FACT CHECK | ಟೆನಿಸ್ ತಾರೆ ಸ್ಟೆಫಿ ಗ್ರಾಫ್ ನಿಧನರಾಗಿದ್ದಾರೆ ಎಂಬುದು ಸುಳ್ಳು
“ಟೆನಿಸ್ ಲೋಕ ಕಂಡ ಮೋಹಕ ತಾರೆ ಸ್ಟೆಫಿ ಗ್ರಾಫ್ ಇನ್ನಿಲ್ಲ..” ಎಂಬ ಬರಹದೊಂದಿಗೆ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಅವರ ಚಿತ್ರವನ್ನು ಹಂಚಿಕೊಂಡು ಗ್ರಾಫ್ ಸಾವನ್ನಪ್ಪಿದ್ದಾರೆ ಎಂದು ಹಲವರು ಹಂಚಿಕೊಂಡಿದ್ದಾರೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ನಿಜವಾಗಿಯೂ ಸಾವನಪ್ಪಿದ್ದಾರೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ಯಾವುದೇ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ಇದು ನಿಜವಾಗಿದ್ದಾರೆ ಬಹುತೇಕ ಎಲ್ಲಾ ಮಾಧ್ಯಮಗಳು ವರದಿಯನ್ನು ಮಾಡುತ್ತಿದ್ದವು. ಆದರೆ ಅಂತಹ ಯಾವುದೇ ವರದಿಗಳಾಗಲಿ ಸುದ್ದಿಗಳಲಾಗಲಿ ಲಭ್ಯವಿಲ್ಲ.

ಸ್ಟೆಫಿ ಗ್ರಾಫ್, ಟೆನಿಸ್ ಲೋಕದ ಮೇರು ಆಟಗಾರ್ತಿ, ತಮ್ಮ 22 ಗ್ರ್ಯಾಂಡ್ ಸ್ಲಾಮ್ ಗೆಲುವುಗಳಿಂದ ವಿಶ್ವವಿಖ್ಯಾತರಾಗಿದ್ದಾರೆ ಒಂದು ವೇಳೆ ಅವರ ಜೀವಕ್ಕೆ ಏನಾದರೂ ಸಮಸ್ಯೆಯಾಗಿದ್ದರೆ ಆ ಕುರಿತು ಹಲವು ವೆಬ್‌ತಾಣಗಳು ತಕ್ಷಣವೇ ಮಾಹಿತಿಯನ್ನು ನೀಡುತ್ತಿದ್ದವು, ಹೀಗಾಗಿ ವಿಕಿಪಿಡಿಯಾ ಸೇರಿದಂತೆ ಹಲವು ವೆಬ್‌ತಾಣಗಳನ್ನು ಕೂಡ ಪರಿಶೀಲನೆ ನಡೆಸಿದೆವು. ಸ್ಟೆಫಿ ಗ್ರಾಫ್ ಅವರು ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಯಾವುದೇ ಅಪ್‌ಡೇಟ್ ಲಭ್ಯವಿಲ್ಲ. ಅದೇ ರೀತಿಯಾಗಿ ಎಲ್ಲಾ ವಿದೇಶಿ ಮಾಧ್ಯಮಗಳ ವರದಿಗಳನ್ನು ಪರಿಶೀಲಿಸಿದ್ದೇವೆ. ಅವುಗಳಲ್ಲೂ ಯಾವುದೇ ರೀತಿಯಾದ ಅಧಿಕೃತ ವರದಿಗಳು ಕಂಡು ಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಸ್ಟೆಫಿ ಗ್ರಾಫ್ ನಿಧನ ಹೊಂದಿದ್ದಾರೆ ಎಂಬುದು ಸುಳ್ಳು. ಈ ಕುರಿತು ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ದಾರಿತಪ್ಪಿಸುವಂತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಜೀವ್ ಗಾಂಧಿ ಪುಣ್ಯತಿಥಿಯಲ್ಲಿ ರಾಹುಲ್ ಗಾಂಧಿ ಫೋಟೊ ಇಟ್ಟು ಪೂಜೆ ಮಾಡಿದ್ದು ನಿಜವೇ?

