ಲಾಕ್​ಡೌನ್​ ಸಡಿಲಿಕೆ : ದೇಶಾದ್ಯಂತ ಹೆಚ್ಚಿದ ಸೋಂಕಿತರ ಸಂಖ್ಯೆ : ಒಂದೇ ದಿನದಲ್ಲಿ 5496 ಹೊಸ ಕೇಸ್..!

ದೇಶದಲ್ಲಿ ಕೊರೊನಾ ಕಾರ್ಮೋಡ ವ್ಯಾಪಕವಾಗಿ ಆವರಿಸುತ್ತಿದ್ದು ಮಂಗಳವಾರ ಒಂದೇ ದಿನದಲ್ಲಿ 5496 ಹೊಸ ಪ್ರಕರಣಗಳು ದಾಖಲಾಗಿದ್ದು ಇದು ದೇಶದಲ್ಲಿ ಮೊದಲನೇ ಬಾರಿ.

ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ದೇಶದದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸೋಮವಾರವಷ್ಟೇ 1 ಲಕ್ಷ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಈಗ 1,05,498ಕ್ಕೆ ಹೆಚ್ಚಳವಾಗಿದೆ. ಮೇ 10ರಂದು 5426 ಪ್ರಕರಣಗಳು ದಾಖಲಾಗಿದ್ದು ಈವರೆಗಿನ ದೈನಂದಿನ ಗರಿಷ್ಠ ಎನಿಸಿಕೊಂಡಿತ್ತು. ಇದೇ ವೇಳೆ ಕೊರೋನಾಕ್ಕೆ ಮಂಗಳವಾರ ದೇಶದಲ್ಲಿ 116 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 3145ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ದೇಶಾದ್ಯಂತ 39174 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ಕೊರೋನಾದ ಕೇಂದ್ರಬಿಂದುವಾಗಿರುವ ಮಹಾರಾಷ್ಟ್ರದಲ್ಲಿ ಮತ್ತೆ 2,100 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 37,158ಕ್ಕೆ ಏರಿಕೆ ಆಗಿದೆ.

ಈ ಮಧ್ಯೆ ದೇಶದ ಇತರ ರಾಜ್ಯಗಳಲ್ಲೂ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ.  ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ 12448ಕ್ಕೆ ಏರಿಕೆಯಾಗಿದ್ದರೆ, ಗುಜರಾತಿನಲ್ಲಿ 12141 ಹಾಗೂ ದೆಹಲಿಯಲ್ಲಿ 10554 ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಮಂಗಳವಾರಕ್ಕೆ 2,127 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು 37,158 ಕೊರೊನಾ ಸೋಂಕಿತರು ಇದ್ದಾರೆ. ಗುಜರಾತ್ ಗುಜರಾತ್ ನಲ್ಲಿ 395 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು 12,141 ಕೊರೊನಾ ಕೇಸ್ ಇವೆ .ತಮಿಳುನಾಡಿನಲ್ಲಿ 688 ಹೊಸ ಪ್ರಕರಣಗಳಾದರೆ ಒಟ್ಟು 12,448 ಕೇಸ್, ಇನ್ನೂ ರಾಜಧಾನಿ ದೆಹಲಿಯಲ್ಲಿ 500 ಹೊಸ ಪ್ರಕರಣಗಳು ಒಟ್ಟು 10,554  ಕೊರೊನಾ ಸೋಂಕಿತರು ಇದ್ದಾರೆ.ರಾಜಸ್ಥಾನ್ ದಲ್ಲಿ 338 ಪ್ರಕರಣಗಳು  ಒಟ್ಟು 5,845 ಕೊರೊನಾ ಸೋಂಕಿತರು ಇದ್ದಾರೆ. ಉತ್ತರ ಪ್ರದೇಶದಲ್ಲಿ 323 ಹೊಸ ಪ್ರಕರಣಗಳು ಒಟ್ಟು   4,926 ಕೊರೊನಾ ಸೋಂಕಿತರು ಇದ್ದಾರೆ. ಪಶ್ಚಿಮ‌ಬಂಗಾಳದಲ್ಲಿ 136 ಹೊಸ ಪ್ರಕರಣಗಳು ದಾಖಲಾದರೆ ಒಟ್ಟು 2961 ಕೊರೊನಾ ಸೋಂಕಿತರು ಇದ್ದಾರೆ.ಪಂಜಾಬ್ನಲ್ಲಿ 22 ಹೊಸ ಪ್ರಕರಣಗಳು ಒಟ್ಟು 2,002 ಕೇಸ್, ತೆಲಂಗಾಣದಲ್ಲಿ 42 ಹೊಸ ಪ್ರಕರಣಗಳು ಒಟ್ಟು 1,634 ಕೇಸ್, ಕರ್ನಾಟಕದಲ್ಲಿ 149 ಹೊಸ ಪ್ರಕರಣಗಳು ಒಟ್ಟು1,395 ಕೇಸ್,ಜಮ್ಮು ಕಾಶ್ಮೀರದಲ್ಲಿ 28  ಹೊಸ ಪ್ರಕರಣಗಳು ಒಟ್ಟು 1,317 ಕೊರೊನಾ ಸೋಂಕಿತರು ಇದ್ದಾರೆ.

ಹರಿಯಾಣದಲ್ಲಿ  36 ಹೊಸ ಪ್ರಕರಣಗಳು;  ಒಟ್ಟು 964 ಕೊರೊನಾ ಸೋಂಕಿತರು ಇದ್ದಾರೆ. ಕೇರಳದಲ್ಲಿ 12 ಹೊಸ ಪ್ರಕರಣಗಳು; ಒಟ್ಟು 642 ಕೇಸ್, ಅಸ್ಸಾಂನಲ್ಲಿ 21 ಹೊಸ ಪ್ರಕರಣಗಳು; ಒಟ್ಟು 157 ಕೇಸ್ ದಾಖಲಾಗಿವೆ.ಛತ್ತೀಸ್ಗಢನಲ್ಲಿ 5 ಹೊಸ ಪ್ರಕರಣಗಳು; ಒಟ್ಟು 100 ಕೇಸ್. ಉತ್ತರಾಖಂಡ್ ನಲ್ಲಿ 7 ಹೊಸ ಪ್ರಕರಣಗಳು; ಒಟ್ಟು 111 ಕೊರೊನಾ ಸೋಂಕಿತರು ಇದ್ದಾರೆ. ಗೋವಾದಲ್ಲಿ 8 ಹೊಸ ಪ್ರಕರಣಗಳು; ಒಟ್ಟು 46 ಕೊರೊನಾ ಸೋಂಕಿತರು ಇದ್ದಾರೆ.
ಪುದುಚೇರಿಯಲ್ಲಿ ಕೇವಲ 1 ಹೊಸ ಪ್ರಕರಣ ದಾಖಲಾಗಿದ್ದು ಒಟ್ಟು 9 ಕೊರೊನಾ ಸೋಂಕಿತರು ಇದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights