ಕೊರೊನಾ ಸೋಂಕಿಗೆ ಒಳಗಾಗಿದ್ದ ಶಾಸಕ ಸಾವು!

ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಶಾಸಕ ತಮೋನಾಶ್ ಘೋಷ್‌ ಅವರು ಇಂದು (ಬುಧವಾರ) ನಿಧನರಾಗಿದ್ದಾರೆ.

ಘೋಷ್ ಅವರು ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು. ಅಲ್ಲದೆ, ಅವರು 1998 ರಿಂದ ಪಕ್ಷದ ಖಜಾಂಚಿಯಾಗಿದ್ದರು.

ಸೋಂಕಿನಿಂದ ಸಾವನ್ನಪ್ಪಿದ ಘೋಷ್‌ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಸಂತಾಪ ಸೂಚಿಸಿದ್ದಾರೆ.

“ಬಹಳ ದುಃಖಕರ ಸಾವು. ಫಾಲ್ಟಾದಿಂದ ಮೂರು ಬಾರಿ ಶಾಸಕರಾಗಿದ್ದ ಮತ್ತು 1998 ರಿಂದ ಪಕ್ಷದ ಖಜಾಂಚಿಯಾಗಿರುವ ತಮೋನಾಶ್ ಘೋಷ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. 35 ವರ್ಷಗಳಿಂದ ನಮ್ಮೊಂದಿಗಿದ್ದ ಅವರು, ಜನರು ಮತ್ತು ಪಕ್ಷದ ಹಿತದೃಷ್ಟಿಯಿಂದ ತೊಡಗಿಸಿಕೊಂಡಿದ್ದರು. ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ” ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

“ಮೂರು ಬಾರಿ ಫಾಲ್ಟಾ ಶಾಸಕ ತಮೋನಾಶ್ ಘೋಷ್ ಅವರ ಅಗಲಿಕೆಯಿಂದ ದುಃಖವಾಗಿದೆ. ಅವರು ಅನುಭವಿ ನಾಯಕರಾಗಿದ್ದು, ಮುಂದಿನ ದಿನಗಳಲ್ಲಿ ಭರವಸೆಯ ಭವಿಷ್ಯವನ್ನು ಹೊಂದಿದ್ದರು. ನಮ್ಮನ್ನಗಲಿದ ಅವರ ಆತ್ಮಕ್ಕೆ ಸರ್ವಶಕ್ತನು ಶಾಂತಿಯನ್ನು ನೀಡಿ. ಅವರ ಪತ್ನಿ, ಇಬ್ಬರು ಪುತ್ರಿಯರು, ಸ್ನೇಹಿತರು ಮತ್ತು ಹಿತೈಷಿಗಳಿಗೆ ದುಃಖವನ್ನು ತುಂಬುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ರಾಜ್ಯಪಾಲ ಧಂಖರ್ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ಸೋಮವಾರದ ವರೆಗೆ ಕೊರೊನಾ ಸೋಂಕಿನಿಂದ 580 ಜನರು ಸಾವನ್ನಪ್ಪಿದ್ದಾರೆ. 14,728 ರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights