ಫ್ಯಾಕ್ಟ್‌ಚೆಕ್: ವಿಶ್ವಸಂಸ್ಥೆಯಿಂದ ಪಡೆದ ಸಾಲವನ್ನು ತೀರಿಸಿಯೇ ಬಿಟ್ರ ಮೋದಿ?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಸಂಸ್ಥೆಯಿಂದ ಪಡೆದ ಎಲ್ಲಾ ಸಾಲವನ್ನೂ ತೀರಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 

ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿರುವ ಸಂದೇಶದ ಪ್ರಕಾರ, ವಿಶ್ವಸಂಸ್ಥೆಯ ಎಲ್ಲಾ ಸಾಲಗಳನ್ನು ತೀರಿಸಿದ ವಿಶ್ವದ 35 ರಾಷ್ಟ್ರಗಳ ಪೈಕಿ ಭಾರತವೂ ಒಂದು. ಇದು ನನ್ನ ಹೆಮ್ಮೆ. ಕಳೆದ 70 ವರ್ಷದಲ್ಲಿ ವಿಶ್ವಬ್ಯಾಂಕಿನಿಂದ ಸಾಲ ಪಡೆದವರಲ್ಲಿ ಭಾರತ ಮುಖ್ಯವಾದ ದೇಶ. ಹಾಗಾಗಿ ಭಾರತದ ಪ್ರಜೆಯೂ ಹುಟ್ಟುತ್ತಲೇ ಸಾಲಗಾರನಾಗಿರುತ್ತಿದ್ದ. ಶ್ರೇಷ್ಠ ಅರ್ಥಶಾಸ್ತ್ರಜ್ಞರು ಬಗೆಹರಿಸದ ಈ ಸಮಸ್ಯೆಯನ್ನು ನಮ್ಮ ಚಾಯ್‌ವಾಲಾ ಮೋದಿ ಪರಿಹರಿಸಿದ್ದಾರೆ. ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಏನ್‌ ಸುದ್ದಿ.ಕಾಂ ಓದುಗರು ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸುವಂತೆ ವಿನಂತಿ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯ ವಾಸ್ತವವನ್ನು ತಿಳಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ವೈರಲ್ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಶ್ವಸಂಸ್ಥೆಯ ಸಾಲದ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್ ಸರ್ಚ್ ಮಾಡಿದಾಗ, ದಿ ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ಪ್ರಕಟಿಸಿದ ಫ್ಯಾಕ್ಟ್‌ಚೆಕ್ ವರದಿ ಲಭ್ಯವಾಗಿದೆ.

ವರದಿಯ ಪ್ರಕಾರ ವಿಶ್ವ ಬ್ಯಾಂಕ್‍ನ ದಾಖಲೆಗಳನ್ನು ಪರಿಶೀಲಿಸಿದಾಗ 1/1/2015 ಮತ್ತು 31/12/2018ರ ಅವಧಿಯಲ್ಲಿ 66 ಯೋಜನೆಗಳಿಗಾಗಿ ಇಲ್ಲಿಂದ ಧನ ಸಹಾಯ ಪಡೆಯಲಾಗಿದೆ. 2015 ಡಿಸೆಂಬರ್ 15ರಂದು ಸ್ವಚ್ಛ ಭಾರತ್ ಮಿಷನ್ ಸಪೋರ್ಟ್ ಆಪರೇಷನ್‍ಗಾಗಿ 1.5 ಬಿಲಿಯನ್ ಅಮೆರಿಕನ್ ಡಾಲರ್ (₹10,600 ಕೋಟಿ -2019 ರಂತೆ) ಸಾಲ ಪಡೆಯಲಾಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಹಿಂದೆಯೂ ಇದೇ ಸುದ್ದಿ ವೈರಲ್ ಆಗಿತ್ತು:

ವಾಸ್ತವವಾಗಿ ಭಾರತ ಸರ್ಕಾರ ಯಾವುದೇ ಸಾಲವನ್ನು ತೀರಿಸಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ಬಹಳ ಹಿಂದಿನಿಂದಲೂ ಪ್ರಸಾರವಾಗುತ್ತಲೇ ಇದೆ.

6 ವರ್ಷದಲ್ಲಿ ಮೋದಿ ಭಾರತೀಯರು ಮತ್ತು ಭಾರತದ ಹಣೆಬರಹ ಬದಲಿಸಿದ್ದಾರೆ. ಮೋದಿ ವಿಶ್ವಬ್ಯಾಂಕಿನಿಂದ ಪಡೆದ ಎಲ್ಲಾ ಸಾಲವನ್ನೂ ತೀರಿಸಿದ್ದಾರೆ’ ಎಂದು ಹಂಚಿಕೊಳ್ಳಲಾಗಿತ್ತು. ಭಾರತದ ಶಾಶ್ವತ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಅವರ ಟ್ವೀಟರ್‌ ಖಾತೆಯಲ್ಲಿ ಮಾಡಿದ್ದ ಟ್ವೀಟ್‌ ನ ಸ್ಕ್ರೀನ್‌ಶಾಟ್‌ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಈ ಮೇಲಿನ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು.

Image

ಆದರೆ ನಿಜಕ್ಕೂ ಮೋದಿ ಸರ್ಕಾರ ವಿಶ್ವಸಂಸ್ಥೆಯಿಂದ ಪಡೆದ ಎಲ್ಲಾ ಸಾಲವನ್ನು ತೀರಿಸಿದೆಯೇ ಎಂದು ಪರಿಶೀಲಿಸಿದಾಗ ಅಕ್ಬರುದ್ದೀನ್‌ ವಿಶ್ವಸಂಸ್ಥೆಯ ವೇತನ ಬಾಕಿ ಬಗ್ಗೆ ಟ್ವೀಟ್‌ ಮಾಡಿದ್ದರೇ ಹೊರತು ಸಾಲ ಬಾಕಿ ಕುರಿತಲ್ಲ. ವಿಶ್ವಸಂಸ್ಥೆಯ ಆರ್ಟಿಕಲ್‌ 17ರ ಪ್ರಕಾರ ಸಂಸ್ಥೆಯ ಎಲ್ಲಾ ಖರ್ಚನ್ನು ಸಾಮಾನ್ಯ ಸಭೆಯ ಸದಸ್ಯ ರಾಷ್ಟ್ರಗಳು ನೀಡಬೇಕು. ಭಾರತ ಈ ಹಣವನ್ನು ಸಂದಾಯ ಮಾಡಿದೆ ಎನ್ನಲಾಗಿದೆ. ಆದರೆ ಭಾರತ ವಿಶ್ವಬ್ಯಾಂಕಿನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿಲ್ಲ. ಅಂಕಿಅಂಶವೊಂದರ ಪ್ರಕಾರ ವಿಶ್ವಬ್ಯಾಂಕಿನಿಂದ ಅತಿ ಹೆಚ್ಚು ಸಾಲದ ಪಡೆದ ಪ್ರಮುಖ ದೇಶಗಳಲ್ಲಿ ಭಾರತ ಕೂಡ ಒಂದು.

01/01/2015- 14/01/2019ರ ವರೆಗಿನ ಅವಧಿಯಲ್ಲಿ ಸಾಲದ ಬಗ್ಗೆ ವಿಶ್ವ ಬ್ಯಾಂಕ್ ಮಾಹಿತಿ 2016ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿ ಪ್ರಕಾರ ಸ್ವತಂತ್ರ ರಾಷ್ಟ್ರಗಳ ಪೈಕಿ ಅತೀ ಹೆಚ್ಚು ಸಾಲ ಪಡೆದ ದೇಶ ಭಾರತ ಆಗಿದೆ. 1945- 2015ರ ಕಾಲಾವಧಿಯಲ್ಲಿ ವಿಶ್ವ ಬ್ಯಾಂಕ್ ಭಾರತಕ್ಕೆ 102.1 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಸಾಲದ ಮೊತ್ತ ಅಧಿಕ ಆಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತ್ ಚುನಾವಣಾ ಸಂದರ್ಭದಲ್ಲಿ ಇಂತಹ ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ. 2014ರಲ್ಲಿ ನರೇಂದ್ರ ಮೋದಿಯವರಿಗೆ ಇದ್ದ ಇಮೇಜ್ ಈಗ ಕ್ಷೀಣಿಸಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನುBJP ಐಟಿ ಸೆಲ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ಮೋದಿಯವರ ಇಮೇಜ್‌ ಅನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿವೆ ಎಂದು ಸಾರ್ವಜನಿಕ ವಲಗಳಲ್ಲಿ ಚರ್ಚೆ ಯಾಗುತ್ತಿದೆ. ಆದರೆ ವಾಸ್ತವವಾಗಿ ಮೋದಿ ವಿಶ್ವಸಂಸ್ಥೆಯ ಎಲ್ಲಾ ಸಾಲವನ್ನು ತೀರಿಸಿದ್ದಾರೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ರೋಡ್‌ ಶೋ ವೇಳೆ ” ಕೇಜ್ರಿವಾಲ್” ಪರ ಘೋಷಣೆ ಕೂಗಲಾಯಿತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights