ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಕಳ್ಳ ಮತದಾನ ಎಂದು ವಿಡಿಯೋ ವೈರಲ್! ವಾಸ್ತವವೇನು?

ಗುಜರಾತ್‌ನಲ್ಲಿ ವೋಟ್ ರಿಗ್ಗಿಂಗ್ ನಡೆದಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವೀಡಿಯೊದಲ್ಲಿ, ಮತಗಟ್ಟೆ ಏಜೆಂಟ್ ಒಬ್ಬ ಮೇಜಿನ ಬಳಿ ಕುಳಿತಿರುವುದನ್ನು ಕಾಣಬಹುದು ಮತ್ತು ನೀಲಿ ಟೀ ಶರ್ಟ್‌ ಧರಿಸಿರುವ  ಇನ್ನೊಬ್ಬ ವ್ಯಕ್ತಿ ಮತಗಟ್ಟೆಗೆ ಪ್ರವೇಶಿಸುತ್ತಾನೆ. ವ್ಯಕ್ತಿಯ ಪರವಾಗಿ EVM (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಬಟನ್‌ಅನ್ನು ಮತಗಟ್ಟೆ ಏಜೆಂಟ್ ಒತ್ತುತ್ತಿರುವುದನ್ನು ಕಾಣಬಹುದು.

ಮೊದಲ ಹಂತದ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆದಿತ್ತು. ಸುಮಾರು 60% ಮತದಾನವಾಗಿದೆ. ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಾಳೆ  ನಡೆಯಲಿದೆ. ಗುಜರಾತ್‌ನಲ್ಲಿ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಈ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು , “ಇದು @BJP4India & @BJP4Gujarat ನ ನಿಜವಾದ ಮುಖವಾಗಿದೆ, ಈ ಜನರು ಇಂತಹ ನೀಚ ಕೃತ್ಯಗಳನ್ನು ಮಾಡುವ ಮೂಲಕ ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ, ಅವರು EVMಗಳನ್ನು ಹೇಗೆ ನಿರ್ವಹಿಸುತ್ತಾರೆ, ಇದು ಪ್ರಜಾಪ್ರಭುತ್ವದ ಅಣಕು” ಎಂದು ಬರೆದಿದ್ದಾರೆ.

ಹಲವಾರು ಇತರ ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಗುಜರಾತ್ ಚುನಾವಣೆಯಲ್ಲಿ ರಿಗ್ಗಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಪೋಸ್ಟ್‌ನ ಆರ್ಕೈವ್ ಅನ್ನು ನೋಡಲು ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನರು ಬಾಂಗ್ಲಾ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ನೋಡಬಹುದು. ಇದನ್ನು ಕ್ಯೂ ಆಗಿ ತೆಗೆದುಕೊಂಡು,  ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊದ ಕೀಫ್ರೇಮ್‌ನ ರಿವರ್ಸ್ ಇಮೇಜ್  ಸರ್ಚ್ ನಡಸಿದಾಗ. 27 ಫೆಬ್ರವರಿ 2022 ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐಎಂ) ಪೋಸ್ಟ್ ಮಾಡಿದ ವೀಡಿಯೊ ಲಭ್ಯವಾಗಿವೆ. ಎರಡೂ ಪಕ್ಷಗಳು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವೋಟ್ ರಿಗ್ಗಿಂಗ್ ಎಂದು ಆರೋಪಿಸಿದ್ದವು.

ಫೆಬ್ರವರಿ 27 ರಂದು ಟಿವಿ9 ಬಾಂಗ್ಲಾ ಪ್ರಕಟಿಸಿದ ವೀಡಿಯೊವನ್ನು ಕಂಡುಕೊಂಡಿದ್ದು. 2022 ರ ಪಶ್ಚಿಮ ಬಂಗಾಳದ ಮುನ್ಸಿಪಲ್ ಚುನಾವಣೆಯ ಸಮಯದಲ್ಲಿ, ದಕ್ಷಿಣ ಡಮ್ಡಮ್‌ನ 33, ವಾರ್ಡ್ ಸಂಖ್ಯೆ 108 ರ ಬೂತ್ ನಂ.108 ರಲ್ಲಿ ಏಜೆಂಟ್ ಮತ ಚಲಾಯಿಸುತ್ತಿದ್ದರು ಎಂದು ವಿಡಿಯೋ ವರದಿ ತಿಳಿಸಿದೆ.

ವೀಡಿಯೋವನ್ನು ಮತ್ತೊಂದು ಬಂಗಾಳಿ ಡಿಜಿಟಲ್ ಚಾನೆಲ್ ‘ಆರೋಹಿ ನ್ಯೂಸ್’ ಫೆಬ್ರವರಿ 27 ರಂದು ಪ್ರಕಟಿಸಿತು. ದಕ್ಷಿಣ ಡುಮ್‌ಡಮ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಪಶ್ಚಿಮ ಬಂಗಾಳದ ಮುನ್ಸಿಪಲ್ ಚುನಾವಣೆಯದ್ದು ಎಂದು ಸ್ಪಷ್ಟವಾಗಿದೆ. ಈ ದೃಶ್ಯಳಿಗೂ ಗುಜರಾತ್‌ಗೂ ಸಂಬಂಧವಿಲ್ಲ. ಹಾಗಾಗಿ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆಯಲ್ಲಿ ಅಕ್ರಮ ನಡೆದಿದೆ ಎಂದು ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್‌ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಭಾಷಣ ಮಾಡುವಾಗ ಮೂಕಾಭಿನಯ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights