150 ಹುದ್ದೆಗಳು ತಲಾ 25ರಿಂದ 30 ಲಕ್ಷಕ್ಕೆ ಮಾರಾಟ ಮಾಡಲಾಗಿದೆ: ಹೆಚ್‌ಡಿಕೆ ಆರೋಪ

ಮೈಸೂರಿನಲ್ಲಿರುವ ಹಾಲು ಉತ್ಪಾದನಾ ಘಟಕ ಮೈಮುಲ್‌ನಲ್ಲಿ 150 ಹುದ್ದೆಗಳನ್ನು ತಲಾ 25 ರಿಂದ 30 ಲಕ್ಷ ರೂಪಾಯಿ ಸೇಲ್‌ ಮಾಡಲಾಗಿದೆ ಎಂಧು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರು- ಚಾಮರಾಜನಗರ ಹಾಲು ಉತ್ಪಾದಕರ ಸಹಕಾರ ಸಂಘ (ಮೈಮುಲ್​)ದಲ್ಲಿ 150 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಈ ಹುದ್ದೆಗಳನ್ನು ಒಂದೊಂದು ಹುದ್ದೆಗೆ ತಲಾ 25-30 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಇದರಲ್ಲಿ 50-60 ಕೋಟಿ ಹಣ ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಯಾರು ಹಣ ಸಂಗ್ರಹ ಮಾಡಿದ್ದಾರೆ ಅನ್ನೋದನ್ನೂ ಗಮನಿಸಿದ್ದೇನೆ. ಆ ಹಣ ಚುನಾವಣೆಗಳಿಗೂ ಬಳಕೆಯಾಗುತ್ತಿದೆ. ಸಹಕಾರ ಕ್ಷೇತ್ರದ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲ ಮಾಡುವುದಕ್ಕಾಗಿ ಇಲ್ಲ. ನಾವು ಯಾರನ್ನು ನಂಬಿದ್ದೆವೋ ಅವರು ನಮ್ಮ ಜತೆಯಲ್ಲಿ ಇಲ್ಲ. ಹೊಸ ನಾಯಕತ್ವ ಸೃಷ್ಟಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ 07 ಜನರ ಸಿಂಡಿಕೇಟ್ ಮಾಡಿದ್ದೇವೆ. ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹುಣಸೂರಿನಲ್ಲಿ ನಾನೇ ಖುದ್ದು ಸಭೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ‘ಸಿಡಿ ಕೇಸ್ ಎಸ್ಐಟಿ ತನಿಖೆಗೆ ನೀಡಿದ್ದು ತಿಪ್ಪೆ ಸಾರಿಸೋ ಕೆಲಸ’- ಹೆಚ್ಡಿ ಕುಮಾರಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights