ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ; ರೈತರ ಕತ್ತು ಹಿಸುಕಲು ಮುಂದಾಗಿದೆ ಸರ್ಕಾರ

ಈ ದೇಶದಲ್ಲಿ ಎಲ್ಲರಿಗೂ ಫಸಲು ಬೆಳೆಯುವ ಹಕ್ಕಿದೆ. ಕೃಷಿ ಭೂಮಿ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಿ ಯುವಕರು ಕೃಷಿಯತ್ತ ಹೆಚ್ಚು ಆಕರ್ಷಿತರಾಗಲಿದ್ದಾರೆ.’ ಕೃಷಿಯಷ್ಟೇ ಅಲ್ಲದೆ, ಆಗ್ರೋ ಇಂಡಸ್ಟ್ರೀಸ್ ಕೂಡ ಮಾಡಬಹುದು. ಇದೆಲ್ಲದಕ್ಕೂ ನೆರವಾಗುವ ಉದ್ದೇಶದಿಂದ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ, ‘ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಉಳ್ಳವರಿಗೆ ಭೂಮಿ, ಶ್ರೀಮಂತರು ಭೂಮಿ ಒಡೆಯರು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರ ಸರ್ಕಾರ ಉಳುವವರನ್ನೇ ಭೂಮಿ ಒಡೆಯರನ್ನಾಗಿ ಮಾಡಿತ್ತು. ಇದರಿಂದಾಗಿ ಕೃಷಿಯಲ್ಲಿದ್ದ ಜೀತಗಾರಿಕೆಯನ್ನು ತೊಡೆದು, ಪ್ರತಿಯೊಬ್ಬರಿಗೂ ಭೂಮಿ ಸಿಗಲು ಸಾಧ್ಯವಾಗಿತ್ತು. ಆದರೆ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶ ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಧಾರೆ ಎರೆಯುವುದಾಗಿದೆ’ ಎಂದು ಆರೋಪಿಸಿದರು.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಭೂ ಮಾಫಿಯಾ ಆರಂಭವಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗುತ್ತದೆ. ಶ್ರೀಮಂತರು ಭೂಮಿ ಖರೀದಿ ಮಾಡಿ ಭೂ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಿ ಭೂಮಿ ಕಳೆದುಕೊಂಡು ಅವರು ಕೃಷಿ ಕೂಲಿ ಕಾರ್ಮಿಕರಾಗುತ್ತಾರೆ. ಒಂದಷ್ಟು ಭೂಮಿಯಿರುವ ಸ್ವಾವಲಂಭಿಯಾಗಿ ಬದುಕುತ್ತಿರುವ  ಕೃಷಿಕರನ್ನು ನಿರ್ಗತಿಕರನ್ನಾಗಿಸಲು ಸರ್ಕಾರ  ಮುಂದಾಗಿದೆ. ಹಾಗಾಗಿ ರೈತರ ಹಕ್ಕು ಮತ್ತು ಸ್ವಾವಲಂಭನೆಯನ್ನು ಉಳಿಸಲು  ಸಂಪುಟದ ನಿರ್ಣಯವನ್ನು ವಿರೋಧಿಸಬೇಕಾಗಿದೆ. ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಲ್ಲದೆ, ಕೃಷಿ ಸಚಿವರು ಹೇಳುವಂತೆ ಯುವಜನರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಅವರೆಲ್ಲರೂ ಕೃಷಿ ಮಾಡಬೇಕು ಎಂದು ಹೇಳಿರುವುದು ಸತ್ಯವೇ. ಆದರೆ, ಇಂದು ವಿದ್ಯಾಭ್ಯಾಸ ಮುಗಿಸಿದ ಯುವಜನರು, ಶಿಕ್ಷಣವನ್ನು ಆರ್ಧಕ್ಕೆ ಕಡಿತಗೊಳಿಸಿದವರೂ ಸೇರಿದಂತೆ ದುಡಿಯುವ ಶಕ್ತಿ ಇರುವವರೆಲ್ಲರೂ ಹಳ್ಳಿ ಬಿಟ್ಟು ಪಟ್ಟಣಗಳಿಗೆ ವಲಸೆ ಬರುತ್ತಿರುದ್ದಾರೆ. ಇವರಲ್ಲಿ ಈಗಾಗಲೇ ಕೃಷಿ ಭೂಮಿಯನ್ನು ಹೊಂದಿರುವವರೂ ಇದ್ದಾರೆ. ಜನರು ಹಳ್ಳಿ ಬಿಡುತ್ತಿರುವುದು ಕೃಷಿ ಮೇಲೆ ಒಳವಿಲ್ಲದ ಕಾರಣಕ್ಕಾಗಿ ಅಲ್ಲ. ಕೃಷಿಯಿಂದ ಬದುಕು ದುಸ್ಥರವೆಂದು ಭಾವಿಸಿದ್ದಾರೆ. ಹಾಗಾಗಿ ಸರ್ಕಾರಗಳು ಕೃಷಿಗೆ ಉತ್ತೇಜನ ನೀಡಬೇಕು. ಬೆಂಬಲ ಬೆಲೆ ನೀಡಬೇಕು. ಕೃಷಿ ಪೂರಕ ನೀತಿಗಳು ಜಾರಿಯಾಗಬೆಕು.

ಇದೆಲ್ಲವನ್ನೂ ಬಿಟ್ಟು, ಭೂಸುಧಾರಣಾ ಕಾಯ್ಡೆಗೆ ತಿದ್ದುಪಡಿ ತರುವುದರಿಂದ ಯುವಜನರು ಕೃಷಿ ಮಾಡುತ್ತಾರೆ ಎಂದು ಕೃಷಿ ಸಚಿವರು ತಮ್ಮ ದಡ್ಡತನವನ್ನೂ, ಅತಿ ಬುದ್ದಿವಂತಿಯನ್ನೂ ಏಕಕಾಲದಲ್ಲಿ ಪ್ರದರ್ಶಿಸುತ್ತಿದ್ದಾರೆ. ಕಾರ್ಪೋರೇಟ್ ಖದೀಮರಿಗೆ ಅವಕಾಶ ಮಾಡಿಕೊಡಲು, ಕೃಷಿ ಉತ್ತೇಜನದ ಮಾತನಾಡುತ್ತಿರುವುದು ಸರ್ಕಾರ ರೈತ ವಿರೋಧಿ ಧೋರಣೆಯನ್ನು ಎತ್ತಿ ಹಿಡಿಯುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights