ಫ್ಯಾಕ್ಟ್‌ಚೆಕ್: ಜಾಮೂನ್ ಪಾತ್ರೆಗೆ ಮುಸ್ಲಿಂ ವ್ಯಕ್ತಿ “ಮೂತ್ರ” ಮಾಡಿದ್ದು ನಿಜವೇ?

ಮದುವೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಿಹಿ ತಿನಿಸು ಪಾತ್ರೆಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ ಎಂದು ಉತ್ತರ ಪ್ರದೇಶ, ಉತ್ತರಾಖಂಡದ ಜೀ ಹಿಂದಿ ಸುದ್ದಿವಾಹಿನಿಯು ಸುದ್ದಿಯನ್ನು ಪ್ರಕಟಿಸಿದೆ. ಸುದ್ದಿವಾಹಿನಿಯು ಪ್ರಸಾರ ಮಾಡಿದ ಕ್ಲಿಪ್ ಅನ್ನು ಹಿಂದಿಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು (ಬಂದೆ ನೆ ಶಾದಿಗೆ ಬನ್ ರಹೇ ಖಾನೆ ಮೇಲೆ ಕಿಯಾ ಕುಚ್ ಏಸಾ, ದೇಖಕರ್ ಘಿ) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಇದನ್ನು ಅನುವಾದಿಸಿದಾಗ “ಮದುವೆಗೆಂದು ತಯಾರಾಗುತ್ತಿದ್ದ ಆಹಾರಕ್ಕೆ ಆ ವ್ಯಕ್ತಿ ಮಾಡಿದ್ದನ್ನು ನೋಡಿದರೆ ನಿಮಗೆ ಅಸಹ್ಯವಾಗುತ್ತದೆ”.

ಅನೇಕ ಟ್ವಿಟ್ಟರ್ ಬಳಕೆದಾರರು ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಮುಸ್ಲಿಂ ಎಂಬ ಹೇಳಿಕೆಯೊಂದಿಗೆ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಈ ಘಟನೆಯನ್ನು ‘ಜಿಹಾದ್’ ಎಂದು ಹೆಸರಿಸಿದ್ದಾರೆ,  ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಬಿಜೆಪಿ ಯುವ ವಿಭಾಗದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಿಚಾ ರಾಜ್‌ಪೂತ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದ ‘ಫುಡ್ ಜಿಹಾದ್’ ಎಂಬ ಪದವನ್ನು ಬಳಕೆ ಮಾಡಿದ್ದಾರೆ.”ಫುಡ್ ಜಿಹಾದ್ ಕೆ ಬಾದ್ ಈ #ಜಿಹಾದ್ ಕಾ ಕ್ಯಾ ನಾಮ್?” ಎಂದಿದ್ದಾರೆ.

@TheDeepak2022 ಎಂಬ ಟ್ವಿಟರ್ ಹ್ಯಾಂಡಲ್‌ನಿಂದ ಿದೇ ಫೋಟೋವನ್ನು ಟ್ವೀಟ್ ಮಾಡಿರುವ ಬಳಕೆದಾರು ” ಮದುವೆಯ ಪಾರ್ಟಿಯಲ್ಲಿ ತಿನ್ನುವ ಮೊದಲು ಅಡುಗೆ ಮಾಡುವವರು ಮತ್ತು ಅಡುಗೆಯವರ ಹೆಸರನ್ನು ತಿಳಿದುಕೊಳ್ಳಬೇಕು” ಎಂದು ಕೇಳಿದ್ದಾರೆ.

ಫೇಸ್ ಬುಕ್ ನಲ್ಲೂ ವಿಡಿಯೋ ವೈರಲ್ ಆಗಿದೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ವೈರಲ್ ಆಗಿರುವ ಜಾಮೂನ್ ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಇದು ಸುಳ್ಳು ಸುದ್ದಿ ಆಗಿದೆ. ಇದೊಂದು ಪ್ರಾಂಕ್ ವಿಡಿಯೋವನ್ನು (ತಮಾಷೆ) ನೈಜ ಘಟನೆ ಎಂದು ಪ್ರತಿಪಾದಿಸಿ ಜೀ ಟಿವಿ ಹಂಚಿಕೊಂಡಿದೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಗುಲಾಬ್ ಜಾಮೂನ್‌ಗಳಿದ್ದ ಪಾತ್ರೆಯಲ್ಲಿ ವ್ಯಕ್ತಿಯೊಬ್ಬ ಸ್ವಲ್ಪ ದ್ರವವನ್ನು ಸುರಿಯುವುದನ್ನು ತೋರಿಸುವ ತಮಾಷೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, Instagram ವೀಡಿಯೊದ ಕೊನೆಯಲ್ಲಿ, ವ್ಯಕ್ತಿಯು ಬಾಟಲಿಯನ್ನು ಹಿಡಿದಿರುವುದನ್ನು ಕಾಣಬಹುದು, ಅದರಲ್ಲಿ ದ್ರವವನ್ನು ಟಬ್‌ಗೆ ಸುರಿಯಲಾಗುತ್ತದೆ. ಆದರೆ ಇದನ್ನು ಮದುವೆಗೆಂದು ಸಿದ್ದ ಪಡಿಸಿದ ಆಹಾರದ ಮೇಲೆ ವ್ಯಕ್ತಿಯು ಮೂತ್ರ ವಿಸರ್ಜನೆ ಮಾಡುತ್ತಿರುವ ನೈಜ ಘಟನೆಯಾಗಿ ಹಂಚಿಕೊಳ್ಳಲಾಗಿದೆ.

ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಸಿದ್ದಪಡಿಸಿದ ಜಾಮೂನ್ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ ಎನ್ನುವಂತೆ ತೋರಿಸಲಾಗದ್ದು, ಮೂಲ ವೀಡಿಯೊದ ಕೊನೆಯ ಕೆಲವು ಫ್ರೇಮ್‌ಗಳನ್ನು ವೈರಲ್ ವೀಡಿಯೊದಲ್ಲಿ ಕ್ಲಿಪ್ ಮಾಡಲಾಗಿದೆ. ಆದರೆ ಆತನ ಕೈಯಲ್ಲಿ ಬಾಟಲಿಯನ್ನು ಕಾಣಬಹುದಾಗಿದ್ದು, ಅದರ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡಿದ್ದೇವೆ. ಸಂಪೂರ್ಣ ಕ್ಲಿಪ್ ನೋಡಿದಾಗ ಇದು ತಮಾಷೆಯ ವಿಡಿಯೋ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಾಮೂನ್ ಪಾತ್ರಗೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುವ ವೀಡಿಯೊ ವಾಸ್ತವವಾಗಿ ಎಡಿಟ್ ಮಾಡಿದ ಕ್ಲಿಪ್ ಆಗಿದೆ. ವಾಸ್ತವವಾಗಿ ಮೂಲ ವಿಡಿಯೋದಲ್ಲಿ ವ್ಯಕ್ತಿಯು ಬಾಟಲಿಯಿಂದ ಟಬ್‌ಗೆ ದ್ರವವನ್ನು ಸುರಿಯುತ್ತಿರುವುದು ಸ್ಪಷ್ಟವಾಗಿದೆ. ವೈರಲ್ ವೀಡಿಯೊವನ್ನು ಕೋಮು ವೈಷಮ್ಯದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ರೋಡ್‌ ಶೋ ವೇಳೆ ” ಕೇಜ್ರಿವಾಲ್” ಪರ ಘೋಷಣೆ ಕೂಗಲಾಯಿತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.