ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪೋಸ್ಟ್‌‌ ಡಿಲೀಟ್ ಮಾಡಿದ ಟ್ವಿಟರ್

ಮೇ 25ರಂದು ಪೊಲೀಸ್‌ ಕಸ್ಟಡಿಯಲ್ಲಿ ಹತ್ಯೆಯಾಗಿದ್ದ ಕಪ್ಪು ವರ್ಣೀಯ ಜಾರ್ಜ್‌ ಪ್ಲಾಯ್ಡ್‌ನ ಸಾವಿಗೆ ಸಂತಾಪದ ಗೌರವ ಸೂಚಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಟ್ವಿಟರ್‌ ಖಾತಿಯಲ್ಲಿ ಹಂಚಿಕೊಂಡಿದ್ ವಿಡಿಯೋವನ್ನು ಟ್ವಿಟರ್‌ ಡಿಲೀಟ್‌ ಮಾಡಿದೆ.

ಕಾಪಿರೈಟ್‌ ಸಮಸ್ಯೆಯಿಂದ ವಿಡಿಯೋವನ್ನು ಟಿಲೀಟ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿರುವ 3 ನಿಮಿಷ 45 ಸೆಕೆಂಡ್‌ಗಳ ವಿಡಿಯೋವನ್ನು ಟ್ರಂಪ್‌ ಅವರು ಜೂನ್‌ 3 ರಂದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು (ಪ್ಲಾಯ್ಡ್‌ ಹತ್ಯೆಯಾದ 08 ದಿನಗಳ ಬಳಿಕ).

ಟ್ವಿಟರ್ ಆ ವಿಡಿಯೋವನ್ನು ಡಿಲೀಟ್‌ ಮಾಡಿರುವುದಲ್ಲದೆ, ಈ ಮೊದಲು ಟ್ರಂಪ್‌ ಹಂಚಿಕೊಂಡಿದ್ದ ಹಲವಾರು ಟ್ವೀಟ್‌ಗಳಲ್ಲಿ ನಾನಾ ರೀತಿಯ ಲೇಬಲ್‌ಗಳನ್ನು ಅಂಟಿಸಿತ್ತು. ತಮ್ಮ ಪ್ರಚಾರಕ್ಕಾಗಿ ಹಾಗೂ ಜನಾಂಗೀಯ ದ್ವೇಷ ಬಿತ್ತುವ ಪ್ರಚೋಧನಾಕಾರಿ ಪೋಸ್ಟ್‌ಗಳನ್ನು ಟ್ವಿಟರ್‌ ಅನುಮತಿಸುವುದಿಲ್ಲ ಎಂದು ಹೇಳಿತ್ತು. ಈ ಬೆನ್ನಲ್ಲೇ ಕಳೆದ ಭಾನುವಾರ (ಮೇ 31) ಸ್ನ್ಯಾಪ್‌ಚಾಟ್‌ ಕೂಡ ಇದೇ ಕಾರಣವನ್ನು ನೀಡಿ ಟ್ರಂಪ್‌ ಅವರ ಖಾತೆಯನ್ನು ಸ್ನ್ಯಾಪ್‌ಚಾಟ್‌ ಡಿಸ್ಕವರ್‌ನಿಂದ ತೆಗೆದುಹಾಕಿರುವುದಾಗಿ ಘೋಷಿಸಿದೆ.

ಹೀಗಾಗಿ ಸಾಮಾಜಿಕ ಜಾಲತಾಣ ಕಂಪನಿಗಳು ಟ್ರಂಪ್‌ ಅವರು ತಮ್ಮ ಕಂಪನಿಗಳ ನಿಯಮಾವಳಿಗಳನ್ನು ಉಲ್ಲಂಘಿಸಿ ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಅವರ ಖಾತೆಗಳನ್ನು ನಿಯಂತ್ರಿಸಲು ಆರಂಭಿಸಿವೆ. ಸೋಷಿಯಲ್‌ ಮೀಡಿಯಾ ಕಂಪನಿಗಳ ವಿರುದ್ಧ ಟ್ರಂಪ್‌ ಗುಡುಗಿದ್ದು, ಕಂಪನಿಗಳನ್ನೇ ಮುಚ್ಚಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಆಫ್ರಿಕಾ ಮೂಲಕದ ಅಮೆರಿಕಾ ಪ್ರಜೆ ಜಾರ್ಜ್‌ ಪ್ಲಾಯ್ಡ್‌ ಹತ್ಯೆಯನ್ನು ಜನಾಂಗೀಯ ದೌರ್ಜನ್ಯವೆಂದು ಅಮೆರಿಕಾದ ಪ್ರಜೆಗಳು ಪೊಲೀಸ್‌ ಹಾಗೂ ಆಡಳಿತದ ವಿರುದ್ಧ 10 ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅಧ್ಯಕ್ಷರ ಶ್ವೇತ ಭವನದ ಮುಂದೆ ನಡೆಯುತ್ತಿದ್ದ ಪ್ರತಿಭಟನೆಗೆ ಹೆದರಿ ಟ್ರಂಪ್‌ ಅಂಡರ್‌ಗ್ರೌಂಡ್‌ ಬಂಕರ್‌ನಲ್ಲಿ ಅಡಿಗಿಕೊಂಡಿದ್ದರು. ಅಲ್ಲದೆ, ಇಂದು ಪ್ರತಿಭಟನಾಕಾರರೊಬ್ಬರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ.

10 ದಿನಗಳಾದರೂ ಪ್ರತಿಭಟನೆಯನ್ನು ನಿಯಂತ್ರಿಸಲು ಆಗದೇ ಇರುವುದರಿಂದ ಪ್ರತಿಭಟನೆಯನ್ನು ಹತ್ತಿಕ್ಕಲು ಮಿಲಿಟರಿಯನ್ನು ಕರೆಸುವುದಾಗಿ ಟ್ರಂಪ್‌ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ದಾರೆ. ಬೆದರಿಕೆಗೆ ಬಗ್ಗದ ಜನರು ಪ್ರತಿಭಟನೆಯ್ನು ಮುಂದುವರೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights