ಫ್ಯಾಕ್ಟ್‌ಚೆಕ್: ಮೋದಿ ವಿಕಾಸ ಪುರುಷನಲ್ಲ, ವಿನಾಶ ಪುರುಷ ಎಂದು ಉಮಾ ಭಾರತಿ ಹೇಳಿದರೇ?

ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನಕ್ಕೆ ತಯಾರಿ ನಡೆಸುತ್ತಿರುವಾಗ, ಭಾರತೀಯ ಜನತಾ ಪಕ್ಷದ (BJP) ನಾಯಕಿ ಉಮಾಭಾರತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು “ವಿನಾಶ ಪುರುಷ” ಅಥವಾ “ವಿನಾಶದ ಮನುಷ್ಯ” ಎಂದು ಕರೆದಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಪತ್ರಿಕಾಗೋಷ್ಟಿ( ವೀಡಿಯೊದಲ್ಲಿ)ಯ ವೇಳೆ ಉಮಾ ಭಾರತಿ ಅವರು ಮೋದಿಯನ್ನು ಟೀಕಿಸುವುದನ್ನು ಕೇಳಬಹುದು.

“ನಾನು ಅವರನ್ನು 1973 ರಿಂದ ಬಲ್ಲೆ. ಅವರು ವಿಕಾಸ್ ಪುರುಷ ಅಲ್ಲ, ಅವರು ವಿನಾಶ ಪುರುಷ. ಜಿಡಿಪಿ ಬೆಳವಣಿಗೆ ಮತ್ತು ಬಿಪಿಎಲ್‌ನಿಂದ ಎಪಿಎಲ್ ಹಂತಕ್ಕೆ ಜನರ ಜೀವನವನ್ನು ಉತ್ತಮ ಪಡಿಸುವ ಅವರ ಆಶ್ವಾಸನೆ ಹುಸಿಯಾಗಿದೆ. ಗುಜರಾತಿನಲ್ಲಿ ರಾಮನೂ ಇಲ್ಲ, ರೊಟ್ಟಿಯೂ ಇಲ್ಲ. ಅದನ್ನು ವಿನಾಶ ಪುರುಷನಿಂದ ಮುಕ್ತಗೊಳಿಸಬೇಕು. ಮೋದಿಯನ್ನು ಇಷ್ಟು ದೊಡ್ಡದಾಗಿ ಮಾಡಿದ್ದು ಮಾಧ್ಯಮಗಳು” ಎಂದು ಉಮಾ ಭಾರತಿ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಅಂತಹ ಒಂದು ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಇದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್‌ನಲ್ಲಿ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಜುಲೈ 27, 2011 ರಂದು ಹಂಚಿಕೊಳ್ಳಲಾದ YouTube ನಲ್ಲಿ ಅದೇ ವಿಡಿಯೋ ಲಭ್ಯವಾಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಂಡಿದ್ದು. ಈ ವೀಡಿಯೊ ಒಂದು ದಶಕಕ್ಕೂ ಹೆಚ್ಚು ಹಳೆಯದು ಎಂದು ಇಂಡಿಯಾ ಟುಡೇ ಕಂಡುಹಿಡಿದಿದೆ. ಮತ್ತು ಉಮಾ ಭಾರತಿ ಈ ಹೇಳಿಕೆ ನೀಡಿದ ಸಮಯದಲ್ಲಿ ಉಮಾ ಭಾರತಿ  BJPಯಿಂದ ಹೊರಗಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮಾಧ್ಯಮ ವರದಿಗಳ ಪ್ರಕಾರ, 2014 ರ ಲೋಕಸಭಾ ಚುನಾವಣೆಯ ಮೊದಲು, ಅದೇ ವೀಡಿಯೊವನ್ನು ಕಾಂಗ್ರೆಸ್ ನಾಯಕರು  ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿಯವರನ್ನು ಟೀಕಿಸಲು ಹಂಚಿಕೊಂಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ವೀಡಿಯೊವನ್ನು ಪ್ರದರ್ಶಿಸುವಾಗ, ಅಂದಿನ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು ಆ ಹೇಳಿಕೆಗಳನ್ನು ಮಾಡುವಾಗ ಉಮಾ ಭಾರತಿ BJPಯಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2005 ರಲ್ಲಿ BJP ಪಕ್ಷದ ಅಧ್ಯಕ್ಷರಾಗಿದ್ದ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರೊಂದಿಗೆ ಸಾರ್ವಜನಿಕ ವಾಗ್ವಾದದ ನಂತರ ಅಶಿಸ್ತಿನ ಕಾರಣಕ್ಕಾಗಿ ಉಮಾ ಭಾರತಿ ಅವರನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು. ಅವರು ಪಕ್ಷದ ಶಿಸ್ತು ಮುರಿದಿದ್ದಾರೆ ಎಂದು ಹೇಳುವ ಮೂಲಕ ಅಡ್ವಾಣಿ ಭಾರತಿ ಅವರನ್ನು ಪದಚ್ಯುತಗೊಳಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೆ ಪ್ರತಿಯಾಗಿ ಭಾರತಿ ಭಾರತೀಯ ಜನಶಕ್ತಿ ಪಕ್ಷ ಎಂಬ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ, ಪಕ್ಷವು ಸಾರ್ವಜನಿಕ ಬೆಂಬಲವನ್ನು ಗಳಿಸಲು ವಿಫಲವಾಯಿತು ಮತ್ತು ಭಾರತಿ ಜೂನ್ 2011 ರಲ್ಲಿ ಬಿಜೆಪಿಗೆ ಮರಳಿದರು. 2014 ರಲ್ಲಿ ಅವರು ಝಾನ್ಸಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು ಮತ್ತು ಮೇ 26, 2014 ರಿಂದ 2017 ಸೆಪ್ಟೆಂಬರ್ 1 ರವರೆಗೆ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು.

ಪತ್ರಕರ್ತ ರಜತ್ ಶರ್ಮಾ ಅವರ ಆಪ್ ಕಿ ಅದಾಲತ್ ಕಾರ್ಯಕ್ರಮದ ವೈರಲ್ ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಭಾರತಿ ಅವರನ್ನು ಕೇಳಿದಾಗ, ಅವರು ಭಾರತೀಯ ಜನಶಕ್ತಿ ಪಕ್ಷದ ಭಾಗವಾಗಿದ್ದಾಗ ನಿಜವಾಗಿಯೂ ಆ ವಿಷಯಗಳನ್ನು ಹೇಳಿದ್ದರು ಎಂದು ಹೇಳಿದ್ದಾರೆ. ಸಂಚಿಕೆಯನ್ನು ಇಂಡಿಯಾ ಟಿವಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಜುಲೈ 11, 2015 ರಂದು ಹಂಚಿಕೊಂಡಿದೆ.

2014 ರ ಎನ್‌ಡಿಟಿವಿ ವರದಿಯ ಪ್ರಕಾರ, BJP ಪಕ್ಷದಿಂದ ಉಚ್ಚಾಟಿಸಿದ ನಂತರ ಈ ಹೇಳಿಕೆ ನೀಡಿದ್ದೆ ಎಂದು ಭಾರತಿ ಹೇಳಿದ್ದಾರೆ.ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭಾರತಿ ಅವರ ವಿಡಿಯೋ 10ವರ್ಷದ ಹಳೆಯ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮತ್ತು ಉಮಾ ಭಾರತಿ ಅವರು ಹೇಳಿರುವಂತೆ BJPಯಿಂದ ಉಚ್ಚಾಟನೆಯಾದ ಸಂದರ್ಭದಲ್ಲಿ ಈ ಹೇಳಿಕೆ ನೀಡಲಾಗಿದೆ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಜರಾತ್‌ನ BJP ಪಕ್ಷಕ್ಕೆ ಮತಹಾಕಬೇಡಿ ಎಂದು ಹಾರ್ದಿಕ್ ಪಟೇಲ್ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights