ಕಪ್ಪು ವರ್ಣೀಯನ ಹತ್ಯೆ; ಹಿಂಸಾಚಾರಕ್ಕೆ ತುತ್ತಾದ ಅಮೆರಿಕಾ!

ಕಪ್ಪು ವರ್ಣೀಯ ವ್ಯಕ್ತಿ ಫ್ಲೋಯ್ಡ್ ಸಾವು ಖಂಡಿಸಿ ಅಮೆರಿಕಾದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನೆ ಜೊತೆಗೆ ಭಾರಿ ಪ್ರಮಾಣದ ಹಿಂಸಾಚಾರ ನಡೆಯುತ್ತಿದೆ.

ಡಲ್ಲಾಸ್‌ನ ಪೊಲೀಸರು ಜಾರ್ಜ್‌ ಪ್ಲೋಯ್ಡ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಅಮೆರಿಕಾ ಜನರು ಪೊಲೀಸರ ವಿರುದ್ಧ ಅಮೆರಿಕಾ ಅಧ್ಯಕ್ಷರ ಗೃಹ ಕಚೇರಿ ವೈಟ್ ಹೌಸ್ ಎದುರು ಶುಕ್ರವಾರ ರಾತ್ರಿ (ಅಮೆರಿಕಾ ಕಾಲಮಾನ) ಬೃಹತ್ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಹಿಂಸಾಚಾರಕ್ಕೆ ತಿರುಗಿದೆ.

ಈ ವೇಳೆ, ಅಮೆರಿಕದ ಸೀಕ್ರೆಟ್ ಸರ್ವಿಸ್ ಎಚ್ಚರ ವಹಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆಲ ಕಾಲ ಅಂಡರ್​ಗ್ರೌಂಡ್ ಬಂಕರ್​ನಲ್ಲಿ ಸುಕ್ಷಿತವಾಗಿರಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೇ ಫೋಯ್ಜ್ ಹತ್ಯೆಗೆ ಕಾರಣವೆಂಬ ಆರೋಪ ಹೊತ್ತಿರುವ ಡೆರಿಕ್ ಚುವಿನ್ ಬಂಧಿಸಲಾಗಿದ್ದು, ಘಟನೆ ನಡೆದಾಗ ಆತನ ಜೊತೆಯಿದ್ದ ಇನ್ನೂ ನಾಲ್ವರು ಪೊಲೀಸರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಅಲ್ಲಿನ ಸರ್ಕಾರ ಹಲವಡೆಗೆ ಕರ್ಫ್ಯೂ ಜಾರಿ ಮಾಡಿದ್ದು,  30ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಕರ್ಫ್ಯೂ ಉಲ್ಲಂಘಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

Being Black In America Today: Share Your Experience | NCPR News

ಡಲ್ಲಾಸ್ ನಲ್ಲಿ ಮಳಿಗೆಯೊಂದನ್ನು ಲೂಟಿ ಮಾಡಿದ ಗುಂಪೊಂದು ಅದನ್ನು ತಡೆಯಲು ಬಂದ ಅಂಗಡಿ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಇನ್ನು ವಾಷಿಂಗ್ಟನ್ ಡಿಸಿಯಲ್ಲಿನ ಐಫೋನ್ ಮಳಿಗೆಯನ್ನು ದುಷ್ಕರ್ಮಿಗಳ ಗುಂಪು ಕೆಲವೇ ನಿಮಿಷಗಳಲ್ಲಿ ಲೂಟಿ ಮಾಡಿಕೊಂಡು ಪರಾರಿಯಾಗಿದೆ. ಇನ್ನು ಎರಡು ಪ್ರಕರಣಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.

ಪ್ರತಿಭಟನೆ, ಹಿಂಸಾಚಾರದ ವರದಿಗೆ ಹೋಗಿದ್ದ ಪತ್ರಕರ್ತರ ಮೇಲೂ ದಾಳಿ ನಡೆಸಲಾಗಿದೆ. ಲಾಸ್ ಏಂಜಲೀಸ್ ನಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹಾರಿಸಿದ ರಬ್ಬರ್ ಗುಂಡು, ಖ್ಯಾತ ನಟ ಕೆಂಡ್ರಿಕ್ ಸ್ಯಾಂಪ್ಸನ್’ಗೆ ತಗುಲಿದ ಘಟನೆಯೂ ನಡೆದಿದೆ.

ಹಿಂಸಾಚಾರ ತಡೆಯಲು ಹಲವು ಪ್ರದೇಶಗಳಲ್ಲಿ ನ್ಯಾಷನಲ್ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ. ಈ ವರೆಗೆ ಹಿಂಸೆಯಲ್ಲಿ ತೊಡಗಿದ್ದ 1500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights