ಬಾಲಿವುಡ್‌ ನಟಿ, ಗಾಯಕಿ ದಿವ್ಯಾ ಚೌಕ್ಸಿ ನಿಧನ!

ಒಂದೂವರೆ ವರ್ಷಗಳಿಂದ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ನಟಿ ಮತ್ತು ಗಾಯಕಿ ದಿವ್ಯಾ ಚೌಕ್ಸಿ ಅವರು ಭಾನುವಾರ ನಿಧನರಾಗಿದ್ದಾರೆ.

28 ​​ವರ್ಷ ವಯಸ್ಸಿನ ದಿವ್ಯಾ, ಅವರ ನಿವಾಸವಿರುವ ಭೋಪಾಲ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಕೆಯ ಸ್ನೇಹಿತ, ನಿರ್ದೇಶಕ ಮೊಂಜಾಯ್‌ ಮುಖರ್ಜಿ ತಿಳಿಸಿದ್ದಾರೆ.

“ಅವರು ಸುಮಾರು ಒಂದೂವರೆ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದಿದ್ದರಿಂದಾಗಿ ಮುಣಮುಖರಾಗಿದ್ದರು. ಆದರೆ,  ಕೆಲವು ತಿಂಗಳುಗಳ ನಂತರ ಕ್ಯಾನ್ಸರ್‌ ಮತ್ತೆ ಕಾಣಿಸಿಕೊಂಡಿತ್ತು. ಈ ಬಾರಿ ರೋಗದಿಂದ ಹೊರಬರಲು ಸಾಧ್ಯವಾಗಲಿಲ್ಲ” ಎಂದು ಮೊಂಜಾಯ್‌ ತಿಳಿಸಿದ್ದಾರೆ.

2016 ರಲ್ಲಿ  “ಹೈ ಅಪ್ನಾ ದಿಲ್ ತೋಹ್ ಆವಾರಾ” ಸಿನಿಮಾದಲ್ಲಿ ದಿವ್ಯಾ ನಾಯಕ ನಟಿಯಾಗಿ ನಟಿಸಿದ್ದರು. ಅದೇ ಸಿನಿಮಾಗೆ ಮೊಂಜಾಯ್‌ ನಿರ್ದೇಶನ ಮಾಡಿದ್ದರು. ಇದು ಮೊಂಜಾಯ್‌ ಅವರ ಮೊದಲ ನರ್ದೇಶಿತ ಸಿನಿಮಾವಾಗಿದ್ದು, ಈ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಅವರೊಂದಿಗೆ ಕೆಲಸ ಮಾಡಿದ, ಒಡನಾಟದ ನೆನಪುಗಳನ್ನು ಮರೆಯಲಾಗದು. ದಿವ್ಯಾ ಅವರ ಸಾವು ಬಹಳ ದುಃಖಕರವಾಗಿದೆ” ಎಂದು ಮೊಂಜಾಯ್ ಹೇಳಿದ್ದಾರೆ.

ದಿವ್ಯಾ ತಮ್ಮ ಸಾವಿನ ಹಿಂದಿನ ದಿನದ ರಾತ್ರಿ (ಶನಿವಾರ) ತಾವು ಡೆತ್‌ ಬೆಡ್‌ನಲ್ಲಿರುವುದಾಗಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

“ನಾನು ಹೇಳಲು ಬಯಸುತ್ತಿರುವುದನ್ನು ತಿಳಿಸಲು ಪದಗಳು ಸಿಗುತ್ತಿಲ್ಲ. ಹೆಚ್ಚು ಕಡಿಮೆ… ತಿಂಗಳಿಂದ ನಾನು ಕಾಣೆಯಾದಂತಾಗಿದ್ದೆ, ಸದ್ಯ ನಾನು ನನ್ನ ಮರಣದಂಡನೆಯಲ್ಲಿದ್ದೇನೆ. ನಾನು ಬಲಶಾಲಿ. ದುಃಖವಿಲ್ಲದ ಮತ್ತೊಂದು ಜೀವನ ಇರಲಿ. ದಯವಿಟ್ಟು ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ, ನೀವು ನನಗೆ ಎಷ್ಟು ಅರ್ಥವಾಗಿದ್ದೀರಿ ಎಂಬುದು ದೇವರಿಗೆ ಮಾತ್ರ ತಿಳಿದಿದೆ” ಎಂದು ಅವರು ಬರೆದಿದ್ದಾರೆ.

g2681d2g

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights