Cricket : ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದ ICC…
ಕೊರೊನಾ ವೈರಸ್ ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2021 ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ.

ಈ ಅರ್ಹತಾ ಪಂದ್ಯಗಳು ಜುಲೈನಲ್ಲಿ ನಡೆಯಬೇಕಿತ್ತು. ಐಸಿಸಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಜುಲೈ 3–19 ರಿಂದ ಶ್ರೀಲಂಕಾದಲ್ಲಿ ಮಹಿಳಾ ಅರ್ಹತಾ ಪಂದ್ಯಗಳು ನಡೆಯಬೇಕಿತ್ತು. ಇಲ್ಲಿ ಜಯ ಸಾಧಿಸಿದ ತಂಡಗಳು ನ್ಯೂಜಿಲೆಂಡ್ನಲ್ಲಿ ನಡೆಯಲಿರುವ 2021 ರ ಪಂದ್ಯಾವಳಿಗೆ ಅರ್ಹತೆ ಪಡೆಯಲಿದ್ದವು.
19 ವರ್ಷದೊಳಗಿನವರ ವಿಶ್ವಕಪ್ನ ಯುರೋಪಿಯನ್ ಪ್ರಾದೇಶಿಕ ಅರ್ಹತಾ ಪಂದ್ಯವು ಡೆನ್ಮಾರ್ಕ್ನಲ್ಲಿ ಜುಲೈ 24 ರಿಂದ 30 ರವರೆಗೆ ನಡೆಯಬೇಕಿತ್ತು. ಈ ಪಂದ್ಯಗಳನ್ನೂ ಸಹ ಮುಂದೂಡಲಾಗಿದೆ.


ಈ ಮಧ್ಯ ಕೊರೊನಾ ವೈರಸ್ ನಿಂದ ಉಂಟಾಗುವ ಬಿಕ್ಕಟ್ಟನ್ನು ಮೇಲ್ವಿಚಾರಣೆ ನಡೆಸಿ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಪಾಕಿಸ್ತಾನ ನಿರ್ಧಾರ ಕೈಗೊಳ್ಳುವುದಿಲ್ಲ. ಹಾಗೂ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು PCB ತಿಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ವಾಸಿಮ್ ಖಾನ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಿಸಿಬಿ ಇಂಗ್ಲೆಂಡ್ ಪ್ರವಾಸಕ್ಕೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಜುಲೈ 30 ರಿಂದ ಇಂಗ್ಲೆಂಡ್ ನೆಲದಲ್ಲಿ ಮೂರು ಟೆಸ್ಟ್ ಮತ್ತು ಮೂರು ಟಿ 20 ಪಂದ್ಯಗಳಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿದೆ. ಆದರೆ ಜುಲೈ 1 ರವರೆಗೆ ಇಂಗ್ಲೆಂಡ್ನಲ್ಲಿ ಎಲ್ಲಾ ರೀತಿಯ ವೃತ್ತಿಪರ ಕ್ರಿಕೆಟ್ಗಳನ್ನು ಮುಂದೂಡಲಾಗಿದೆ.
ಕೆಲವು ವಾರಗಳವರೆಗೆ ಕಾಯಿದ ನಂತರವೇ ಪಿಸಿಬಿ ಪ್ರವಾಸದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವಾಸಿಮ್ ಹೇಳಿದ್ದಾರೆ. ಜುಲೈ ತನಕ ಕ್ರಿಕೆಟ್ ಪ್ರಾರಂಭವಾಗುವುದಿಲ್ಲ ಮತ್ತು ಪ್ರೇಕ್ಷಕರು ಇಲ್ಲದೆ ಸರಣಿಯನ್ನು ಆಡುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ.

ಆಟಗಾರರು ಮತ್ತು ಅಧಿಕಾರಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ವಾಸಿಮ್ ತಿಳಿಸಿದ್ದಾರೆ. ಈ ಸಮಯದಲ್ಲಿ ಇಂಗ್ಲೆಂಡ್ ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ.
ಇಂಗ್ಲೆಂಡ್ ನಲ್ಲಿ ಈವರೆಗೆ 223060 ಜನರು ಈ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದು, 32,065 ಜನರು ಈ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ.

