KPCC : ರಾಜ್ಯ ರಾಜಕಾರಣಕ್ಕೆ ಹರಿಪ್ರಸಾದ್ ಪ್ರವೇಶ, ಕೈ ಗುಂಪುಗಾರಿಕೆಗೆ ಹೊಸ ಆಯಾಮ…

ರಾಜ್ಯ ಕಾಂಗ್ರೆಸ್ ಬಣ ರಾಜಕೀಯಕ್ಕೆ  ಹೊಸ ರಂಗು ಬಂದಿದೆ.  ಯಾವಾಗಲು ಹೈಕಮಾಂಡನಲ್ಲಿಂದುಕೊಂಡು ರಾಜಕೀಯ ಮಾಡುತ್ತಿದ್ದ  ಹರಿಪ್ರಸಾದ್ ಪ್ರವೇಶದಿಂದ ಕೈ ಗುಂಪುಗಾರಿಕೆಗೆ ಹೊಸ ಆಯಾಮ ದೊರೆತಿದೆ… ವಿಧಾನ ಪರಿಷತ್ತಿನ ಮೂಲಕ ರಾಜ್ಯ ರಾಜಕಾರಣಕ್ಕೆ ಹರಿಪ್ರಸಾದ್ ಪ್ರವೇಶ ಕಾಂಗ್ರೆಸ್‌ನ ಗುಂಪುಗಾರಿಕೆ ರಾಜಕಾರಣಕ್ಕೆ ಹೊಸ ರೂಪ ನೀಡಿದೆ.

ವಿವಿಧ ಬಣಗಳಲ್ಲಿ ಚದುರಿಹೋಗಿರುವ ಕಾಂಗ್ರೆಸಿನಲ್ಲಿ ಹರಿಪ್ರಸಾದ್ ಆಗಮನದಿಂದಾಗಿ ಮತ್ತೊಂದು ಬಣದ ಸೃಷ್ಟಿಗೆ ಅವಕಾಶ ನೀಡಿದಂತಾಗಿದೆ ಎಂದು ಕಾಂಗ್ರೆಸ್ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.  ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ವಲಸಿಗರು-ಮೂಲ ನಿವಾಸಿಗಳು… ಹೀಗೆ ನಾನಾ ಬಣಗಳು ರಾಜ್ಯ ಕಾಂಗ್ರೆಸನ್ನು ಆವರಿಸಿದೆ.

Cong fields Hariprasad from B'lore South - Mangalorean.com

ರಾಜ್ಯ ರಾಜಕಾರಣದಿಂದ ದೇಶದ ರಾಜಕಾರಣಕ್ಕೆ ಪ್ರವೇಶ ಕೊಟ್ಟ ನಂತರ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಕೊಂಚ ಬಲ ಕಳೆದುಕೊಂಡಿದ್ದರು. ಹೈಕಮಾಂಡಿನ ವಿಶ್ವಾಸ ಇರುವ ನಾಯಕರಾಗಿದ್ದ ಕಾರಣ ಅವರ ಮಾತಿಗ ಬೆಲೆ ಇತ್ತಾದರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರಲು ಸಾಧ್ಯವಿರಲಿಲ್ಲ.

ಆದರೆ, ಹರಿಪ್ರಸಾದ್ ಆಗಮನದಿಂದ ಇದು ಸಾಧ್ಯವಾಗಬಲ್ಲುದು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಸಿದ್ದು ಅಥವಾ ಡಿಕೆಶಿ ಮಾತು ಪಕ್ಕಕ್ಕಿಟ್ಟು ಖರ್ಗೆ ಅವರ ಮಾತಿಗೆ ಬೆಲೆ ನೀಡಿ ಹರಿಪ್ರಸಾದ್‌ಗೆ ಹೈಕಮಾಂಡ್ ಮಣೆ ಹಾಕಿರುವುದೇ ಇದಕ್ಕೆ ಸಾಕ್ಷಿ ಎನ್ನುತ್ತಿವೆ ಮೂಲಗಳು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ನಜೀರ್ ಅಹ್ಮದ್‌ಗೂ ಹೈಕಮಾಂಡ್‌ ಮಣೆ ಹಾಕಿರುವುದರಿಂದ ಸಿದ್ದು ಬಲ ಕಡಿಮೆಯಾಗಿದೆ ಎಂದು ಇಗಲೇ ಹೇಳಲು ಬಾರದು, ಜೊತೆಗೆ ಡಿಕೆಶಿ ತನ್ನದೆ ಲೆಕ್ಕಾಚಾರದಲ್ಲಿ ಮುನ್ನಡೆಯುತ್ತಿದ್ದಾರೆ…

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳುರು ದಕ್ಷಿಣದಿಂದ ಸ್ಪರ್ಧೆ ಂಆಡಿದ್ದ ಹರಿಪ್ರಸಾದ್ ಸೋಲನುಭವಿಸಿದ್ದರು. ಸುದೀರ್ಘ ಅವಧಿಗೆ ರಾಜ್ಯ ಸಭಾ ಸದಸ್ಯರಾಗಿದ್ದ ಹರಿ ಅವರ ಸದಸ್ಯತ್ವದ ಅವಧಿ ಮಾಸಾಂತ್ಯಕ್ಕೆ ಕೊನೆಗೊಳ್ಳಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights