ಕಳ್ಳನನ್ನು ಬಂಧಿಸಿದ್ದ 22 ಪೊಲೀಸರಿಗೂ 14 ದಿನಗಳ ಬಂಧನ!
ಕಬ್ಬಿಣ ಕದಿಯುತ್ತಿದ್ದ ಕಳ್ಳನನ್ನು ಕಷ್ಟಪಟ್ಟು ಹಿಡಿದಿದ್ದ 22 ಪೊಲೀಸರೂ 14 ದಿನಗಳ ಬಂಧನಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಭೀತಿಯಿಂದಾಗಿ ಕಳ್ಳನನ್ನು ಬಂಧಿಸಿದ್ದ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ಜೆಜೆ ನಗರದ ನಿವಾಸಿಯೊಬ್ಬನನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಂಧಿತನನ್ನು ಜೈಲಿಗೆ ಕಳಿಸುವ ಮುನ್ನ ಪೊಲೀಸರು ಆತನಿಗೆ ಕೊರೋನಾ ಪರೀಕ್ಷೆ ಮಾಡಿಸಿದ್ದರು.
ಕೊರೋನಾ ಪರೀಕ್ಷೆಯಲ್ಲಿ ಕಳ್ಳನಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಇದೀಗ ಪೊಲೀಸರು ಕೊರೋನಾ ಭೀತಿಗೆ ಒಳಗಾಗಿದ್ದಾರೆ. ಹೀಗಾಗಿ 22 ಪೊಲೀಸರು ಸದ್ಯಕ್ಕೆ ಕ್ವಾರಂಟೈನ್ ಮಾಡಲಾಗಿದೆ.
ಪೊಲೀಸರನ್ನು ಹೆಬ್ಬಗೋಡಿಯ ಲಾರ್ಡ್ಜ್ ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

