷೇತ್ರಕ್ಕೆ ಬುಧವಾರ 1,610 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ ಕರ್ನಾಟಕದ ಮುಖ್ಯಮಂತ್ರಿ ಯಡಿತಯೂರಪ್ಪನವರೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಗೃಹ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ಅನ್ನು ನೀಡಿಲ್ಲ. ಪ್ಯಾಕೇಜ್ ಇವರ ಇವರ ಬಗೆಗಿನ ಪ್ರಸ್ತಾಪವೂ ಅವರ ಸುದ್ದಿಗೋಷ್ಟಿಯಲ್ಲಿ ಬರಲಿಲ್ಲ.
ಸಧ್ಯಕ್ಕೆ ಗುರುತಿಸಬಹುದು ಒಂದೇ ಒಂದು ಅಂಶವೆಂದರೆ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ರಾಜಸ್ಥಾನ, ಕೇರಳ ಮತ್ತು ಜಾರ್ಖಂಡ್ ಜೊತೆಗೆ ಕರ್ನಾಟಕವು ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಸಿಗಬೇಕು ಎಂದು 2017ರಲ್ಲಿ ಅಧಿಸೂಚನೆ ಹೊರಡಿಸಿರುವುದು. ಇದರ ಪ್ರಕಾರ, ಬಟ್ಟೆ ತೊಳೆಯುವ, ಮನೆ ಕ್ಲೀನ್ ಮಾಡುವ ಮತ್ತು ಅಡುಗೆ ಮಾಡುವ ಗೈಹ ಕಾರ್ಮಿಕರಿಗೆ ದಿನದ ಮೊದಲ ಗಂಟೆಗೆ 37.50 ರೂ. ನಂತರ ಪ್ರತಿ ಗಂಟೆಗೆ 22.50 ರೂ. ಹಾಗೂ ಎಂಟು ಗಂಟೆಗಳ ಕೆಲಸಕ್ಕೆ ಕನಿಷ್ಠ ದೈನಂದಿನ ವೇತನವನ್ನು 195 ರೂ. ಮತ್ತು ಮಾಸಿಕ ವೇತನ ಸುಮಾರು 5,070 ರೂ. ನಿಗಧಿ ಮಾಡಲಾಗಿದೆ.
ಆದಾಗ್ಯೂ, ಸರ್ಕಾರ ಅಧಿಸೂಚನೆಯಲ್ಲಿ ಹೊರಡಿಸಿರುವ ಈ ಹಕ್ಕು ಅಧಿಸೂಚನೆಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆಯೇ ಹೊರತು, ಅದು ಕಾರ್ಮಿಕರ ಕೈ ಸೇರಿಲ್ಲ. ಇಂದಿಗೂ ಗೃಹ ಕಾರ್ಮಿಕರು ಸಾಕಷ್ಟು ವೇತನಕ್ಕಾಗಿ ಹೋರಾಟ ಮಾಡುತ್ತಲೇ ಇದ್ದಾರೆ.
“ನಾನು 12 ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದೇನೆ. ಪ್ರಸ್ತುತ ನಾಲ್ಕು ಮನೆಗಳಲ್ಲಿ ದುಡಿಯುತ್ತಿದ್ದೇನೆ. ಇದೂವರೆಗೂ ಇಲ್ಲಿಯೂ ನಾನು ಸಂಬಳ ಹೆಚ್ಚಿಸುವ ಬಗ್ಗೆ ಕೇಳಲು ಸಾಧ್ಯವಾಗಿಲ್ಲ. ನಾನೇನಾದರೂ ಸರ್ಕಾರ ನಿಗದಿ ಮಾಡಿರುವ 5,000 ವೇತನದ ಬಗ್ಗೆ ಕೇಳಿದರೆ, ಕೆಲಸ ಕೊಟ್ಟಿರುವವರು ಇದೇ ಸಂಬಳಕ್ಕೆ ನೀನಲ್ಲದಿದ್ದರೆ, ಬೇರೆಯವರು ಕೆಲಸ ಮಾಡುತ್ತಾರೆಂದು ಗದರಿಸುತ್ತಾರೆ. ಬೇರೆಯವರನ್ನು ಹುಡುಕಲು ಆರಂಭಿಸುತ್ತಾರೆ” ಎಂದು ಬೆಂಗಳೂರಿನ 35ದ ಮಂಜುಳಾ ಅವರು ತಮ್ಮ ಅಳಲನ್ನು ಹೇಳಿಕೊಂಡರು.
ಮಂಜುಳಾ ಅವರ ಪತಿ ಪ್ಯಾಕಿಂಗ್ ಮತ್ತು ಮೂವಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ನಿಂದ ಕಂಪನಿ ರಜೆ ಕೊಟ್ಟಿದ್ದು, ಕುಟುಂಬದ ಆದಾಯ ಕಡಿಮೆ ಆಗಿದೆ. ಈಗ ಅವರ ಇಡೀ ಕುಟುಂಬಕ್ಕೆ ಮಂಜುಳಾ ಅವರ ದುಡಿಮೆಯೇ ಆಧಾರವಾಗಿದೆ. ಆದರೆ, ಮಂಜುಳ ಕೆಲಸ ಮಾಡುತ್ತಿದ್ದ ನಾಲ್ಕು ಮನೆಗಳ ಪೈಕಿ ಕೊರೊನಾ ಕಾರಣಕ್ಕೆ ಎರಡು ಮನೆಯವರು ಕೆಲಸ ಬರಬಾರದೆಂದು ಸೂಚಿಸಿದ್ದು, ಈಕೆಯ ಆದಾಯವೂ ಕಡಿಮೆಯಾಗಿದೆ.
2018 ರಲ್ಲಿ, ಮಹಾರಾಷ್ಟ್ರದ ಸತಾರಾದಿಂದ ಬೆಂಗಳೂರಿನ ಟೀಚರ್ಸ್ ಕಾಲೋನಿಯಲ್ಲಿದ್ದ ಆರು ಜನರಿದ್ದ ಕುಟುಂಬದ ಮನೆ ಕೆಲಸಕ್ಕಾಗಿ ಅನುರೂಪಾ ಅವರು ಬಂದಿದ್ದರು. ಅನುರೂಪಾ ಅವರ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಅದೇ ವರ್ಷ ನಿಧನರಾಗಿದ್ದರಿಂದ, ಆಕೆಯ ಸಹೋದರ ಉದ್ಯೋಗಕ್ಕೆ ಹೋಗಲು ನಿರಾಕರಿಸಿದ್ದರಿಂದಾಗಿ ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡಲು ಬರಬೇಕಾಯಿತು. ಕೆಲಸ ನೀಡಿದ್ದ ಕುಟುಂಬದೊಂದಿಗೆ ಇರಬೇಕೆಂಬ ಒಪ್ಪಂದದ ಮೇಲೆ ತಿಂಗಳಿಗೆ 10,000 ರೂ. ವೇತನ ನೀಡುವ ಮನೆಗೆ ಆಕೆ ಒಂದು ಏಜೆನ್ಸಿಯ ಮೂಲಕ ಕೆಲಸಕ್ಕೆ ಸೇರಿದರು.
“ನಾನು 2018ರ ಫೆಬ್ರವರಿಯಿಂದ ಅಕ್ಟೋಬರ್ ವರೆಗೆ ಆ ಮನೆಯಲ್ಲಿ ದುಡಿದೆ. ಅಲ್ಲಿ ಬೆಳಗ್ಗೆ ತಿಂಡಿಗೆ 2 ಪೀಸ್ ಬ್ರೆಡ್, ಮಧ್ಯಾಹ್ನದ ಉಟಕ್ಕೆ 2 ರೊಟ್ಟಿ ಮತ್ತು 1 ಕಪ್ ದಾಲ್ ಅಷ್ಟೇ ನೀಡುತ್ತಿದ್ದರು. ಇದರಿಂದ ನಾನು ದುರ್ಬಲಗೊಳ್ಳಲು ಪ್ರಾರಂಭಿಸಿದೆ. ನಾನು ಎಷ್ಟೇ ಶ್ರಮಿಸಿದರೂ ಅದು ಸಾಕಾಗುವುದಿಲ್ಲ. ಇಬ್ಬರು ಮಕ್ಕಳನ್ನು ಹೊರತು ಪಡಿಸಿ ಉಳಿದ ನಾಲ್ವರೂ ನನ್ನ ಮೇಲೆ ನಿಂದಿಸಿ, ಹೊಡೆಯುತ್ತಿದ್ದರು. ಆದ್ದರಿಂದ, ಒಂದು ದಿನ ನಾನು ಕೆಲಸ ಬಿಟ್ಟು ಬಂದೆ” ಎಂದು ಅನುರೂಪ ಹೇಳಿಕೊಂಡಿದ್ದಾರೆ.
ಅನುರೂಪಾ ಅವರಂತೆ, ಅನೇಕ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರನ್ನು ಇತರ ರಾಜ್ಯಗಳಿಂದ ಮನೆಗೆ ಕರೆತರಲಾಗುತ್ತದೆ. ಗೃಹ ಕಾರ್ಮಿಕರ ಉದ್ದೇಶಕ್ಕಾಗಿ ಮಹಿಳೆಯರ ಕಳ್ಳಸಾಗಣೆ ಪ್ರಕರಣಗಳನ್ನು ನಾನು ನೋಡಿದ್ದೇನೆ. ಅಷ್ಟೇ ಅಲ್ಲದೆ ಉದ್ಯೋಗ ಏಜೆನ್ಸಿಗಳನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಬಲವಾದ ಶಾಸಕಗಳ ಅಗತ್ಯವಿದೆ ಎಂದು ಗೃಹ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸ್ತ್ರೀ ಜಗೃತಿ ಸಮಿತಿಯ ಸಂಸ್ಥಾಪಕಿ ಗೀತಾ ಮೆನನ್ ತಿಳಿಸಿದ್ದಾರೆ.
ಗೃಹ ಕಾರ್ಮಿಕರಿಗೆ ಬಲವಾದ ಶಾಸನ ಏಕೆ ಬೇಕು?
ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ, ಸಾಮಾಜಿಕ ರಕ್ಷಣೆ, ನ್ಯಾಯೋಚಿತ ಉದ್ಯೋಗದ ನಿಯಮಗಳು, ತಮ್ಮನ್ನು ಗೃಹ ಕಾರ್ಮಿಕರಾಗಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ, ತಮ್ಮದೇ ಆದ ಸಂಘಗಳನ್ನು ಕಟ್ಟಿಕೊಳ್ಳುವ ಹಾಗೂ ದೇಶೀಯ ಕೆಲಸಕ್ಕೆ ನಿರ್ದಿಷ್ಟವಾದ ಅಗತ್ಯವಿರುವುದರಿಂದ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಸಾಂಸ್ಥಿಕ ಕಾರ್ಯವಿಧಾನಗಳನ್ನು ಒಳಗೊಂಡಿರಬೇಕು. ಇಂತಹ ಹಲವು ಅಗತ್ಯತೆಗಳನ್ನು ಕಾನೂನುಬದ್ಧಗೊಳಿಸಲು ಶಾಸನಗಳ ಅಗತ್ಯವಿದೆ.
ಸ್ತ್ರೀ ಜಾಗೃತಿ ಸಮಿತಿ ಮತ್ತು ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟವು ರಾಜ್ಯದ ಗೃಹ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಗೃಹ ಕಾರ್ಮಿಕ ಸಮುದಾಯಕ್ಕಾಗಿ ಕರಡು ನೀತಿಯನ್ನು ರೂಪಿಸಿತು.
ಪಾಲಿಸಿಯಲ್ಲಿ ಗೃಹ ಕಾರ್ಮಿಕ ಯಾರು ಮತ್ತು ವಿವಿಧ ವರ್ಗದ ಉದ್ಯೋಗಗಳ ಬಗ್ಗೆ ವ್ಯಾಖ್ಯಾನಿಸಲಾಗಿದ್ದು, ನೀತಿಯು ಯೋಗ್ಯವಾದ ಕೆಲಸದ ಪರಿಸ್ಥಿತಿಗಳು, ಕೆಲಸದ ಸಮಯದ ಮಿತಿಗಳು, ಕೆಲಸ ಮಾಡಬಹುದಾದ ಜೀವನ ವೇತನ, ಉಳಿದ ಅವಧಿಗಳು, ವೇತನ ರಜೆ, ಅನಾರೋಗ್ಯ ರಜೆ ಮತ್ತು ಮಾತೃತ್ವ ರಜೆಗಾಗಿ ಆಗ್ರಹಿಸುತ್ತದೆ. ಇದು ಪಿಂಚಣಿ ಮತ್ತು ವಿಮಾ ಸೌಲಭ್ಯಗಳನ್ನು ಸಹ ನೀಡಬೇಕು ಎಂದು ಹೇಳುತ್ತದೆ.
2009ರಲ್ಲಿ ಕರ್ನಾಟಕ ಸರ್ಕಾರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿಯನ್ನು ರಚಿಸಿತ್ತು. ದೇಶೀಯ ಕಾರ್ಮಿಕರನ್ನು ರಾಜ್ಯದಲ್ಲಿ 2004 ರಲ್ಲಿ ಅಸಂಘಟಿತ ವಲಯದಡಿ ಕಾರ್ಮಿಕರೆಂದು ಗುರುತಿಸಲಾಯಿತು. ಆದರೂ, ಬಲವಾದ ನೀತಿಗಳನ್ನೂ ಮತ್ತು ಕನಿಷ್ಠ ವೇತನ ಅಧಿಸೂಚನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಲಿಲ್ಲ ಎಂಬುದು ವಿಷಾಧದ ಸಂಗತಿ.
ಈ ಎಲ್ಲಾ ಕಾರಣಗಳಿಂದಾಗಿ ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ, ಕೆಲಸ ಮಾಡುವ ಸ್ಥಳಗಳಲ್ಲಿ ಭದ್ರತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಕಾನೂನು ನಿಯಮಗಳನ್ನು ಕರ್ನಾಟಕ ಸರ್ಕಾರ ರೂಪಿಸುವ ಮತ್ತು ಅದನ್ನು ಶಿಸ್ತುಬದ್ದವಾಗಿ ಜಾರಿಗೆ ತರುವ ಅಗತ್ಯವಿದೆ.

