ನಿಜವಾಯ್ತು ಬೈ ಎಲೆಕ್ಷನ್ ಭವಿಷ್ಯ : ಆಡಿದ ಮಾತನ್ನು ಮಾಡಿ ತೋರಿಸಿದ ಡಿಸಿಎಂ ಲಕ್ಷ್ಮಣ ಸವದಿ….

ಡಿಸಿಎಂ ಲಕ್ಷ್ಮಣ ಸವದಿ ಅಥಣಿ ಬೈ ಎಲೆಕ್ಷನ್ ಮತದಾನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದರು. ಅಂದು ಅವರು ಆಡಿದ ಮಾತುಗಳನ್ನು ಈಗ ಮಾಡಿ ತೋರಿಸಿದ್ದಾರೆ. ಡಿ. 5 ರಂದು ತಮ್ಮ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಬಿಕೆ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮತಗಟ್ಟೆ ಸಂಖ್ಯೆ 204ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದ ಲಕ್ಷ್ಮಣ ಸವದಿ ಬೈ ಎಲೆಕ್ಷನ್ ಬಗ್ಗೆ ಮಾತನಾಡಿದ್ದರು.

ಅಥಣಿ ಮತ್ತು ಕಾಗವಾಡ ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸವಾಗಬೇಕು. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಮುಳುಗಡೆ ಪ್ರದೇಶಗಳ ಸ್ಥಳಾಂತರ, ನ್ಯಾ ಸಮ್ಮತ ಪರಿಹಾರ ಸಿಗಬೇಕೆಂದರೆ ಆಆಡಳಿತ ಪಕ್ಷದಿಂದ ಸಾಧ್ಯ. ಅಲ್ಲದೇ, ತಾವು ಕಳೆದ 15-16 ವರ್ಷಗಳಲ್ಲಿ ತಾವು ಈ ಕ್ಸೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮತದಾರರಿಗೆ ಗೊತ್ತಿದೆ. ಬಿಜೆಪಿಯಿಂದ ಮಾತ್ರ ಅಭಿವದ್ಧಿ ಸಾಧ್ಯ ಎಂಬುದು ಮತದಾರರಿಗೆ ಗೊತ್ತಿರುವುದರಿಂದ ಮತ್ತೆ ಇಲ್ಲಿ ಅಭಿವೃದ್ಧಿಯಾಗಬೇಕು ಎಂದು ಮತದಾರರು ಬಿಜೆಪಿ ಕೈ ಹಿಡಿಯಲಿದ್ದಾರೆ ಎಂದು ಅವರು ತಿಳಿಸಿದ್ದರು.

ಅಥಣಿಯಲ್ಲಿ 34 ಸಾವಿರಕ್ಕೂ ಹೆಚ್ಚು ಮಾತಗಳಿಂದ ಗೆಲ್ಲುತ್ತೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ 34 ಸಾವಿರ ಲೀಡ್ ಕೊಟ್ಟಿದ್ದೇವೆ. ಅದಕ್ಕಿಂತದಲೂ ಹೆಚ್ಚು ಮತಗಳಿಂದ ಅಥಣಿಯಲ್ಲಿ ಗೆಲ್ಲುತ್ತೇವೆ. ರಾಜ್ಯದಲ್ಲಿ 12 ರಿಂದ 13 ಸ್ಥಾನಗಳನ್ನು ಗೆಲ್ಲುತ್ತೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಆದ ಗತಿಯೇ ಕಾಂಗ್ರೆಸ್-ಜೆಡಿಎಸ್ ಗೆ ಆಗಲಿವೆ. ಅವರಿಗೆ ಸಮಾಧಾನಕರ ಬಹುಮಾನ ಎಂಬಂತೆ ಒಂದೆರಡು ಸ್ಥಾನ ಬರಬಹುದು. ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ನೀಡಿದ ವಾಗ್ದಾನದಂತೆ ಅಥಣಿ ಮತ್ತು ಕಾಗವಾಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮಹೇಶ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ ಡಿ. 9 ರಂದು ಗೆಲ್ಲಿಸಿಕೊಂಡು ಡಿ. 10 ರಂದು ಇಬ್ಬರೂ ನೂತನ ಶಾಸಕರೊಂದಿಗೆ ವಿಧಾನಸೌಧಕ್ಕೆ ಹೋಗುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಡಿ. 5 ರಂದು ಮಾತನಾಡಿ ಭವಿಷ್ಯ ನುಡಿದಿದ್ದರು.

ಡಿ. 5 ರಂದು ಡಿಸಿಎಂ ಲಕ್ಷ್ಮಣ ಸವದಿ ನುಡಿದಿದ್ದ ಭವಿಷ್ಯ ಡಿ. 9 ರಂದು ನಿಜವಾಗಿದೆ. ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಅನರ್ಹ ಶಾಸಕ ಮಹೇಶ ಕುಮಟಳ್ಳಿ 39989 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಭರ್ಜಿಯಾಗಿ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲ, ಅಥಣಿಯಲ್ಲಿ ಮಹೇಶ ಕುಮಟಳ್ಳಿ ಮತ್ತು ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ, ಈಗ ಈ ಇಬ್ಬರೂ ಬಿಜೆಪಿ ಶಾಸಕರನ್ನು ವಿಧಾನ ಸೌಧಕ್ಕೆ ಕರೆದುಕೊಂಡು ಹೋಗಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಮೂಲಕ ತಮ್ಮ ವಾಗ್ದಾನವನ್ನು ಈಡೇರಿಸಿರುವುದನ್ನು ಸಾಬೀತು ಪಡಿಸಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights