ಫ್ಯಾಕ್ಟ್‌ಚೆಕ್: ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ʻವಲ್ಗರ್‌ ಪ್ರೊಪಗಾಂಡಾʼ ಎಂದಿದಕ್ಕೆ ನಾಡವ್ ಕ್ಷಮೆ ಕೇಳಿದ್ದು ನಿಜವೇ?

ದಿ ಕಾಶ್ಮೀರ್ ಫೈಲ್ಸ್ ಕುರಿತಾದ ತಮ್ಮ ಹೇಳಿಕೆಗೆ ನಾದವ್ ಲ್ಯಾಪಿಡ್ ಕ್ಷಮೆಯಾಚಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾಡವ್ ಲ್ಯಾಪಿಡ್ ಟೀಕಿಸಿದ್ದರು. ತಮ್ಮ ಹೇಳಿಕೆಯನ್ನು ಸಮರ್ಥಿಸುತ್ತಲೇ ಬಂದಿದ್ದ ಅವರು  ಕೊನೆಗೂ ಕ್ಷಮೆಯಾಚಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ನಾಡವ್‌ ಲ್ಯಾಪಿಡ್‌ ಅವರ ಹೇಳಿಕೆಗೆ ತೀವ್ರ ಆಕ್ಷೇಪ ಮತ್ತು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆಯಾಚಿಸಿ, ದಿ ಕಾಶ್ಮೀರ್ ಫೈಲ್ಸ್ ಒಂದು ‘ಅದ್ಭುತ’ ಚಿತ್ರ ಎಂದು ಕರೆದಿದ್ದಾರೆ ಎಂಬ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ  ಶ್ರೀಜಿತ್ ಪಣಿಕ್ಕರ್ ಎಂಬ ಟ್ವಿಟರ್ ಬಳಕೆದಾರರು ಈ ಪೋಸ್ಟ್‌ಅನ್ನು  ಹಂಚಿಕೊಂಡಿದ್ದು, ಕಮ್ಯುನಿಸ್ಟರು ಯು-ಟರ್ನ್ ರಾಜರು! “ಇದೊಂದು ಅದ್ಭುತ ಚಲನಚಿತ್ರವಾಗಿದೆ, #TheKashmirFiles ಕುರಿತು ನಾಡವ್ ಲ್ಯಾಪಿಡ್ ಹೀಗೆ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾ (IFFI)ದಲ್ಲಿ ಜ್ಯೂರಿ ಹೆಡ್‌ ಆಗಿದ್ದ ಇಸ್ರೇಲಿ ಸಿನಿಮಾ ನಿರ್ಮಾಪಕ ನಾಡವ್‌ ಲ್ಯಾಪಿಡ್‌ ದ ಕಾಶ್ಮೀರ್‌ ಫೈಲ್ಸ್‌ ಅನ್ನು ʻವಲ್ಗರ್‌ ಪ್ರೊಪಗಾಂಡಾʼ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸುತ್ತಲೇ ಬಂದಿದ್ದ ನಾಡವ್‌ ಕೊನೆಗೂ ಕ್ಷಮೆಯಾಚಿಸಿದರು. ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಟೀಕಿಸಿದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾಡವ್ ಲ್ಯಾಪಿಡ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದು ಕ್ಷಮೆ ಕೋರಿದ್ದಾರೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ನಡೆಸಿದಾಗ, ತ್ರಕರ್ತ ಕರಣ್ ಥಾಪರ್ ತೆಗೆದ ನಾಡವ್ ಅವರ ಸಂದರ್ಶನದ YouTube ವೀಡಿಯೊ ಲಭ್ಯವಾಗಿದೆ.

NDTV ಮತ್ತು ZoomTv ಯ ವರದಿಗಳನ್ನು ಪರಿಶೀಲಿಸಿದಾಗ, ಚಿತ್ರದ ಕುರಿತಾದ ತನ್ನ ಹೇಳಿಕೆಗಳಿಗೆ ನಾಡವ್ ಕ್ಷಮೆಯಾಚಿಸಲಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರ ಹೇಳಿಕೆಗಳು ಸಂತ್ರಸ್ತರ ಸಂಬಂಧಿಕರಿಗೆ ಅವಮಾನವಾಗಿದ್ದರೆ, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಅವರ ನಿಖರವಾದ ಮಾತುಗಳು ಹೀಗಿವೆ “ನನ್ನ ಗುರಿ ಮತ್ತು ಉದ್ದೇಶ ಎಂದಿಗೂ ಯಾರನ್ನೂ ಅವಮಾನಿಸದಾಗಿರಲಿಲ್ಲ. ಜನರಿಗೆ ಅಥವಾ ಅವರ ಸಂಬಂಧಿಕರಿಗೆ ನಮ್ಮ ಮಾತು ನೋವುಂಟು ಮಾಡಿದ್ದರೆ ನಾನು ಸಂಪೂರ್ಣವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. CNN-News18  ಪ್ರಕಟಿಸಿದ ಲೇಖನವೂ ಇದನ್ನೇ ಪ್ರತಿಪಾದಿಸಿದೆ.

ಡಿಸೆಂಬರ್ 1 ದಿ ವೈರ್‌ಗೆ ಲ್ಯಾಪಿಡ್ ನೀಡಿದ ಸಂದರ್ಶನದಲ್ಲಿ ಪ್ರಕಟವಾದ ಈ ಸುದ್ದಿ ವರದಿಗಳಲ್ಲಿ ಮತ್ತಷ್ಟು ಸ್ಪಷ್ಟತೆ ಸಿಕ್ಕಿದ್ದು. 10:30 ನಿಮಿಷಗಳಲ್ಲಿ, ಸಂದರ್ಶಕ ಕರಣ್ ಥಾಪರ್ ಕೇಳಿದ ಪ್ರಶ್ನೆಗೆ ಉತ್ತರಿಸುವ ನಾದವ್ , “ನಾನು ಹೇಳಿದಂತೆ ಅವರು [ಸಂತ್ರಸ್ತರು ಮತ್ತು ಸಂಬಂಧಿಗಳಿಗೆ] ತಮ್ಮ ಆತ್ಮೀಯರ, ತಮ್ಮ ಅಥವಾ ಸಂಭವಿಸಿದ ಭಯಾನಕ ಸಂಗತಿಗಳ ಸ್ಮರಣೆಯನ್ನು ನಾನು ಅಗೌರವಗೊಳಿಸಿದ್ದೇನೆ ಎಂದು ಭಾವಿಸಿದರೆ ನಾನು ನಿಜವಾಗಿಯೂ ಕ್ಷಮೆ ಕೇಳುತ್ತೇನೆ.ಆದರೆ ಸಿನಿಮಾದ ಬಗ್ಗೆ ಹೇಳಿದ ಒಂದು ಮಾತನ್ನು ನಾನು ವಾಪಸ್ ತೆಗೆದುಕೊಳ್ಳುವುದಿಲ್ಲ. ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

“ಸಿನಿಮಾ ಅದ್ಭುತವಾಗಿದೆ ಎಂದು ನಾನು ಎಲ್ಲೋ ಓದಿದ್ದೇನೆ. ನನ್ನ ಪ್ರಕಾರ ಇದು ಅದ್ಭುತ ಎಂದು ಆತ ಸಂಪೂರ್ಣವಾಗಿ ಹುಚ್ಚನಾಗಿರಬೇಕು ಮತ್ತು ಸ್ಕಿಜೋಫ್ರೇನಿಕ್ ಆಗಿರಬೇಕು. ಆದರೆ ನನ್ನ ಹೇಳಿಕೆ ಬಗ್ಗೆ ನನಗೆ ಸ್ಪಷ್ಟತೆ ಇದೆ. ಮತ್ತು ನನ್ನ ಹೇಳಿಕೆಗೆ ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.

ಆಲ್ಟ್ ನ್ಯೂಸ್ ನಾದವ್ ಲ್ಯಾಪಿಡ್ ಅವರ ಇಂಡಿಯಾ ಟುಡೇ ಸಂದರ್ಶನವನ್ನು ಸಹ ವೀಕ್ಷಿಸಿದೆ, ಅದರ ಆಧಾರದ ಮೇಲೆ ಹಿಂದೂಸ್ತಾನ್ ಟೈಮ್ಸ್ ವರದಿಯನ್ನು ಪ್ರಕಟಿಸಿತು, ನಾದವ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ‘ಅದ್ಭುತ ಚಲನಚಿತ್ರ’ ಎಂದು ಕರೆದಿದ್ದಾರೆ. ಈ ಸಂದರ್ಶನದಲ್ಲಿ ಯಾವುದೇ ಹಂತದಲ್ಲೂ ಲ್ಯಾಪಿಡ್ ತನ್ನ ನಿಲುವನ್ನು ಬದಲಾಯಿಸಲಿಲ್ಲ. ಈ ಸಂದರ್ಶನದಲ್ಲಿ ಅವರು ಎಂದಿಗೂ ಚಿತ್ರವನ್ನು ‘ಅದ್ಭುತ ಚಿತ್ರ’ ಎಂದು ಕರೆಯಲಿಲ್ಲ. ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಚಲನಚಿತ್ರವನ್ನು ಇಷ್ಟಪಡುವ ಅನೇಕ ಜನರಿದ್ದಾರೆ ಎಂಬ ಅಂಶವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ, ಇದು ಅದ್ಭುತ ಚಲನಚಿತ್ರ ಎಂದು ಜನ ಭಾವಿಸುತ್ತಾರೆ ಎಂದಾದರೆ ಅದಕ್ಕೆ ಅವರು ಹಕ್ಕುದಾರರು, ಆದರೆ ನಾನು ಚಲನಚಿತ್ರ ನಿರ್ಮಾಪಕನಾಗಿ, ಈ ವರ್ಷ ತೀರ್ಪುಗಾರರ ಅಧ್ಯಕ್ಷರಾಗಿ ಗೋವಾಕ್ಕೆ ಆಹ್ವಾನಿಸಲ್ಪಟ್ಟೆ. ಚಲನಚಿತ್ರಗಳ ಬಗ್ಗೆ ನನ್ನ ಅಭಿಪ್ರಾಯ, ನನ್ನ ದೃಷ್ಟಿಕೋನ ಮತ್ತು ತೀರ್ಪುಗಾರರ ದೃಷ್ಟಿಕೋನವನ್ನು ವ್ಯಕ್ತಪಡಿಸಲು ನಾನೂ ಕೂಡ ಅಷ್ಟೆ ಸ್ವತಂತ್ರನು. ಹಾಗಾಗಿ ನನ್ನ ಹೇಳಿಕೆಗೆ ನಾನು ಈಗಲೂ ಬದ್ದ ಮತ್ತು ಕ್ಷಮೆ ಕೇಳುವ ಅಗತ್ಯ ಇಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರದ ಕುರಿತಾಗಿ ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾ (IFFI)ದಲ್ಲಿ ಜ್ಯೂರಿ ಹೆಡ್‌ ಆಗಿದ್ದ ಇಸ್ರೇಲಿ ಸಿನಿಮಾ ನಿರ್ಮಾಪಕ ನಾಡವ್‌ ಲ್ಯಾಪಿಡ್‌ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತು ಕ್ಷಮೆ ಕೇಳುವ ಪ್ರಶ್ನೆ ಇಲ್ಲ ಎಂಧು ಹೇಳಿದ್ದಾರೆ. ಆದರೆ ಕೆಲವು ಮಾಧ್ಯಮಗಳು ಇದನ್ನು ತಿರುಚಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಟೀಕೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸಿವೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಜರಾತ್ ಮಾಡೆಲ್ ಎಂದು ಮುಂಬೈ ಚಿತ್ರವನ್ನು ಹಂಚಿಕೊಂಡ BJP ಪಕ್ಷ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights